fbpx

ಸಿ.ಸಿ. ರಸ್ತೆ ಕಾಮಗಾರಿಗೆ ಭೂಮಿ ಪೂಜೆ.

ಕೊಪ್ಪಳ-07- ಗ್ರಾಮೀಣ ನೈರ್ಮಲ್ಯ ಕಾಪಾಡುವಲ್ಲಿ ಸಿ.ಸಿ. ರಸ್ತೆಗಳು ಕೂಡ ತುಂಬಾ ಸಹಕಾರಿಯಾಗಿವೆ.  ಕ್ಷೇತ್ರದ ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವತ್ತ ಮೊದಲ ಆಧ್ಯತೆ ನೀಡಲಾಗಿದೆ ಎಂದು ಶಾಸಕರಾದ ಇಕ್ಬಾಲ್ ಅನ್ಸಾರಿ ಹೇಳಿದರು. ಅವರು ಗುರುವಾರ ಲೋಕೋಪಯೋಗಿ ಇಲಾಖೆಯ ೬೭೮ ಲಕ್ಷ
ನಂತರ ಶಾಸಕರು ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ದಿ ಅನುದಾನದಲ್ಲಿ ೧೪ ಲಕ್ಷ ವೆಚ್ಚದಲ್ಲಿ ಕೂಕನಪಳ್ಳಿ ಸರಕಾರಿ ಪ್ರೌಢಶಾಲೆಯ ಕೊಠಡಿಗಳ ನಿರ್ಮಾಣ ಕಾಮಗಾರಿಗೆ, ೧೦ ಲಕ್ಷ ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪೋಸ್ಟ್ ಮಾರ್ಟಂ ಕೊಠಡಿ ನಿರ್ಮಾಣ ಕಾಮಗಾರಿಗೆ, ಕಲ್ ತಾವರಗೇರಿ ಗ್ರಾಮದಲ್ಲಿ ೧೫ ಲಕ್ಷ ವೆಚ್ಚದ ಸಿ.ಸಿ.ರಸ್ತೆ ಕಾಮಗಾರಿ, ೧೩ ಲಕ್ಷ ವೆಚ್ಚದ ಕುಡಿಯುವ ನೀರಿನ ಘಟಕದ ಕಾಮಗಾರಿಗೆ, ೧೦ ಲಕ್ಷ ವೆಚ್ಚದಲ್ಲಿ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ, ಹಾಲಹಳ್ಳಿಯಲ್ಲಿ ೧೫ ಲಕ್ಷ ವೆಚ್ಚದ ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿಗೆ, ಭೀಮನೂರು ಗ್ರಾಮದಲ್ಲಿ ೧೦ ಲಕ್ಷ ವೆಚ್ಚದದಲ್ಲಿ ಎರಡು ಶುದ್ದ ಕುಡಿಯುವ ನೀರಿನ ಫೀಲ್ಟರ್‌ಗಳ  ಕಾಮಗಾರಿಗೆ, ೨೦ ಲಕ್ಷ ವೆಚ್ಚದ ಸಿ.ಸಿ. ರಸ್ತೆ ಕಾಮಗಾರಿಗೆ, ಕಾಮನೂರು ಗ್ರಾಮದಲ್ಲಿ ೨೫ ಲಕ್ಷ ವೆಚ್ಚದ ಸಿ.ಸಿ. ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

ವೆಚ್ಚದ ಕಾಮನೂರು-ಬೂದಗುಂಪಾ ರಸ್ತೆ ಅಭಿವೃದ್ದಿ ಹಾಗೂ ಡಾಂಬರೀಕರಣ ಕಾಮಗಾರಿಗೆ ದನಗಳದೊಡ್ಡಿ ಗ್ರಾಮದಲ್ಲಿ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು. ಗ್ರಾಮೀಣ ಜನರ ಆರೋಗ್ಯ, ಶಿಕ್ಷಣಕ್ಕೆ ಮಹತ್ವ ನೀಡಿ ಗ್ರಾಮಗಳಲ್ಲಿ ರಸ್ತೆ,ಚರಂಡಿ,ಶುದ್ದ ಕುಡಿಯುವ ನೀರಿನ ಘಟಕಗಳ ಕಾಮಗಾರಿಗೆ ಅನುದಾನ ಮಂಜೂರು ಮಾಡಿಸಲಾಗುತ್ತಿದೆ ಎಂದರು.

Please follow and like us:
error

Leave a Reply

error: Content is protected !!