fbpx

ಯುವಜನತೆ ಕನ್ನಡ ಸಾಹಿತ್ಯವನ್ನು ಗಂಭೀರವಾಗಿ ಅಧ್ಯಯನ ಮಾಡಬೇಕು-ಎಚ್.ಎಸ್. ಪಾಟೀಲ.

ಕೊಪ್ಪಳ-05- ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತ್ಯ ಶ್ರೀಮಂತವಾಗಿದೆ. ಆದರೆ ಇಂದಿನ ಯುವಕರಲ್ಲಿ ಕನ್ನಡ ಸಾಹಿತ್ಯದ ಅಧ್ಯಯನದ ಕೊರತೆ ಕಂಡು ಬರುತ್ತಿದೆ.  ಯುವಜನತೆ ಕನ್ನಡ ಸಾಹಿತ್ಯವನ್ನು ಗಂಭೀರವಾಗಿ ಅಧ್ಯಯನ ಮಾಡಬೇಕು. ಗಂಭೀರ ಓದಿನಿಂದ ಮಾತ್ರ ಉತ್ತಮ ಗ್ರಂಥಗಳನ್ನು ರಚಿಸಲು ಸಾಧ್ಯ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎಚ್.ಎಸ್. ಪಾಟೀ ಹೇಳಿದರು.
    ಅವರು ಕೊಪ್ಪಳದ ಪ್ರವಾಸಿ ಮಂದಿರದಲ್ಲಿ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು. ಅವರು ಮುಂದುವರೆದು ಮಾತನಾಡುತ್ತಾ, ನಾನು ಕೊಪ್ಪಳದ ಗವಿಮಠದ ಕುರಿತು ‘ಗವಿದೀಪ್ತಿ’ ಗ್ರಂಥ ಹೊರತಂದ ನಂತರ ಬಹಳ ದಿನಗಳವರೆಗೆ ನನಗೆ ‘ಗವಿದೀಪ್ತಿ ಪಾಟೀ
     ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಅವರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎಚ್.ಎಸ್. ಪಾಟೀರನ್ನು ಸನ್ಮಾನಿಸಿದರು.
    ಹಿರಿಯ ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರ, ಜಾನಪದ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಬಸವರಾಜ ಆಕಳವಾಡಿ, ರಂಗ ನಟರಾದ ಈಶ್ವರ ಹತ್ತಿ, ಶಂ.ನಿಂ. ತಿಮ್ಮನಗೌಡ್ರ, ಮಲ್ಲಿಕಾರ್ಜುನಗೌಡ ಪಾಟೀಲ, ಎಂ.ಬಿ. ದಾನರಡ್ಡಿ, ಲಕ್ಷ್ಮೀಶ ಬಡಿಗೇರ, ವೈ.ಬಿ.ಜೂಡಿ, ವಕೀಲರ ಪರಿಷತ್ತಿನ ರಾಜ್ಯಾಧ್ಯಕ್ಷರಾದ ವಿಜಯ ಅಮೃತರಾಜ, ಹಿರಿಯರಾದ ಆಂಜನಪ್ಪ ಭಾಗ್ಯನಗರ, ಕಲ್ಮೇಶ ಪಾಟೀಲ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಲ’ ಎಂದೇ ಕರೆಯುತ್ತಿದ್ದರು ಎಂದರು.

Please follow and like us:
error

Leave a Reply

error: Content is protected !!