ಶಿಕ್ಷಕರೂ ನಿರಂತರ ಕಲಿಕೆಯಲ್ಲಿರಬೇಕು- ಅಲ್ಲಮಪ್ರಭು ಬೆಟ್ಟದೂರ

ಕೊಪ್ಪಳ :ಇಂದಿನ  ಶಿಕ್ಷಣದಲ್ಲಿ ಸಮಾನತೆ,ಅಧುನೀಕ ತಂತ್ರಜ್ಞಾನದ ಅವಶ್ಯಕತೆಯಿದೆ. ಸ್ಪರ್ಧಾತ್ಮಕ ಪ್ರಪಂಚದಲ್ಲಿ ನಮ್ಮ ಮಕ್ಕಳು ಮುಂದೆ ಬರಲು ಶಿಕ್ಷಕರೂ ಸಹ ತಂತ್ರಜ್ಞಾನದ ಅರಿವನ್ನು ಪಡೆದುಕೊಂಡು ಅದನ್ನು ಮಕ್ಕಳಿಗೆ ಕಲಿಸಬೇಕು ಎಂದು ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹೇಳಿದರು. ಅವರು ನಗರದ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ೧೨೬ನೇ ಡಾ.ಸರ್ವೆಪಲ್ಲಿ ರಾಧಕೃಷ್ಣನ್‌ರವರ ಜನ್ಮದಿನಾಚರಣೆ (ಶಿಕ್ಷಕರ ದಿನಾಚರಣೆ)ಯ ಕಾರ್‍ಯಕ್ರಮದಲ್ಲಿ ಉದ್ಘಾಟಕರಾಗಿ ಭಾಗವಹಿಸಿ ಮಾತನಾಡುತ್ತಿದ್ದರು. 
ಡಾ.ಸರ್ವೆಪಲ್ಲಿ ರಾಧಕೃಷ್ಣನ್‌ರವರ ಭಾವಚಿತ್ರಕ್ಕೆ ಪೂಜೆ ನೆರವೇರಿಸುವ ಮೂಲಕ ಕಾರ್‍ಯಕ್ರಮವನ್ನು ಉದ್ಘಾಟಿಸಲಾಯಿತು. ಮಖ್ಯ ಅತಿಥಿ ಜಯಕರ್ನಾಟಕ ಸಂಘಟನೆಯ ಉತ್ತರಕರ್ನಾಟಕದ ಅಧ್ಯಕ್ಷರಾದ ವಿಜಯಕುಮಾರ ಕವಲೂರ ಶಿಕ್ಷಕ ವೃತ್ತಿ ಪವಿತ್ರವಾದದ್ದು. ಶಿಕ್ಷಕರಾಗಲು ಎಲ್ಲರಿಗೂ ಅವಕಾಶ ಸಿಗುವುದಿಲ್ಲ.ಉತ್ತಮ ಸಮಾಜ ನಿರ್ಮಾಣ ಮಾಡುವುದರಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯ ಅದನ್ನು ಅರಿತಿಕೊಂಡು ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದು ಹೇಳಿದರು. 
ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ಮಲ್ಲಪ್ಪ ಕವಲೂರ ನಗರಸಭಾ ಸದಸ್ಯರು ವಹಿಸಿಕೊಂಡಿದ್ದರು. ವೇದಿಕೆಯ ಮೇಲೆ ಸಂಸ್ಥೆಯ ರೇಣುಕಾ ಅತ್ತನೂರ, ಕಾರ್‍ಯದರ್ಶಿ ಆರ್.ಎಚ್.ಅತ್ತನೂರ, ಶಿಕ್ಷಕರಾದ ಅಮ್ಜದ ಅಲಿ,ಆಶಾ ದೊಡ್ಡಮನಿ,ಜಯಶ್ರೀ ಕುಲಕರ್ಣಿ ಹಾಗೂ ಇತರ ಶಿಕ್ಷಕರು ಉಪಸ್ಥಿತರಿದ್ದರು.ಮಕ್ಕಳಿಗೆ ಸಿಹಿಯನ್ನು ವಿತರಿಸಲಾಯಿತು. ಕಾರ್‍ಯಕ್ರಮದ ನಿರೂಪಣೆಯನ್ನು ಅನಿತಾ ಸಿದ್ನೆಕೊಪ್ಪ,ಸ್ವಾಗತ ಅನ್ನಪೂರ್ಣ,ವಂದನಾರ್ಪಣೆ ಜಯಶ್ರಿ ಕುಲಕರ್ಣಿ ನೆರವೇರಿಸಿದರು. 
Please follow and like us:
error