You are here
Home > Koppal News > ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ನಾಗರಾಜ ನೆಕ್ಕಂಟಿ ಬಿರುಸಿನ ಪ್ರಚಾರ

ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ನಾಗರಾಜ ನೆಕ್ಕಂಟಿ ಬಿರುಸಿನ ಪ್ರಚಾರ

ಕೊಪ್ಪಳ, ಏ.೦೫ : ಬಿಎಸ್‌ಆರ್ ಕಾಂಗ್ರೆಸ್ ನಿಯೋಜಿತ ಅಭ್ಯರ್ಥಿ ನಾಗರಾಜ ನೆಕ್ಕಂಟಿ ತಾಲೂಕಿನ ವಿವಿದ ಗ್ರಾಮಗಳಲ್ಲಿ ಮತಯಾಚನೆ ಮಾಡುವ ಮೂಲಕ ಬಿಎಸ್‌ಆರ್ ಕಾಂಗ್ರೆಸ್‌ನ್ನು ಹೆಚ್ಚಿನ ಬಹುಮತ ನೀಡಿ ಆರಿಸಿ ತರುವಂತೆ ಮತದಾರರಲ್ಲಿ ಮನವಿ ಮಾಡಿದರು.
    ಏ. ೪ ರಂದು ಅಳವಂಡಿ ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯ ಮೋರನಾಳ, ಬೆಟಗೇರಿ, ಹನಕುಂಟಿಕುಂಟಿ, ಮತ್ತೂರು, ನೀರಲಗಿ, ಕಾತರಕಿ-ಗುಡ್ಲಾನೂರು, ಡೊಂಬರಹಳ್ಳಿ, ಬೂದಿಹಾಳ ಹಾಗೂ ಬಿಸರಹಳ್ಳಿ ಗ್ರಾಮಗಳಲ್ಲಿ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಮುಖಂಡ ಬಿ. ಶ್ರೀನಿವಾಸುಲು, ತಾಲೂಕ ಅಧ್ಯಕ್ಷ ಪ್ರಭುಗೌಡ, ಪಕ್ಷದ ಯುವ ನಾಯಕರಾದ ರಾಮು, ಫಣಿರಾಜ್, ರಾಮಲಿಂಗ, ಪಕೀರಪ್ಪ, ಮಹ್ಮದಸಾಬ, ಪಿ.ಸುರೇಶ, ತಿಮ್ಮಪ್ಪ, ಸೇರಿದಂತೆ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Top