ಸಿಡಿಲಿಗೆ ಬಲಿಯಾದ ಮಲ್ಲಮ್ಮ ಕಿನ್ನಾಳ ಎಲೆಕ್ಷನ್ ನಲ್ಲಿ ಭರ್ಜರಿ ಜಯ

  ಕೊಪ್ಪಳ ಜಿಲ್ಲೆಯ ಹಾಲವರ್ತಿಯ  ಮಲ್ಲಮ್ಮ ಸಣ್ಣಹನುಮಪ್ಪ ಕಿನ್ನಾಳ  ಈ ಸಲದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ
2ನೇ ವಾರ್ಡಿಗೆ ಸ್ಪರ್ದಿಸಿದ್ದರು. ಗೆಲುವಿಗಾಗಿ ಸಾಕಷ್ಟು
ಪ್ರಚಾರವೂ ಮಾಡಿದ್ದಳು. ಆದರೆ ವಿಧಿ ಬರಹವೇ ಬೇರೆ ಇತ್ತು. ಕಳೆದ ತಿಂಗಳು 27ರಂದು  ಹೊಲದಲ್ಲಿ ಕೆಲಸಕ್ಕೆ ಹೋಗಿದ್ದ ಮಲ್ಲಮ್ಮ ತಾಯಿಯೊಂದಿಗೆ ವಾಪಸ್
ಮನೆಗೆ ಬರುವಾಗ  ಸಿಡಿಲು ಬಡಿದಿತ್ತು. ಸಿಡಿಲಿಗೆ ಸ್ಥಳದಲ್ಲಿಯೇ ಮರಣ ಹೊಂದಿದ್ದಳು ಮಲ್ಲಮ್ಮ.   ಅಭ್ಯರ್ಥಿ ಸಾವನ್ನಪ್ಪಿದ್ದರೂ ಚುನಾವಣಾ
ಆಯೋಗದ ಅನುಮತಿಯೊಂದಿಗೆ ಚುನಾವಣೆ ನಡೆಸಲಾಗಿತ್ತು. ಮೊನ್ನೆ 2 ರಂದು ನಡೆದ ಚುನಾವಣೆಯ ಫಲಿತಾಂಶ ಇಂದು ಹೊರ ಬಂದಿದ್ದು ತನ್ನ ಪ್ರತಿಸ್ಪರ್ಧಿ ಹನುಮವ್ವ ಕೌದಿ
ಎನ್ನುವವರಿಗಿಂತ 64 ಮತಗಳ  ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಈಗ ಕೊಪ್ಪಳ ತಹಸೀಲ್ದಾರ ಚುನಾವಣಾ ಆಯೋಗಕ್ಕೆ ತಿಳಿಸಿದ್ದು ಅವರು ಮಾಹಿತಿ ನೀಡಿದ ನಂತರ ಅಧಿಕೃತವಾಗಿ ಪ್ರಕಟಗೊಳಿಸಲಿದ್ದಾರೆ. 

 ಸತ್ತ ನಂತರವೂ ಗೆಲುವು ಸಾಧಿಸಿದ ಮಲ್ಲಮ್ಮಳ ಕುಟುಂಬದವರು ಸಂಭ್ರಮ ಆಚರಿಸುತ್ತಿದ್ದಾರೆ.
ಗೆದ್ದರೂ ಸಂಭ್ರಮಿಸಲು ಅಭ್ಯರ್ಥಿಯೇ ಇಲ್ಲ. ಎರಡನೇ ಸ್ಥಾನ
ಪಡೆದವರಿಗೆ ಅವಕಾಶ ಸಿಗುತ್ತದೆಯೋ ಇಲ್ಲ  ಮುಂದೆ ಮತ್ತೊಮ್ಮೆ ಮರು ಚುನಾವಣೆ ನಡೆಯುತ್ತದೆಯೋ ಕಾದು ನೋಡಬೇಕು. 

Leave a Reply