ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಚುನಾವಣೆ ಜಿಲ್ಲಾ ಘಟಕದ ಪದಾಧಿಕಾರಿಗಳ ಆಯ್ಕೆ

 ಇತ್ತೀಚೆಗೆ ಜರುಗಿದ ಕೊಪ್ಪಳ ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳ ಚುನಾವಣೆಯಲ್ಲಿ ರಾಜ್ಯಸಂಘದ ಉಪಾಧ್ಯಕ್ಷರಾದ ಝಾಕೀರ ಹುಸೇನ್ ಕುಕನೂರ ಬಣದ ಎಲ್ಲಾ ೬ ಜನ ಪದಾಧಿಕಾರಿಗಳ ಆಯ್ಕೆಯಾಗುವುದರ ಮೂಲಕ ವಿಜಯೋತ್ಸವವನ್ನು ಆಚರಿಸಿದರು. ಕೊಪ್ಪಳ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳಾಗಿ ಈ ಕೆಳಕಂಡವರು ಆಯ್ಕೆ ಯಾಗಿರುವರು.
ಜಿಲ್ಲಾ ಅಧ್ಯಕ್ಷರಾಗಿ ವೆಂಕಟೇಶ ಗೌಡರ, ಜಿಲ್ಲಾ ಉಪಾಧ್ಯಕ್ಷರಾಗಿ ಎಸ್.ಈ ಯಾಳಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಬಿ.ಕುರಿ, ಜಿಲ್ಲಾ ಸಹಕಾರ್ಯದರ್ಶಿಯಾಗಿ ಮೆಹಬೂಬ್ ಎಮ್ಮಿ, ಖಜಾಂಚಿಯಾಗಿ ಯಲ್ಲಪ್ಪ ಬಿ. ಬಂಡಿ, ಸಂಘನಾ ಕಾರ್ಯದರ್ಶಿಯಾಗಿ  ಮಂಜುನಾಥ ಎಸ್. ಕಟ್ಟಿ ಆಯ್ಕೆಯಾಗಿರುವರೆಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ಬಿ. ಕುರಿ  ತಿಳಿಸಿರುವರು. ಈ ವಿಜಯಕ್ಕೆ ಕಾರಣರಾಗಿರುವ ನಿರ್ದೇಶಕರಿಗೆ ಹಾಗೂ ಸಂಘದ ಪದಾಧಿಕಾರಿಗಳಿಗೆ, ಪ್ರತ್ಯಕ್ಷ & ಪರೋಕ್ಷವಾಗಿ ಸಹಕರಿಸಿದ ಜಿಲ್ಲೆಯ ಎಲ್ಲಾ ವೃತ್ತಿ ಬಾಂಧವರಿಗೆ, ಅಭಿನಂದನೆಗಳನ್ನು ಸಲ್ಲಿಸಿರುವರು. 

Leave a Reply