ಆ.೩೧ ರಂದು ರಾಜ್ಯ ವಕ್ಫ ಮಂಡಳಿ ಅಧ್ಯಕ್ಷರ ಪ್ರವಾಸ

 ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷರಾದ ಡಾ.ಮೊಹ್ಮದ ಯೂಸೂಫ್ ಅವರು ಆ.೩೧ ರಂದು ಒಂದು ದಿನದ ಕೊಪ್ಪಳ ಜಿಲ್ಲಾ ಪ್ರವಾಸವನ್ನು ಹಮ್ಮಿಕೊಂಡಿದ್ದಾರೆ. 
ಅಧ್ಯಕ್ಷರು ಅಂದು ಮಧ್ಯಾಹ್ನ ೩ ಗಂಟೆಗೆ ಕೊಪ್ಪಳ ನಗರದ ವಕ್ಫ್ ಸಂಸ್ಥೆಗಳಾದ ದರ್ಗಾ ಹಜರತ ರಾಜಾಬಾಗ ಸವಾರ ಜವಾಹರ ರಸ್ತೆ, ಮಸ್ಜೀದ-ಎ-ಯೂಸೂಫಿಯಾ ಜವಾಹರ ರಸ್ತೆ, ಮಸ್ಜೀದ-ಎ-ಪೀರ ಪಾಷಾ ಖಾದ್ರಿ ಪಲ್ಟನ್, ದರ್ಗಾ ಹಜರತ ಪೀರ ಪಾಷಾ ಖಾದ್ರಿ ಪಂಜಮ್ ಪಲ್ಟನ್, ದರ್ಗಾ ಹಜರತ್ ಮರ್ದಾನೆ ಗೈಬ್ ಹುಲಿಕೇರಿ ರಸ್ತೆ, ಮುಸ್ಲಿಂ ಖಬರಸ್ತಾನ ೪೭೩, ಮುಸ್ಲಿಂ ಖಬರಸ್ತಾನ ಕಿನ್ನಾಳ ರಸ್ತೆ, ದರ್ಗಾ ಮುನೀರ್ ಷಾವಲಿ ಜಿಲ್ಲಾ ಕ್ರೀಡಾಂಗಣದ ಹತ್ತಿರ ಗದಗ ರಸ್ತೆ ಕೊಪ್ಪಳ ಇವುಗಳ ಪ್ರಗತಿ ಯೋಜನೆಯ ಪರಿಶೀಲನೆಗಾಗಿ ಜಿಲ್ಲೆಗೆ ಆಗಮಿಸುವರು. ಸಂಬಂಧಿಸಿದ ವಕ್ಫ್ ಸಂಸ್ಥೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಮುತ್ತವಲ್ಲಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿರಬೇಕು ಎಂದು ಜಿಲ್ಲಾ ವಕ್ಫ ಸಲಹಾ ಸಮಿತಿ ಅಧ್ಯಕ್ಷ ಮುಸ್ತಫಾ ಕಮಾಲ್ ಪಾಷಾ   ತಿಳಿಸಿದ್ದಾರೆ. 

Related posts

Leave a Comment