ಕೊಪ್ಪಳ ಹೋಬಳಿ ಮಟ್ಟದ ಜನಸ್ಪಂದನ ಕಾರ್ಯಕ್ರಮ

 ಟಣಕನಕಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣ

ಕೊಪ್ಪಳ :  ದಿ   ೫  ರಂದು ಓಜನಹಳ್ಳಿ ಗ್ರಾ.ಪಂ ವ್ಯಾಪ್ತಿ ಟಣಕನಲ್ ದಲ್ಲಿ ಹೊಬಳಿ ಮಟ್ಟದ ಜನಸ್ಪಂದನ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ ಅಧ್ಯಕ್ಷರಾದ  ಕೆ. ರಾಘವೇಂದ್ರ ಹಿಟ್ನಾಳ  ಉದ್ಘಾಟಿಸಿದರು. ಓಜನಹಳ್ಳಿ ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ಶಾಂತಮ್ಮ ವಾಲ್ಮಿಕಿ ಅಧ್ಯಕ್ಷತೆಯನ್ನು ವಹಿಸಿದ್ದರು. ತಾಲೂಕ ಪಂಚಾಯತಸದಸ್ಯರಾದ ರಮೇಶ ಚೌಡ್ಕಿ ಗ್ರಾ.ಪಂ ಉಪಾಧ್ಯಕ್ಷರಾದ  ಹನುಮಂತಪ್ಪ ಚುಕನಕಲ್, ಸದಸ್ಯರಾದ ಬಸಮ್ಮ ಅಂಬಿಗೇರ ಮಾರುತಿ ಬೋವಿ, ಗವಿಸಿದ್ದಪ್ಪ ಬಿಸರಳ್ಳಿ, ವೀರುಪಾಕ್ಷಗೌಡ ರಾಮತ್ನಾಳ, ಸಂಗಪ್ಪ ಬಿಡನಾಳ, ಹಾಗೂ ಗ್ರಾಮದ ಮುಖಂಡರಾದ ಹುಡಚಪ್ಪ ಗೊಂದಿ ಹೊಸಳ್ಳಿ, ಶಿವಮೂರ್ತಿಗೌಡ ಸಣ್ಣಗೌಡ್ರ, ಹಾಜರಿದ್ದರು. 
ಮುಖ್ಯ ಅತಿಥಿಗಳ ಸ್ಥಾನವನ್ನು ಉಪಾತಹಶಿಲ್ಧಾರ ತಿಪ್ಪೆರುದ್ರಸ್ವಾಮಿ ತಾಲೂಕ ಪಂಚಾಯತ ಇ.ಓ ಟಿ.ಕೃಷ್ಣಾಮೂರ್ತಿ ಜಿ.ಪಂ ಸಹಾಯಕ ಕಾರ್ಯ ನಿರ್ವಾಕ ಅಭಿಯಂತರರು , ಜೆಸ್ಕಾಂ ಸಹಾಯಕ ಕಾರ್ಯ ನಿರ್ವಾಕ ಅಧಿಕಾರಿ, ಕಂದಾಯ ಇಲಾಖೆ ನೀರಿಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು, ಪೋಲಿಸ ಇಲಾಖೆ ಪಿ.ಎಸ್.ಐ ಮಹಾಂತೆಶ ಸಜ್ಜನ, ಸಿ.ಡಿ.ಪಿ.ಓ, ಅರಣ್ಯ ಇಲಾಖೆ ಅಧಿಕರಿಗಳು, ಕೃಷಿ ಇಲಾಖೆ ಅಧಿಕಾರಿಗಳು, ಶಿಕ್ಷಣ ಇಲಾಖೆ ಬಿಸಿ ಊಟ ಅಧಿಕಾರಿಗಳು, ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು, ಗ್ರಾಮ ಪಂಚಾಯತಿಯ ಸರ್ವ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು 
 ಜ್ಯೋತಿ ಬೆಳಗಿಸಿ ಮಾತನಾಡಿದ ಜಿ.ಪಂ ಅಧ್ಯಕ್ಷರಾದ ಅಧಿಕಾರಿಗಳ ಹಾಜರಾತಿ ಇದ್ದರು ಕೂಡಾ ಕಾರ್ಯಕ್ರಮದಲ್ಲಿ ಜನರ ಸಂಖ್ಯೆ ಕಡಿಮೆ ಇರುವುದರ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ತಾ.ಪಂ  ಸದಸ್ಯರು ಮಾತನಾಡಿ ಪಡೀತರ ಚೀಟಿ ವಿತರಣೆಯಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಪ್ರಶ್ನಿಸಿದರು. 
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಸರಕಾರಿ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ಒದಗಿಸಿದರು. ಕಂದಾಯ  ನೀರಿಕ್ಷಕರಾದ  ಹೆಮಂತ ಸ್ವಾಗತಿಸಿದರು ಪಂಚಾಯತ ಕಾರ್ಯದರ್ಶಿಗಳಾದ   ಆದಯ್ಯ ಹೇರೂರು ವಂದಿಸಿದರು.  
Please follow and like us:
error