ಹಿರಿಯ ಸಾಹಿತಿ ಸಾ.ಶಿ.ಮರುಳಯ್ಯ ವಿಧಿವಶ.

ಹೃದಯ ಸಂಬಂಧಿ ಕಾಯಿಲೆಯಿಂದ
ಬಳಲುತ್ತಿದ್ದ 85 ವರ್ಷದ ಮರುಳಯ್ಯ ಅವರನ್ನು ಜನವರಿ 25ರಂದು ಜಯದೇವ ಆಸ್ಪತ್ರೆಗೆ
ದಾಖಲಿಸಲಾಗಿತ್ತು. ಇಂದು ಬೆಳಗ್ಗೆ 6 ಗಂಟೆಗೆ ನಿಧನರಾಗಿದ್ದಾರೆ. ತುಮಕೂರು ಜಿಲ್ಲೆ
ಚಿಕ್ಕನಾಯಕನಹಳ್ಳಿ ತಾಲೂಕಿನ ಗ್ರಾಮದಲ್ಲಿ 1931 ಜನವರಿ 28ರಂದು ಸಾಸಲು ಗ್ರಾಮದಲ್ಲಿ
ಜನಿಸಿದ್ದ ಮರುಳಯ್ಯ, ಕವನ, ಸಣ್ಣ ಕಥೆ, ನಾಟಕ ಸೇರಿ 75 ಕೃತಿಗಳನ್ನು ರಚಿಸಿದ್ರು.
ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷರಾಗಿ, ರಾಜ್ಯಭಾಷಾ ಆಯೋಗದ ಸದಸ್ಯರಾಗಿ ಮರುಳಯ್ಯ
ಸೇವೆ ಸಲ್ಲಿಸಿದ್ದರು. ಮರುಳಯ್ಯ ಅಗಲಿಕೆಗೆ ಗಣ್ಯರು, ಸಾಹಿತಿಗಳು ಕಂಬನಿ
ಮಿಡಿದಿದ್ದಾರೆ.

Please follow and like us:
error