ದಲಿತ ಫ್ಯಾಂಥರ್ ನಿಂದ ನೂತನ ಎಸ್.ಪಿ ಯವರಿಗೆ ಸ್ವಾಗತ.

ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಡಾ.ಪಿ ರಾಜಾ ಅವರನ್ನು ಭಾರತೀಯ ದಲಿತ ಪ್ಯಾಂಥರ್ ಜಿಲ್ಲಾ ಸಮಿತಿ ವತಿಯಿಂದ ಪುಷ್ಪಗುಚ್ಛ ನೀಡಿ ಜಿಲ್ಲೆಗೆ ಸ್ವಾಗತಿಸಲಾಯಿತು.
ಇದೆ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಅಸ್ಪೃಶ್ಯತೆ ಜೀವಂತವಿರುವ ಬಗ್ಗೆ ಅವರ ಗಮನಕ್ಕೆ ತರಲಾಯಿತು, ಹಾಗೂ ಈ ಅನಿಷ್ಠ ಪದ್ದತಿಯ ನಿರ್ಮೂಲನೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮೌಕಿಕವಾಗಿ ಮನವಿ ಮಾಡಲಾಯಿತು.
ದಲಿತ ಪ್ಯಾಂಥರ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಾಗರಾಜ್ ಬೆಲ್ಲದ್, ಮಂಜು ದೊಡ್ಡಮನಿ, ಗೌತಮ್ ಬಳಗಾನೂರ, ರಾಘು ಚಾಕ್ರಿ, ಜಗದೀಶ ಬೆಲ್ಲದ್ ಇದ್ದರು.

Leave a Reply