ಅಭಿಯಂತರರು ಮನೆ ಕಟ್ಟುವಾಗಸಸಿ ನೆಡುವಂತೆ ಪ್ರೇರಿಪಿಸಬೇಕು-ಬೆಟ್ಟದೂರು

 ಕೊಪ್ಪಳ, ಮೇ. ೩- ಅಭಿಯಂತರರು ಮನೆ ನಕಾಶೆ ತಯಾರಿಸುವಾಗ ಅದರಲ್ಲಿ ಸಸಿಗಳನ್ನು ನೆಡುವಂತೆ ಪ್ರೇರೆಪಿಸುವ ಮೂಲಕ ಪರಿಸರ ಬೆಳೆಸುವ ಪ್ರಯತ್ನ ಮಾಡಬೇಕು ಎಂದು ಶ್ರೀ ಗವಿಸಿದ್ಧೇಶ್ವರ ಕಾಲೇಜಿನ ನಿವೃತ್ತ ಪ್ರಚಾರ್ಯರು ಹಾಗೂ ಹಿರಿಯ ಹೋರಾಟಗಾರ ಅಲ್ಲಮ್‌ಪ್ರಭು ಬೆಟ್ಟದೂರು ಹೇಳಿದರು.
ಕೊಪ್ಪಳ ನಗರದ ಕಾರ್ಮಿಕ ವೃತ್ತದ ಹತ್ತಿರದ ಖಾಸಗಿ ಕಟ್ಟಡದಲ್ಲಿ ಆಸೋಸಿಯೇಷನ್ ಆಫ್ ಕನ್ಸ್‌ಲ್ಟಿಂಗ್ ಸಿವಿಲ್ ಇಂಜಿನಿಯರ‍್ಸ್ ಮತ್ತು ಆರ್ಕಿಟೆಕ್ಟ್ಸ್ (ರಿ) ವತಿಯಿಂದ ಕಾ

ರ್ಮಿಕ ದಿನಾಚರಣೆ ಅಂಗವಾಗಿ ಕಟ್ಟಡ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಉಚಿತ ನೋಟ್ ಬುಕ್‌ಶಾಲಾ ಉಪಕರಣಗಳ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ  ಅವರು ಮುಂದುವರೆದು ಮಾತನಾಡಿ ಮುಖ್ಯವಾಗಿ ಜಲ ಮತ್ತು ನೆಲ ಎರಡೇ ವಾಸ್ತುಗಳಿವೆ ಮನೆ ಕಟ್ಟುಲು ಬುನಾದಿ ಅಗೆದಾಗ ಮೊಳೆಗಳು ಬಂದರೆ ಅಲ್ಲಿ ಸ್ಮಶಾನ ಇರಬಹುದು ಹೀಗಾಗಿ ನೆಲಗಟ್ಟಿ ಇರುವದಿಲ್ಲ. ಎರಡನೇಯದು ಆ ಮನೆ ಕಟ್ಟುವ ಜಾಗೆಯಲ್ಲಿ ಮಳೆ ನೀರು ಹರಿದು ಬರುವಂತೆ ಇದ್ದರೆ ಆ ಜಾಗೆ ಮನೆ ಕಟ್ಟಲು ಯೋಗ್ಯವಲ್ಲ ಎಂಬುದು ವೈಜ್ಞಾನಿಕ ಕಾರಣಗಳು ಆದರೆ ಇದನ್ನೇ ಕೆಲವರು ಮೂಡನಂಬಿಕೆಯಿಂದ ಏನೇನು ಹೇಳುತ್ತಾರೆ. ದೇಶದ ವಾಸ್ತುವೇ ಸರಿ ಇಲ್ಲ ಎಂದು ಹೇಳಿವವರು ಬರುತ್ತಾರೆ ಎಂದು ವ್ಯಂಗ್ಯವಾಗಿ ನುಡಿದರು.

ಮನೆ ಕಟ್ಟುವ ಮಾಲಿಕರು ವೈಜ್ಞಾನಿಕ ವಾಸ್ತು ಪಂಡಿತರನ್ನು ಇಲ್ಲ ಅಭಿಯಂತರರನ್ನು ಭೇಟಿಯಾಗಿ ಉತ್ತಮ ಗಾಳಿ ಬೆಳಕಿನಿಂದ ಕೂಡಿದ ಮನೆ ನಿರ್ಮಿಸಿಕೊಳ್ಳಬೇಕು ಎಂದು ಅಲ್ಲಮಪ್ರಭು ಬೆಟ್ಟದೂರು ಹೇಳಿದರು.
ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್ ಮಾತನಾಡಿ, ಅಭಿಯಂತರರ ಸಂಘದಿಂದ ಕಟ್ಟಡ ಕಟ್ಟುವ ಕಾರ್ಮಿಕರ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ. ನಗರ ಅಭಿವೃದ್ಧಿಯಾಗಿ ಕಾಣಲು ಸರ್ಕಾರ ಒಂದು ಕಡೆಯಾದರೆ ಇನ್ನೊಂದು ಭಾಗದಲ್ಲಿ ಖಾಸಗಿ ಮನೆಗಳನ್ನು ನಿರ್ಮಿಸುವಾಗ ವಿಶೇಷ ವಿನ್ಯಾಸಗಳಿಂದ ಕೂಡಿದ ಆಕರ್ಷನಿಯ ಹಾಗೂ ಸುಂದರವಾಗಿ ಮನೆಗಳನ್ನು ನಿರ್ಮಿಸುವ ಜವಾಬ್ದಾರಿ ಅಭಿಯಂತರದ್ದಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಆಸೋಸಿಯೇಷನ್ ಆಫ್ ಕನ್ಸ್‌ಲ್ಟಿಂಗ್ ಸಿವಿಲ್ ಇಂಜಿನಿಯರ‍್ಸ್ ಮತ್ತು ಆರ್ಕಿಟೆಕ್ಟ್ಸ್ (ರಿ) ಅಧ್ಯಕ್ಷ ಪಂಪಾಪತಿ ಹುಬ್ಬಳ್ಳಿ ಮಾತನಾಡಿ, ನಮ್ಮ ಸಂಘದಿಂದ ಕಟ್ಟಡ ನಿರ್ಮಾಣ ಕಾರ್ಮಿಕರ ರಕ್ಷಣೆ ಮಾಡುವುದು. ಅದರ ಜೊತೆಯಲ್ಲಿ ಅತ್ಯಧುನಿಕ ಕಟ್ಟಡಕಟ್ಟುವ ಪದ್ದತಿಗಳ ಶಿಕ್ಷಣ ನೀಡುವದು, ಕರ್ನಾಟ ಕಟ್ಟಡ ಕಟ್ಟುವ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಸೌಲಭ್ಯ ಪಡೆಯಲು  ಮಾರ್ಗದರ್ಶ ನೀಡುಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಭಿಯಂತರರಾದ ಗುರುರಾಜ ಅಡವಿ, ಚನ್ನಕೇಶವ, ಮಹ್ಮದ್‌ಕಲೀಮ್‌ಖಾನ್, ಮುಸ್ತಫಾ, ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಸಂಚಾಲಕ ಮೈಲಪ್ಪ ಬಿಸರಳ್ಳಿ ಮತ್ತಿತರರು ಭಾಗವಹಿಸಿದ್ದರು.
ಸ್ವಾಗತ ಶಿವಶಂಕರ ಪ್ರಾಸ್ತವಿಕ ಹಾಗೂ ನಿರೂಪಣೆ ಮಹಾಂತೇಶ ಬಜಾರಮಠ, ವಂದನಾರ್ಪಣೆಯನ್ನು ಶ್ರೀಪಾದವೈದ್ಯ ಮಾಡಿದರು.

Leave a Reply