ಜಿಲ್ಲೆಯಲ್ಲಿ ಶಾಂತಿಯುತ ಮತದಾನ…ಕೆಲ ಚಿತ್ರಗಳು

ಬಿಸಿಲಿನ ದಗೆಯಲ್ಲು ಬಿರುಸಿನ ಮತದಾನ
ಕೊಪ್ಪಳ, ಮೇ.೦೫: ತಾಲೂಕಿನ ವದ್ನಾಳ ಗ್ರಾಮದಲ್ಲಿ ಮಧ್ಯಾಹ್ನ ಬಿರು ಬಿಸಿಲಿನ ದಗೆಯಲ್ಲು ಮಹಿಳೆಯರು ಮತ್ತು ಪುರುಷರು ಅತ್ಯಂತ ಉತ್ಸುಕತೆಯಿಂದಲೇ ಮತಗಟ್ಟೆಗೆ ಬಂದು ಮತದಾನ ಮಾಡುತ್ತಿರುವುದು ಕಂಡು ಬಂತು.
ಬಿಸಿಲಿನ ಬೇಗೆ ಹೆಚ್ಚಿದಂತೆ ಮತದಾನವು ಚುರುಕುಗೊಂಡಿತ್ತು. ಮಕ್ಕಳ ಸಮೇತ ಬಂದ ಮಹಿಳೆಯರು, ವೃದ್ಧರು ಸಾಲುಗಟ್ಟಿ ನಿಂತು ಮತದಾನ ಮಾಡಿದ್ದು ಕಂಡು ಬಂತು ಆದರೆ ಅದೇ ಹಂದ್ರಾಳ, ಹಲಗೇರಿ ಹಾಗೂ ಕೊಪ್ಪಳ ನಗರದಲ್ಲಿ ಬಿಸಿಲಿನ ಬೇಗೆಯಿಂದ ಮತದಾರರು ಮತಗಟ್ಟೆಯಿಂದ ದೂರ ಉಳಿದಿರುವುದು ಕಂಡು ಬಂತು.

ಬಿರು ಬಿಸಲಿಗೆ ಬಿಕೋ ಎನ್ನುತ್ತಿರುವ ಮತಗಟ್ಟೆಗಳು
ಕೊಪ್ಪಳ, ಮೇ.೦೫: ತಾಲೂಕಿನ ಹಂದ್ರಾಳ ಗ್ರಾಮದಲ್ಲಿ ಮಧ್ಯಾಹ್ನ ಬಿರು ಬಿಸಿಲಿನ ದಗೆಯಿಂದ ಜನತೆ ಮತದಾನಕ್ಕೆ ಮತಗಟ್ಟೆಗೆ ಬರದೇ ದೂರ ಉಳಿದಿರುವುದು ಕಂಡು ಬಂತು.

Leave a Reply