ಬದಲಾವಣೆ ಶಕ್ತಿ ಯುವಕರ ಕೈಯಲ್ಲಿದೆ : ಪ್ರದೀಪಗೌಡ

ಕೊಪ್ಪಳ,ಏ.೦೬: ಕ್ಷೇತ್ರದಲ್ಲಿ ಹೊಸ ಬದಲಾವಣೆ ಗಾಳಿ ಬಿಸಿದ್ದು ಅದು ಯುವಕರ ಕೈಯಲ್ಲಿದೆ. ಯುವಜನತೆಗೆ ಅಸಾಧ್ಯವಾದದ್ದು ಯಾವುದು ಇಲ್ಲವೆಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ನಿಯೋಜಿತ ಅಭ್ಯರ್ಥಿ ಪ್ರದೀಪಗೌಡ ಮಾಲಿ ಪಾಟೀಲ್ ಹೇಳಿದರು.
ಅವರು ಶುಕ್ರವಾರ ನಗರದ ಜವಾಹರ್ ರಸ್ತೆಯಲ್ಲಿ ರಾಕ್‌ಲೈನ್ ಜೀಮ್‌ಗೆ ಭೇಟಿ ನೀಡಿ, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯ ಹಿತದೃಷ್ಟಿಯಿಂದ  ಹಾಗೂ ಯುವ ಜನತೆಯ ಸ್ವಾವಲಂಬನೆಗೆ ಜೆಡಿಎಸ್ ಪಕ್ಷವು ವಿಶೇಷ ಚಿಂತನೆ ನಡೆಸಿದೆ. ಯುವನಾಯಕರಾದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯವರ ಕೈ ಬಲ ಬಡಿಸಲು ಯುವಕರು ಮುಂದಾಗಬೇಕೆಂದರು.
ನಾನು ಯಾವುದೇ ಅಧಿಕಾರದ ಆಮಿಷ್ಯಕ್ಕಾಗಿ ಚುನಾವಣೆಗಿಳಿದಿಲ್ಲ ಕ್ಷೇತ್ರದ ಅಭಿವೃದ್ಧಿಯ ಹಿತಚಿಂತನೆಯಿಂದ ಚುನಾವಣೆ ಕಣಕ್ಕೀಳಿದಿರುವದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಹಿರಿಯ ಮುಖಂಡರಾದ ಎಂ.ಬಿ. ಹುಸೇನ್ ಮಾಸ್ಟರ್, ಕೊಟ್ರಪ್ಪ,  ನ್ಯಾಯವಾದಿ ಆರ್. ಎಂ. ಕಿಲ್ಲೇದರ್, ಆರೀಫ್, ಪಕ್ಷದ ತಾಲೂಕಾಧ್ಯಕ್ಷ ಅಂದಪ್ಪ ಮರೇಬಾಳ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಿ.ಹೆಚ್. ರಮೇಶ ಓನಬಳ್ಳಾರಿ, ಎಸ್.ಟಿ. ಘಟಕದ ಜಿಲ್ಲಾಧ್ಯಕ್ಷ ಮಲ್ಲಪ್ಪ ಫ. ಬೇಲೇರಿ, ನಗರ ಯುವ ಘಟಕದ ಅಧ್ಯಕ್ಷ ಸೈಯದ್ ಮಹೆಮುದ್ ಹುಸೇನಿ,  ಬುಲ್ಲುಸಾಬ, ಸುರೇಂದ್ರ, ನರಸರಡ್ಡಿ, ಜಾಫರ್ ಷಾ, ಆರೀಫ್,  ರಾಜು ಹಲಗೇರಿ, ಇಸೂಫ್‌ಖಾನ್, ವೆಂಕಟೇಶ ಬೆಲ್ಲದ್, ಮಂಜುನಾಥ ಗಡ್ಡದ್, ನಾನಿ, ಮರಿಯಪ್ಪ ಗುಡದಳ್ಳಿ, ರಾಜಶೇಖರ ನಾಯಕ, ಮಹಿಬೂಬ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related posts

Leave a Comment