ಕೊಪ್ಪಳ ಕೌಶಲ್ಯ ಅಭಿವೃದ್ಧಿ ಉಚಿತ ತರಬೇತಿಗೆ ಅರ್ಜಿ ಆಹ್ವಾನ.

ಕೊಪ್ಪಳ ಮಾ. ೦೪ (ಕ ವಾ) ಕೊಪ್ಪಳ ನಗರಸಭೆ ವತಿಯಿಂದ ರಾಷ್ಟ್ರೀಯ ನಗರ ಜೀವನೋಪಾಯ ಯೋಜನೆಯಡಿ ಕೌಶಲ್ಯ ಅಭಿವೃದ್ಧಿ ಉಚಿತ ತರಬೇತಿಗೆ ಆಸಕ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
     ಕೇಂದ್ರ ಪುರಸ್ಕೃತ ಯೋಜನೆಯಾದ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ೨೦೧೫-೧೬ ನೇ ಸಾಲಿಗಾಗಿ ಕೊಪ್ಪಳ ನಗರ ವ್ಯಾಪ್ತಿಯಲ್ಲಿರುವ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ೧೮ ವರ್ಷ ಮೇಲ್ಪಟ್ಟ ಅಭ್ಯರ್ಥಿಗಳಿಗೆ ಕಿಯೋನಿಕ್ಸ್ ತರಬೇತಿ ಸಂಸ್ಥೆ ಮೂಲಕ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಉಚಿತವಾಗಿ ನೀಡಲಾಗುವುದು.  ತರಬೇತಿ ಕೋರ್ಸ್ ಹಾಗೂ ಆಯ್ಕೆ ಮಾಡಲಾಗುವ ಅಭ್ಯರ್ಥಿಗಳ ಸಂಖ್ಯೆ ವಿವರ ಇಂತಿದೆ.  ಕಾಲ್ ಸೆಂಟರ್ ಟ್ರೈನಿಂಗ್‌ಗೆ ೩೦ ಅಭ್ಯರ್ಥಿಗಳು, ಅಕೌಂಟಿಂಗ್ ಮತ್ತು ಟ್ಯಾಲಿ- ೬೫, ಡಿಪ್ಲೋಮಾ ಇನ್ ಕಂಪ್ಯೂಟರ್ ಟೀಚರ್ ಟ್ರೈನಿಂಗ್ ಕೋರ್ಸ್- ೭೦.  ವಿದ್ಯಾರ್ಹತೆ- ದ್ವಿತೀಯ ಪಿಯುಸಿ.  ಆಸಕ್ತರು ದ್ವಿಪ್ರತಿಯಲ್ಲಿ ಅರ್ಜಿ, ವಿದ್ಯಾರ್ಹತೆ ಬಗ್ಗೆ ದಾಖಲಾತಿಗಳು, ೦೩ ವರ್ಷಗಳ ಕಾಲ ನಿವಾಸಿಯಾಗಿರುವುದಕ್ಕೆ ಪಡಿತರ ಚೀಟಿ, ಚುನಾವಣೆ ಗುರುತಿನ ಚೀಟಿ ದೃಢೀಕೃತ ದಾಖಲಾತಿಗಳನ್ನು ಲಗತ್ತಿಸಿ ಮಾ. ೨೦ ರ ಒಳಗಾಗಿ ಕೊಪ್ಪಳ ನಗರಸಭೆಯ ನಲ್ಮ ವಿಭಾಗಕ್ಕೆ ಖುದ್ದಾಗಿ ಸಲ್ಲಿಸಬೇಕು ಎಂದು ನಗರಸಭೆ ಪೌರಾಯುಕ್ತ ರಮೇಶ್ ಪಟ್ಟೇದಾರ ತಿಳಿಸಿದ್ದಾರೆ.
Please follow and like us:
error