ಹೈ.ಕ. ಕಾಲೇಜು ಶಿಕ್ಷಣ ಇಲಾಖೆ ಬೋಧಕೇತರ ನೌಕರರ ಸಂಘ ಅಸ್ತಿತ್ವಕ್ಕೆ

ಕೊಪ್ಪಳ :- ಹೈದ್ರಬಾದ್ ಕರ್ನಾಟಕ ೩೭೧(ಜೆ)ನೇ ಪ್ರಾದೇಶಿಕ ಸ್ಥಳೀಯ ವೃಂದ ಸೇರಿದ ಕಾಲೇಜು ಶಿಕ್ಷಣ ಇಲಾಖೆ ಬೀದರ, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ ಹಾಗೂ ಕೊಪ್ಪಳ ೬ ಜಿಲ್ಲೆಗಳು ಸೇರಿ ಹಾಗೂ ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿ ಬರುವ ಕಾಲೇಜುಗಳ ಕಛೇರಿಗಳ ಹೈದ್ರಬಾದ್-ಕರ್ನಾಟಕ ಸ್ಥಳೀಯ ವೃಂದ ಸೇರಿದ ಬೋಧಕೇತರ ವಿಶೇಷ ಸ್ಥಾನಮಾನ, ಬಡ್ತಿ, ನಿಯೋಜನೆ, ನೇಮಕಾತಿ, ವರ್ಗಾವಣೆ,  ಮೂಲಸೌಲಭ್ಯಗಳನ್ನು ಪಡೆಯಲು, ಸಾಮರಸ್ಯ ಪರಿಗಣಿಸಲು ಹಾಗೂ  ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಹೈದ್ರಬಾದ-ಕರ್ನಾಟಕ (೩೭೧ ಜೆ) ಪ್ರಾದೇಶಿಕ ಸ್ಥಳೀಯ ವೃಂದ ಸೇರಿದ ಬೋಧಕೇತರ ನೌಕರರ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಬೋಧಕೇತರ ನೌಕರರ ಸಂಘದ ಅಧ್ಯಕ್ಷ. ಮೆಹಬೂಬ್ ಎಮ್.ವಂಟೇಳಿ  ತಿಳಿಸಿದ್ದಾರೆ.
Please follow and like us:
error