ಪುಷ್ಪಾದೇವಿ ಚಂಪಾಲಾಲ್ ಮೆಹತಾ ನಿಧನ:

 ಕೊಪ್ಪಳ, ೨೧ : ನಗರದ  ಜೈನ ಸಮಾಜದ ಹಿರಿಯ ಚೇತನವಾಗಿದ್ದ ಪುಷ್ಪಾದೇವಿ ಚಂಪಾಲಲ್ ಮೆಹತಾ ಇಂದು ದಿನಾಂಕ ೨೬-೦೨-೨೦೧೫  ಗುರುವಾರ ನಿಧನರಾದರು. ಮೃತರು ಗಣ್ಯ ವರ್ತಕರಾಗಿದ್ದ ಮೆಹತಾ ಮೆಡಿಕಲ್ಸ್‌ನ ಸ್ಥಾಪಕರು, ಮಾಜಿ ಜಿಲ್ಲಾ ಲಯನ್ಸ್ ಕ್ಲಬ್ ಗವರ್ನರ್ ಹಾಗೂ ಪ್ರಖರ

ವಾಗ್ಮಿಗಳೂ ಆಗಿದ್ದ  ದಿವಂಗತ ಚಂಪಾಲಾಲ್‌ಜಿ ಮೆಹತಾ ಅವರ ಧರ್ಮ ಪತ್ನಿಯಾಗಿರುತ್ತಾರೆ. ಚಂಪಾಲಾಲ್ ಮೆಹತಾ ಅವರು  ನಾಲ್ಕೈದು ದಿವಸಗಳ ಹಿಂದೆ ನಿಧನರಾಗಿದ್ದರು. ಈಗ ಅವರ ಧರ್ಮ ಪತ್ನಿಯೂ ಸಹ ನಿಧನರಾಗಿದ್ದು ಇವರಿರ್ವರ ನಿಧನದಿಂದ ಕೊಪ್ಪಳಕ್ಕೆ ತುಂಬಲಾಗದ ಹಾನಿಯಾಗಿದೆ ಎಂದು ಅವರ ಹಿತೈಸಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರಿಗೆ ನಾಲ್ವರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದಾರೆ.

Please follow and like us:
error