ಶಿವಶರಣೆ ಹೆಮರಡ್ಡಿ ಮಲ್ಲಮ್ಮ ದೇವಸ್ಥಾನದ ಉದ್ಘಾಟನೆ ಹಾಗೂ ವೇಮನ ಮೂರ್ತಿ ಪ್ರತಿಷ್ಠಾಪನೆ ಸಮಾರಂಭ

ನೇರ ವೀಕ್ಷಕ ವಿವರಣೆ
      ಕೊಪ್ಪಳ : ಕಿನ್ನಾಳ ರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಉದ್ಘಾಟನಾ ಸಮಾರಂಭದ ನೇರ ವೀಕ್ಷಕ ವಿವರಣೆಯು ಫೆ.೨ ರಂದು ಗುರುವಾರ ಹೊಸಪೇಟೆ ಎಫ್.ಎಂ.ಕೇಂದ್ರದಿಂದ ಬೆಳಿಗ್ಗೆ ೧೦.೩೦ ರಿಂದ ೧೧.೩೦ ಹಾಗೂ ೧೨.೩೦ ರಿಂದ ೦೧.೪೦ರ ವರೆಗೆ ಪ್ರಸಾರವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
       ಕೊಪ್ಪಳ : ನಗರದ ಕಿನ್ನಾಳ ರಸ್ತೆಯಲ್ಲಿರುವ ಶಿವಶರನೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಉದ್ಘಾಟನೆ ಮತ್ತು ಮೂರ್ತಿ ಪ್ರತಿಷ್ಠಾಪನೆ ಸಮಾರಂಭವು ಫೆ.೨ ರಂದು ಬೆಳಿಗ್ಗೆ ೧೦ ಗಂಟೆಗೆ ಜರುಗಲಿದೆ. ಸಮಾರಂಭದ ದಿವ್ಯ ಸಾನಿಧ್ಯವನ್ನು ಗವಿಸಿದ್ಧೇಶ್ವರ ಮಹಾಸ್ವಾಮಿಗಳು, ಯರೇಹೊಸಳ್ಳಿ ಹರಿಹರದ ವೇಮಾನಂದ ಮಹಾಸ್ವಾಮಿಗಳು, ಬಳಗಾನೂರಿನ ಶಿವಶಾಂತವೀರ ಶರಣರು, ಬೆದವಟ್ಟಿಯ ಶಿವಸಂಗಮೇಶ್ವರ ಶಿವಾಚಾರ್ಯರು, ನಂದಿಪುರದ ಮಹೇಶ್ವರ ಮಹಾಸ್ವಾಮಿಗಳು ವಹಿಸಿಕೊಳ್ಳುವರು.
       ವಸತಿ ಸಚಿವ ವಿ.ಸೋಮಣ್ಣನವರು ಮೂರ್ತಿ ಪ್ರತಿಷ್ಠಾಪನೆ ಹಾಗೂ ದೇವಸ್ಥಾನದ ಉದ್ಘಾಟನೆಯನ್ನು ನೆರವೇರಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಜ್ಯೋತಿ ಬೆಳಗಿಸುವರು. ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಎಚ್.ಕೆ.ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವ ಬಸವರಾಜ ರಾಯರೆಡ್ಡಿ ವಸತಿ ನಿಲಯವನ್ನು ಉದ್ಘಾಟಿಸುವರು. ವಿಧಾನ ಪರಿಷತ್ ಸದಸ್ಯ ಎಸ.ತಿಪ್ಪಣ್ಣ ಪುಸ್ತಕ ಬಿಡುಗಡೆಗೊಳಿಸುವರು. ಶಾಸಕ ಸಂಗಣ್ಣ ಕರಡಿ ಶಾಲಾ ಕಟ್ಟಡದ ಅಡಿಗಲ್ಲು ನೆರವೇರಿಸುವರು. ಮಾಜಿ ಸಚಿವ ಬಸವರಾಜ ಪಾಟೀಲ್ ಅನ್ವರಿ, ಶಾಸಕ ಅಮರೇಗೌಡ ಬಯ್ಯಾಪುರ, ವಿಧಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ್, ಸೂರ್ಯನಾರಾಯಣ ರೆಡ್ಡಿ, ಕರುಣಾಕರರೆಡ್ಡಿ, ಆರ.ಎಸ್.ಪಾಟೀಲ್, ದೊಡ್ಡನಗೌಡ ಪಾಟೀಲ್, ಡಿ.ಆರ್.ಪಾಟೀಲ್, ಸಿ.ಎಸ್.ಪಾಟೀಲ್, ಅಜಯಕುಮಾರ ಸರನಾಯಕ, ಎಸ್.ಆರ್.ಪಾಟೀಲ್, ಶರಣಪ್ಪ ದರ್ಶನಾಪೂರ, ಹಂಪನಗೌಡ ಬಾದರ್ಲಿ, ಎ.ಜಿ.ಮಲಕರೆಡ್ಡಿ, ಜಿ.ವೀರಪ್ಪ, ಬಸವನಗೌಡ ಬ್ಯಾಗವಾಟ, ವೆಂಕಟರಾವ್ ನಾಡಗೌಡ, ವೈ.ಜಿ.ಆಲೂರು, ಶೇಖರಗೌಡ ಮಾಲೀಪಾಟೀಲ್, ಎಚ್.ಟಿ.ಸೋಮಶೇಖರರೆಡ್ಡಿ, ಎಚ್.ಗೀರೇಗೌಡ, ಎಲ್.ಜಿ.ಕುಂಟನಗೌಡ, ಎಂ.ಆರ್.ಪಾಟೀಲ್, ವಿಜಯ ಡಂಬಳ, ಆರ್,ಟಿ.ಜಂಗಲ್, ಜಿ.ಎಸ್.ಮೆಟಿ, ಶರಣಪ್ಪ ಭಾವಿ, ಮಲ್ಲಯ್ಯ ಹಂಚಿನಾಳ, ಶಿವರಾಮೇಗೌಡ, ಪರಣ್ಣ ಮುನವಳ್ಳಿ, ಈಶಣ್ಣ ಗುಳಗಣ್ಣವರ್, ಶಿವರಾಜ ತಂಗಡಗಿ, ವಿರುಪಣ್ಣ ಅಗಡಿ, ಜ್ಯೋತಿ ಬಿಲ್ಗಾರ್, ಕೆ.ಬಸವರಾಜ ಹಿಟ್ನಾಳ, ಡಾ.ಸೀತಾ ಗೂಳಪ್ಪ ಹಲಗೆರಿ, ಸುರೇಶ ದೇಸಾಯಿ, ಅಪ್ಪಣ್ಣ ಪದಕಿ, ಡಾ.ಅಮಾತೆಪ್ಪನವರ್ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.
Please follow and like us:
error