ಡಾ.ಬಾಬುಜಗಜೀವನರಾಮ್ ಅವರ ೧೦೮ನೇ ಜಯಂತಿ

ಹೊಸಪೇಟೆ:  ದಲಿತ ಮನೆತನದಲ್ಲಿ ಹುಟ್ಟಿ ಸಂಸ್ಕೃತ, ಇಂಗ್ಲೀಷ್, ಹಿಂದಿ ಭಾಷೆಯಲ್ಲಿ ಪ್ರಭುತ್ವ ಸಾಧಿಸಿ ಉಪ ಪ್ರಧಾನಿ ಹುದ್ದೆ ಏರಿ ಹಸಿರುಕ್ರಾಂತಿ ಹರಿಕಾರರಾದವರು ಬಾಬು ಜಗಜೀವನರಾಮ್ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಉಪ ಕುಲಸಚಿವ ಡಾ. ಎ.ವೆಂಕಟೇಶ್ ಹೇಳಿದರು.
ನಗರದಲ್ಲಿ ಭಾನುವಾರ ಗೃಹರಕ್ಷಕದಳದ ಕಚೇರಿಯಲ್ಲಿ ಡಾ.ಬಾಬುಜಗಜೀವನರಾಮ್ ಅವರ ೧೦೮ನೇ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮ ಗಾಂಧೀಜಿಯವರ ಜೊತೆಯಲ್ಲಿ ಭಾಗವಹಿಸಿದ್ದರು ಎಂದರು. ಅವರ ಆದರ್ಶದ ಬದುಕನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕೆಂದರು, ಮುಖ್ಯ ಅತಿಥಿಯಾಗಿ ಕೆ.ಪಿ. ಉಮಾಪತಿ ಹಾಜರಿದ್ದರು. ತಾಲೂಕು ಜಗಜೀವನ ರಾಮ್ ಸಂಘದ ಅಧ್ಯಕ್ಷ ಹೆಚ್.ಎಸ್. ಯಂಕಪ್ಪ ಮಾತನಾಡಿ, ದೇಶದ ಅಭಿವೃದ್ಧಿಗೆ ಶ್ರಮಿಸಿದ ಬಾಬು ಜಗಜೀವನರಾಮ್ ಅವರ ತತ್ವಗಳನ್ನು ಎಲ್ಲರೂ ಆಳವಡಿಸಿಕೊಳ್ಳಬೇಕೆಂದರು. ಗೃಹರಕ್ಷಕದಳದ ಸಮಾದೇಶಾಧಿಕಾರಿ ಸ್ವಾಗತಿಸಿದರು. ಪ್ಲಟೂನ್ ಕಮಾಂಡರ್ ಪರುಶುರಾಮ ನಿರೂಪಿಸಿದರು. ಗೃಹರಕ್ಷಕದಳದ ಅಧಿಕಾರಿಗಳು, ಗೃಹರಕ್ಷಕದಳದ ಸದಸ್ಯರು ಹಾಜರಿದ್ದರು.  

Leave a Reply