You are here
Home > Koppal News > ನಗರಸಭೆ ಅಧ್ಯಕ್ಷರಿಂದ ಉದ್ಯಾನವನ ವೀಕ್ಷಣೆ

ನಗರಸಭೆ ಅಧ್ಯಕ್ಷರಿಂದ ಉದ್ಯಾನವನ ವೀಕ್ಷಣೆ

ಕೊಪ್ಪಳ,ಅ.೧೩: ನಗರದ ೨೧ನೇ ವಾರ್ಡ್‌ನ ಪದಕಿ ಲೇಔಟ್‌ನ ಹತ್ತಿರ ೨೦೧೧-೧೨ನೇ ಸಾಲಿನ ೧೩ನೇ ಹಣಕಾಸು ಯೋಜನೆಯಡಿಯಲ್ಲಿ ೪.೫೦ ಸಾವಿರ ಉದ್ಯಾನವನ ನಿರ್ಮಾಣದ ಕಾಮಗಾರಿಯನ್ನು ಶನಿವಾರದಂದು ನಗರಸಭೆ ಅಧ್ಯಕ್ಷರಾದ ಸುರೇಶ ದೇಸಾಯಿ, ನಗರಸಭೆ ಉಪಾಧ್ಯಕ್ಷರಾದ ಅಮ್ಜದ್ ಪಟೇಲ್ ವೀಕ್ಷಣೆ ಮಾಡಿದರು.
ನಂತರ ಮಾತನಾಡಿದ ಅವರು, ಉದ್ಯಾನವನವು ತೀವ್ರಗತಿಯಲ್ಲಿ ಹಾಗೂ ಗುಣಮಟ್ಟದ ಕಾಮಗಾರಿ ಮಾಡಬೇಕೆಂದು ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚಿಸಿದರು. 
ಮುಂದುವರೆದು ಮಾತನಾಡಿದ ಅವರು, ಉದ್ಯಾನವನವು ಸಾರ್ವಜನಿಕರ ಅನಕೂಲಕ್ಕಾಗಿ ನಿರ್ಮಿಸಲಾಗಿದ್ದು, ಅದನ್ನು ಸದುಪಯೋಗ ಪಡೆದುಕೊಳ್ಳಲು ಕಾಲೋನಿಯ ಸಾರ್ವಜನಿಕರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷರಾದ ಅಮ್ಜದ್ ಪಟೇಲ್, ಗುತ್ತಿಗೆದಾರರಾದ ಎಸ್.ಎ.ಪಟೇಲ್, ಹಾಜಿ ಹುಸೇನಿ, ರಾಜು ಬಗಾಡೆ, ಆಶ್ರಯ ಸಮಿತಿಯ ಮಾಜಿ ಸದಸ್ಯರಾದ ಜಹೀರ್ ಅಲಿ, ಕಾಲೋನಿಯ ಮತ್ತೀತರರು ಉಪಸ್ಥಿತರಿದ್ದರು.

Leave a Reply

Top