ಹಂಪಿಯಲ್ಲಿ ವಿಜೃಂಭಣೆಯಿಂದ ಜರುಗಿದ ವಿರೂಪಾಕ್ಷ ಸ್ವಾಮಿಯ ಜೋಡಿ ರಥೋತ್ಸವ

ಹೊಸಪೇಟೆ: ಹಂಪಿಯಲ್ಲಿ ಶನಿವಾರ ವಿರೂಪಾಕ್ಷಸ್ವಾಮಿಯ ಜೋಡಿ ರಥೋತ್ಸವವು ನಿನ್ನೆ ದಿ.೪ರಂದು ಜರುಗಿತು.
ಚಂದ್ರಗ್ರಹಣ ನಿಮಿತ್ತ ಮಧ್ಯಾಹ್ನ ೩ಕ್ಕೆ ರಥೋತ್ಸವ ಆರಂಭವಾಯಿತು. ಪಂಪಾ ವಿರೂಪಾಕ್ಷೇಶ್ವರ ಸ್ವಾಮಿ ಮತ್ತು ಹಂಪಿ ವಿರೂಪಾಕ್ಷ ವಿದ್ಯಾರಣ್ಯ ಪೀಠಾಧೀಶ್ವರ ಸಹಿತ ಚಂದ್ರಮೌಳೇಶ್ವರ ಸ್ವಾಮಿ ಜೋಡಿ ರಥೋತ್ಸವ ಜರುಗಿತು. ನೆರೆದಿದ್ದ ಸಾವಿರಾರು ಭಕ್ತರು ರಥಕ್ಕೆ ಹೂವು, ಹಣ್ಣು ಎಸೆದು ಭಕ್ತಿ ಭಾವ ಮೆರೆದರು. ಬೆಳಿಗ್ಗೆ ಬ್ರಹ್ಮರಥೋತ್ಸವ ನಡೆಯಿತು.
ರಥೋತ್ಸವದಂಗವಾಗಿ ವಿರೂಪಾಕ್ಷೇಶ್ವರ ಸ್ವಾಮಿಗೆ ವಿಜಯನಗರದ ಅರಸು ನೀಡಿದ್ದ ನವರತ್ನ ಖಚಿತ ಕಿರೀಟದೊಂದಿಗೆ ಆಲಂಕರಿಸಲಾಗಿತ್ತು. ರಥೋತ್ಸವಕ್ಕೂ ಮುಂಚೆ ರಥದ ಧ್ವಜ ಹರಾಜು ನಡೆಯಿತು. ಹಂಪಿ ಜಾತ್ರೆಯ ಪ್ರಯುಕ್ತ ವಿರೂಪಾಕ್ಷಸ್ವಾಮಿ ದರ್ಶನಕ್ಕೆ ಬೆಳಿಗ್ಗೆಯಿಂದಲೇ ಜನರು ತಂಡೋಪ ತಂಡವಾಗಿ ಸಾಲಾಗಿ ನಿಂತು ದರ್ಶನ ಪಡೆದರು. ಚಂದ್ರಗ್ರಹಣದ ಪ್ರಯುಕ್ತ ಸಂಜೆ ೪ರಿಂದ ರಾತ್ರಿ ೮ರವರೆಗೆ ವಿರೂಪಾಕ್ಷಸ್ವಾಮಿ ದೇವಾಲಯ ಬಾಗಿಲು ಮುಚ್ಚಲಾಗಿತ್ತು. ಭಕ್ತರು ಹೊರಗಿನಿಂದ ಕೈ ಮುಗಿದು ಹೋಗುವ ದೃಶ್ಯ ಸಾಮಾನ್ಯವಾಗಿತ್ತು. ವಿದ್ಯಾರಣ್ಯ ಭಾರತಿ ಸ್ವಾಮೀಜಿ ವಿರೂಪಾಕ್ಷ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.

Leave a Reply