ಓ.ಬಿ.ಸಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಅನ್ಯಾಯ: ಎಸ್ ಎಫ್ ಐ ಪ್ರತಿಭಟನೆ.

ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಬೇಕಿದ್ದ ರಾಜ್ಯ ಸರಕಾರ ಪೂರ್ಣಶುಲ್ಕ ಕಟ್ಟುವಂತೆ ಸುತ್ತೋಲೆ ಹೊರಡಿಸಿದೆ. ಶುಲ್ಕ ಮರುಪಾವತಿ ಸೌಲಭ್ಯ ಪಡೆಯಬೇಕಾದರೆ ವಿದ್ಯಾರ್ಥಿಗಳಗೆ ಅಂಕಗಳನ್ನು ಮಾನದಂಡ ಮಾಡಿರುವುದು ವಿದ್ಯಾರ್ಥಿ ವಿರೋಧಿ ನೀತಿಯಾಗಿದೆ. ಸರಕಾರದ ಈ ಅಪಾಯಕಾರಿ ನಿಲುವನ್ನು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ ಎಫ್ ಐ) ಕೊಪ್ಪಳ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ.
ಮೆಟ್ರಿಕ್ ನಂತರದ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಭೋಧನಾಶುಲ್ಕ, ಪ್ರಯೋಗಾಲಯ ಶುಲ್ಕ, ಪರೀಕ್ಷಾ ಶುಲ್ಕ, ಕ್ರೀಡಾಶುಲ್ಕ, ಗ್ರಂಥಾಲಯ ಶುಲ್ಕಗಳು ವಿನಾಯಿತಿಗೆ ಅರ್ಹವಾಗಿರುವ ಶುಲ್ಕಗಳಾಗಿವೆ. ಈ ಶುಲ್ಕದ ಹೆಸರಿನಲ್ಲಿ ವಿದ್ಯಾರ್ಥಿಗಳು ನೀಡುವ ಶುಲ್ಕಗಳಿಗೆ ವಿನಾಯಿತಿ ನೀಡಲು ಸರಕಾರ ಅಳವಡಿಸಿರುವ ನಿಯಮ ಸಂವಿಧಾನ ಬಾಹೀರವಾಗಿದೆ. ಇದು ಹಿಂದುಳಿದ ದಲಿತ ವಿದ್ಯಾರ್ಥಿಗಳನ್ನು ಕಾಲೇಜು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲು ಹೊರಟಿದೆ. ವಿದ್ಯಾರ್ಥಿಯು ಕಾಲೇಜು ಪ್ರವೇಶ ಸಂದರ್ಭದಲ್ಲಿಯೇ ಎಲ್ಲ ಶುಲ್ಕಗಳನ್ನು  ನೀಡಬೇಕು. ನಂತರ ವಿನಾಯಿತಿ ಪಡೆಯುವುದಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಹಾಕಲು ತಿಳಿಸಲಾಗಿದೆ. ಈ ಸೌಲಭ್ಯ ಪಡೆಯಬೇಕಾದರೆ ವಿದ್ಯಾರ್ಥಿಯು ವಾರ್ಷಿಕ ಪರೀಕ್ಷೆಯಲ್ಲಿ ಪ್ರವರ್ಗ ೧ ಶೇ.೪೦, ಪ್ರವರ್ಗ ೨ಎ, ೩ಎ, ೩ಬಿ – ಶೇ.೫೦% ಅಂಕಗಳನ್ನು ಪಡೆದಿರಬೇಕು, ನವೀಕರಣ ವಿದ್ಯಾರ್ಥಿಗಳು ಶೇ.೬೦% ರಿಂದ ಶೇ.೭೦% ಅಂಕಗಳನ್ನು ಪಡೆದಿರಬೇಕು ಎಂಬ ನಿಯಮಗಳನ್ನು ಮಾಡಿರುವುದು ಸಂವಿಧಾನ ವಿರೋಧಿಯಾಗಿದೆ. ಆರ್ಥಿಕವಾಗಿ ಹಿಂದುಳಿದಿರುವ ಕಾರಣ ಶುಲ್ಕ ವಿನಾಯಿತಿ ಕೋರಿ ವಿದ್ಯಾರ್ಥಿಗಳು ಅರ್ಜಿ ಹಾಕಿರುತ್ತಾರೆ. ಅಂಕಗಳ ಆಧಾರದ ಮೇಲೆ ಜಾರಿ ಮಾಡಿದರೆ ಇದರಿಂದ ಅನೇಕ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ. ಬಡ ವಿದ್ಯಾರ್ಥಿಳಿಗೆ ಸೌಲಭ್ಯ ನೀಡುವಾಗ ಅಂಕದ ಮಾನದಂಡ ಸರಿಯಾದ ಕ್ರಮವಲ್ಲ.
  ರಾಜ್ಯದಲ್ಲಿ ಹಲವಾರು ಬರಪೀಡಿತ ತಾಲೂಕಗಳಿದ್ದು, ಬಹುತೇಕ ವಿಧ್ಯಾರ್ಥಿಗಳು ದಲಿತ, ಬಡ, ಹಿಂದುಳಿದ, ಅಲ್ಪಸಂಖ್ಯಾತ, ರೈತಾಪಿ ಕೂಲಿಕಾರ್ಮಿಕರ ಮಕ್ಕಳು ವಿಧ್ಯಾರ್ಥಿ ವೇತನದಲ್ಲಿ ಪದವಿ ಹಂತದವರೆಗೂ ಶಿಕ್ಷಣ ಮುಗಿಸುವಂತಹ ಬಹುತೇಕ ವಿದ್ಯಾರ್ಥಿಗಳಿದ್ದಾರೆ. ರಾಜ್ಯದಲ್ಲಿ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಶೇಕಡಾ ೧೨ರಷ್ಟು ದಾಟಿಲ್ಲ, ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಳ ಮಾಡುತ್ತೇವೆ ಎನ್ನುವ ಸರ್ಕಾರ ಪದವಿ ಹಂತದಲ್ಲಿಯೇ ಓ.ಬಿ.ಸಿ ವಿದ್ಯಾರ್ಥಿಗಳಿಗೆ ಎಲ್ಲಾ ಹಂತದ ಪೂರ್ಣ ಶುಲ್ಕ ಕಟ್ಟಿದಾಖಲಾತಿ ಮಾಡಿ ಅಂಕಗಳ ಆಧಾರದ ಮೇಲೆ ಮರುಪಾವತಿ ಮಾಡುತ್ತೇವೆ ಎನ್ನುವುದು ಎಷ್ಟು ಸರಿ, ಅಹಿಂದ ವರ್ಗದ ಸರ್ಕಾರ ಎಂದು ಪ್ರತಿಬಿಂಬಿಸಿಕೊಳ್ಳುವ ಸರ್ಕಾರಕ್ಕೆ ಅಹಿಂದ ವರ್ಗದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿರುದು ಕಾಣುತ್ತಿಲ್ಲವೇ? ಕೂಡಲೇ ರಾಜ್ಯ ಸರಕಾರ ಇಂತಹ ಅಪಾಯಕಾರಿ ಯೋಜನೆಗಳನ್ನು ಕೈಬಿಡಲು ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಾಪಾಡಲು ಮುಂದಾಗಬೇಕು. ವಿದ್ಯಾರ್ಥಿಗಳ ಎಲ್ಲಾ ಹಂತದ ಶುಲ್ಕಗಳಿಗೆ ವಿನಾಯ್ತಿ ನೀಡಿ ಮೂಲಸೌಲಭ್ಯಗಳನ್ನು ನೀಡುವಂತೆ ಎಸ್ ಎಫ್ ಐ ಕೊಪ್ಪಳ ಜಿಲ್ಲಾ ಸಮಿತಿಯು ಒತ್ತಾಯಿಸುತ್ತದೆ.
ಅಮರೇಶ ಕಡಗದ ಬಾಳಪ್ಪ ಹುಲಿಹೈದರ      ಉಮೇಶರಾಠೋಡ             ಮೇಘನಾ   ನೇತ್ರಾ 
  ಜಿಲ್ಲಾಧ್ಯಕ್ಷರು ಜಿಲ್ಲಾ ಕಾರ್ಯದರ್ಶಿ   ತಾಲೂಕಸಹ ಕಾರ್ಯದರ್ಶಿ     ತಾಲೂಕಉಪಾಧ್ಯಕ್ಷರು   ತಾಲೂಕ ಸಹ ಕಾರ್ಯದರ್ಶಿ 
      ಶಿವುಕುಮಾರ, ದೇವರಾಜ, ಪಾರ್ವತಿ, ಈರಮ್ಮ, ಗೌರಮ್ಮ, ವಿದ್ಯಾಶ್ರೀ, ಶೃತಿ, ಕಿರಣ, ಶಿವುಕುಮಾರ, ಮುತ್ತರ, ಮುಂತಾದವರು ಪ್ರತಿಭಟನೆಯಲ್ಲಿ ಪಾಲಗೊಂಡಿದ್ದರು ಪ್ರತಿಭಟನೆಯು ಸರಕಾರಿ ಪದವಿ ಕಾಲೇಜಿನಿಂದ ಶಾಸಕರ ಕಾರ್ಯಾಲಯದವರೆಗೂ ಮೇರವಣಿಗೆ ಹೊಗಿ ಸುಮಾರು ೧ ಗಂಟೆ ಧರಣಿ ಮಾಡಿ ಮನವಿ ಪತ್ರ ಸಲ್ಲಿಸಲಾಯಿತು. 

Leave a Reply