ಹಂಪಿ ಹೆರಿಟೇಜ್ ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿಪಡಿಸುವುದು ಹೇಗೆ?

  ಕೇಂದ್ರ ಸರ್ಕಾರವು ಹಂಪಿಯನ್ನು ಹೆರಿಟೇಜ್ ಸ್ಮಾರ್ಟ್ ಸಿಟಿ ಮಾಡಲು ಸರಿಯಾಗಿ ಯೋಜಿಸಿಲ್ಲ ಎಂದರು. ಈ ಭಾಗದ ಸಂಸದ ಸದಸ್ಯರು, ವಿಧಾನಸಭೆ ಸದಸ್ಯರು ಹೋರಾಟ ನಡೆಸಿ ಹಂಪಿ ಹೆರಿಟೇಜ್ ಸ್ಮಾರ್ಟ್ ಸಿಟಿ ಮಾಡಲು ಆಸಕ್ತಿವಹಿಸಬೇಕು ಎಂದರು. ಕೇಂದ್ರಸರ್ಕಾರದ ಎಎಸ್‌ಐ ಪ್ರತಿಯೊಂದು ಅಭಿವೃದ್ಧಿ ಕಾಮಗಾರಿಗೆ ಅಡ್ಡಗಾಲು ಹಾಕುತ್ತದೆ. ಹೀಗಾದರೆ ಹಂಪಿಯನ್ನು ಅಭಿವೃದ್ಧಿ ಪಡಿಸುವುದು ಹೇಗೆ? ಕಮಲಾಪುರದ ಬಳಿ ರಸ್ತೆ ನಿರ್ಮಾಣಕ್ಕೂ ಕೂಡಾ ಅಡ್ಡಗಾಲು ಹಾಕಿದೆ. ಆದರೂ ಪುರಾತತ್ವ ಸ್ಮಾರಕಕ್ಕೆ ಧಕ್ಕೆ ತರದಂತೆ ರಸ್ತೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು. 
ನಗರಸಭೆ ಅಧ್ಯಕ್ಷೆ ಕಣ್ಣಿ ಉಮಾದೇವಿ, ಉಪವಿಭಾಗಾಧಿಕಾರಿ ಪವನ್ ಕುಮಾರ್ ಮಾಲಪಾಟಿ, ಅಪರ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ತಹಶೀಲ್ದಾರ್ ಚಂದ್ರಕಾಂತ ಎಲ್.ಡಿ., ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಸಲಾವುದ್ದೀನ್, ತಾಲೂಕು ಪಂಚಾಯ್ತಿ ಅಧ್ಯಕ್ಷ ಸುಲೋಚನಮ್ಮ, ದೀಪಕ್ ಕುಮಾರ್ ಸಿಂಗ್ ಮತ್ತಿತರರು ಹಾಜರಿದ್ದರು. 
Please follow and like us:
error