fbpx

ದಿನಗೂಲಿ ಪೌರ ಕಾರ್ಮಿಕರ ಶೋಷಣೆ ನಿಲ್ಲಲಿ.

ಗಂಗಾವತಿ – 20- ನಗರದಲ್ಲಿ ಬಿ.ವಿ.ಜಿ. ಕಂಪನಿಯು ನಗರವನ್ನು ಸ್ವಚ್ಛಗೊಳಿಸುವ ಗುತ್ತಿಗೆ  ಕಳೆದ ವರ್ಷ ಜೂನ್‌ನಿಂದ ಅವಧಿ ಮುಗಿದಿದ್ದರಿಂದ, ಅಂದಿನಿಂದ ಇಂದಿನವರೆಗೆ ನಗರಸಭೆ ಪೌರ ಕಾರ್ಮಿಕರ ಮಾಲೀಕರಾಗಿ ನೇರವಾಗಿ ದುಡಿಸಿಕೊಳ್ಳುತ್ತಿದೆ. ವರ್ಷದಲ್ಲಿ ೨ ತಿಂಗಳು ಮಾತ್ರ ವೇತನ ನೀಡಿ, ೧೦ ತಿಂಗಳಿನಿಂದ ವೇತನ ನೀಡದೇ ಕಾರ್ಮಿಕರನ್ನು ಪಶುಗಳಿಗಿಂತ ಹೀನವಾಗಿ ದುಡಿಸಿಕೊಳ್ಳುತ್ತಿದೆ. ೦೬-೦೮-೨೦೧೫ ರಂದು ಮಾನ್ಯ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಆಧ್ಯಕ್ಷರಾದ ನಾರಾಯಣರವರು ನಮ್ಮ ದೂರಿನ ಮೇರೆಗೆ ಕೊಪ್ಪಳದ ಜಿಲ್ಲಾಡಳಿತ ಭವನದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾನ್ಯ ಪೌರಾಯುಕ್ತರನ್ನು ತರಾಟೆಗೆ ತೆಗೆದುಕೊಂಡು, ಕೂಡಲೇ ಕನಿಷ್ಠ ವೇತನ ಕಾಯ್ದೆಯಡಿಯಲ್ಲಿ ಬಾಕಿ ವೇತನವನ್ನು ಒಂದು ತಿಂಗಳ ಒಳಗಾಗಿ ಮೂರು ಕಂತುಗಳಲ್ಲಿ ನೀಡಬೇಕೆಂದು ಆದೇಶಿಸಿರುತ್ತಾರೆ. ಆದರೆ ಇದುವರೆಗೆ ನಗರಸಭೆ ಬಾಕಿ ವೇತನ ಕೊಡದೇ, ಕೇಳಿದರೆ ಹಾರಿಕೆ ಉತ್ತರ ಹೇಳುತ್ತಾ ಶೋಷಣೆ ಮಾಡುತ್ತಿದ್ದಾರೆ. ಆದ್ದರಿಂದ ಪೌರ ಕಾರ್ಮಿಕರು ದಿನಾಂಕ ೧೭-೦೮-೨೦೧೫ ರಂದು ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದಾರೆ. ಕಾರ್ಮಿಕರ ಬೆಂಬಲಕ್ಕೆ ಇಲ್ಲಿಯವರೆಗೆ ಯಾವುದೇ ರಾಜಕಾರಣಿಗಳು ಮುಂದೆ ಬಂದಿರುವುದಿಲ್ಲ. ೩೧ ಜನ ನಗರಸಭೆ ಸದಸ್ಯರ ಜೊತೆಗೆ ಮಾನ್ಯ ಸಂಸದರು, ಶಾಸಕರು, ಮೇಲ್ಮನೆ ಸದಸ್ಯರು ಕೂಡಾ ನಗರಸಭೆ ಸದಸ್ಯರಾಗಿರುತ್ತಾರೆ. ಆದರೆ ಜನಪ್ರತಿನಿಧಿಗಳಿಗೆ ನಗರಸಭೆಯಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ತಿಳಿದರೂ ತಿಳಿಯದಂತೆ ನೋಡಿಯೂ ನೋಡದಂತೆ ಕಣ್ಣುಯಮುಚ್ಚಿ ಕುಳಿತಿದ್ದಾರೆ. ಹೀಗಾಗಿ ನಗರಸಭೆ ಪೌರಾಯುಕ್ತರಾದ ಬ್ರಷ್ಠ ರಂಗಸ್ವಾಮಿ ಒಂದು ವರ್ಷದಿಂದ ಕಾರ್ಮಿಕರಿಗೆ ಸಂಬಳ ಕೊಡದೇ ಕಾನೂನುಬಾಹಿರವಾಗಿ ಕನಿಷ್ಠ ವೇತನ ಮತ್ತೀತರ ಕಾಯ್ದೆಗಳನ್ನು ಗಾಳಿಗೆ ತೂರಿ ಸರ್ವಾಧಿಕಾರಿಯಂತೆ ದುಡಿಸಿಕೊಳ್ಳುತ್ತಿದ್ದಾನೆ. ೧೦ ತಿಂಗಳಿನಿಂದ ಕಾರ್ಮಿಕರು ಹೋರಾಟ ಮಾಡುತ್ತಾ ಬಂದರೂ ನಗರಸಭೆ ಸದಸ್ಯರು ಕಾರ್ಮಿಕರು ತಮಗೆ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ. ಮಾನ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ನಾರಾಯಣರವರು ಪ್ರಗತಿ ಪರಿಶೀಲನಾ ಸಭೆಯಲ್ಲಿ ಹೇಳಿದಂತೆ ಗಂಗಾವತಿ ತಾಲೂಕಿನಲ್ಲಿ ಪ್ರತ್ಯೇಕ ಕಾಯ್ದೆಗಳು ನಡೆಯುತ್ತಿವೆ ಇಲ್ಲಿನ ಜನಪ್ರತಿನಿಧಿಗಳಿಗೆ ಕರ್ನಾಟಕ ರಾಜ್ಯ ಕಾಯ್ದೆಗಳು ಮತ್ತು ರಾಷ್ಟ್ರೀಯ ಕಾಯ್ದೆಗಳು ಲೆಕ್ಕಕ್ಕೆ ಇಲ್ಲ ಎಂದು ಹೇಳಿರುವುದು ಸತ್ಯವಾಗಿದೆ. ೧೦ ತಿಂಗಳಿನಿಂದ, ತಿಂಗಳಿಗೆ ರೂ. ೮,೦೦೦/- ರಂತೆ ಎಂಬತ್ತು ಸಾವಿರ ರೂಪಾಯಿ ಪ್ರತಿ ಕಾರ್ಮಿಕನಿಗೆ ಬಾಕಿಯಾದ ನಗರಸಭೆ ಒಟ್ಟು ರೂ. ೧,೧೨,೦೦,೦೦೦/- (ಒಂದು ಕೋಟಿ ಹನ್ನೆರಡು ಲಕ್ಷ) ಬಾಕಿ ಇದೆ. ನಗರಸಭೆ ಕಾನೂನುಬಾಹಿರವಾಗಿ ೧೪೦ ಜನರನ್ನು ದುಡಿಸಿಕೊಳ್ಳುತ್ತಿರುವುದು ಗಮನಿಸಿದರೆ ನಗರಸಭೆ ಕಾರ್ಮಿಕರು ಈ ದೇಶದ ಎರಡನೇ ತರಗತಿಯ ಪೌರರಂತೆ ಸರಕಾರ ನೋಡುತ್ತಾ ಇದೆ ಎಂದು ಅನುಮಾನ ಬರುತ್ತಿದೆ. ಗಂಗಾವತಿ ಗುತ್ತಿಗೆ ಪೌರ ಕಾರ್ಮಿಕರ ಬಾಕಿ ವೇತನ ಸಮಸ್ಯೆ ಬಗೆಹರಿಸಲು ಕೊಪ್ಪಳ ಜಿಲ್ಲೆಯ ಪ್ರಗತಿಪರ ಸಂಘಟನೆಗಳು ಮತ್ತು ಕಾರ್ಮಿಕ ಮುಖಂಡರು ಸಭೆ ಸೇರಿ ಜಿಲ್ಲೆಯ ಉಸ್ತುವಾರಿ ಸಚಿವ, ಸಂಸದ, ಮೇಲ್ಮನೆ ಸದಸ್ಯ, ಮತ್ತು ಗಂಗಾವತಿ ಶಾಸಕರ ವಿರುದ್ಧ ಹೋರಾಟ ಮಾಡಲು ಕಾರ್ಯತಂತ್ರವನ್ನು ರೂಪಿಸಲಿದ್ದಾರೆ.

Please follow and like us:
error

Leave a Reply

error: Content is protected !!