fbpx

ಕಳಕಿಂತ ಸಚಿವರನ್ನು ಕೈಬಿಡಲು ಕಪ್ಪುಪಟ್ಟಿ ಪ್ರತಿಭಟನೆ

   ಜಿಲ್ಲಾ ಬಿ ಜೆ ಪಿ ಯಿಂದ ಕಳಕಿಂತ ಸಚಿವರನ್ನು ಕೈಬಿಡಲು ಕಪ್ಪುಪಟ್ಟಿ ಪ್ರತಿಭಟನೆ

  ಕೊಪ್ಪಳ : ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವ ಸರಕಾರವು ಕಳಂಕಿತರಿಗೆ  ಮಣೆ ಹಾಕುವುದಿಲ್ಲವೆಂದು ಭರವಸೆ ನೀಡಿ ಹಾಗೂ ಕಾಂಗ್ರೆಸಿನ  ಸರ್ವೋಚ್ಛ ನಾಯಕ ರಾಹುಲ ಗಾಂಧಿಯವರು ದೆಹಲಿಯಲ್ಲಿ ಮೊಕದ್ದಮೆ ಎದುರಿಸುತ್ತಿರುವ ಯಾವುದೇ ವ್ಯಕ್ತಿಗೆ ಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಕಾಂಗೆಸ್ ನಿಂದ ಟಿಕೆಟ್ ನೀಡುವುದಿಲ್ಲವೆಂದು ಘೋಷಿಸಿ ಮುರುದಿನವೆ ಭ್ರಷ್ಟಾಚಾರ ಆಪಾದನೆಯನ್ನು ಎದುರಿಸುತ್ತಿರುವ ಡಿ.ಕೆ ಶಿವಕುಮಾರ ಹಾಗೂ ರೋಷನ್‌ಬೆಗ್  ಇವರಿಗೆ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಸಚಿವ ಸ್ಥಾನ ನೀಡಿದರು.
                        ಈ ಭ್ರಷ್ಠಾಚಾರದ ದ್ವಂದ ನೀತಿಯೂ ಕಾಂಗ್ರೆಸ್ ನೀತಿಯನ್ನು ತೋರಿಸಿಕೊಡುತ್ತದೆ. ಈ ನೀತಿಯನ್ನು ವಿರೋದಿಸಿ ಭಾರತೀಯ ಜನತಾ ಪಕ್ಷ ಜಿಲ್ಲಾಧ್ಯಕ್ಷರಾದ ಕರಡಿ ಸಂಗಣ್ಣವರ ನೇತೃತ್ವದಲ್ಲಿ ದಿನಾಂಕ ೦೬/೦೧/೨೦೧೪ ರಂದು ೧೧:೩೦ ಕ್ಕೆ ಕಪ್ಪು ಬಟ್ಟೆ ಧರಿಸಿ ಬೃಹತ್ ಪ್ರತಿಭಟನೆಯನ್ನು ಜಿಲ್ಲಾ ಬಿ.ಜಿ.ಪಿ ಕಾರ್ಯಾಲಯದಿಂದ ಅಶೋಕ ವೃತದಲ್ಲಿ ಹಮ್ಮಿಕೊಳ್ಳಲಾಗಿದೆ. 
                 ಈ ಪ್ರತಿಭಟನೆಯಲ್ಲಿ ಸಂಸದರಾದ ಶಿವರಾಮೆಗೌಡ, ವಿಧಾನ ಪರಿಷತ್ತ ಸದಸ್ಯರು ಹಾಗೂ ರಾಜ್ಯ ಉಪಾಧ್ಯಕ್ಷರಾದ ಹಾಲಪ್ಪ ಆಚಾರ, ಶಾಸಕರಾದ ದೊಡ್ಡನಗಹೌಡ ಪಾಟೀಲ, ಮಾಜಿ ಶಾಸಕರಾದ ಪರಣ್ಣ ಮನವಳ್ಳಿ, ರಾಜ್ಯ ರೈತ ಮೋರ್ಚಾ ಉಪಾದ್ಯಕ್ಷರಾದ  ಹೆಚ್.ಗಿರಿಗೌಡ್ರ, ಬಿ.ಜೆ.ಪಿ ಮುಖಂಡರಾದ ಕೊಲ್ಲಾ ಶೇಶಗಿರಿರಾವ್, ಬಸವರಾಜ ದೊಡೆಸೂರು, ಅಪ್ಪಣ್ಣ ಪದಕಿ, ಹೆಮಲತಾ ನಾಯಕ, ಇನ್ನೂ ಅನೇಕ ಬಿ.ಜೆ.ಪಿ ಅಭಿಮಾನಿಗಳು ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವರೆಂದು ಬಿಜೆಪಿ ಜಿಲ್ಲಾ ವಕ್ತಾರರಾದ ಚಂದ್ರುಶೇಖರಗೌಡ ಪಾಟೀಲ ಹಲಗೆರಿ ತಿಳಿಸಿದ್ದಾರೆ.  
Please follow and like us:
error

Leave a Reply

error: Content is protected !!