You are here
Home > Koppal News > ಕೊಪ್ಪಳ : ಚುನಾವಣಾ ವೀಕ್ಷಕರ ನೇಮಕ

ಕೊಪ್ಪಳ : ಚುನಾವಣಾ ವೀಕ್ಷಕರ ನೇಮಕ


ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲಾ ವ್ಯಾಪ್ತಿಯ ಕ್ಷೇತ್ರಗಳ ಚುನಾವಣಾ ಚಟುವಟಿಕೆಗಳ ಬಗ್ಗೆ ನಿಗಾ ವಹಿಸಲು ಚುನಾವಣಾ ಆಯೋಗ ವಿವಿಧ ರಾಜ್ಯಗಳ ಐಎಎಸ್, ಐಎಫ್‌ಎಸ್. ಸೇರಿದಂತೆ ವಿವಿಧ ವೃಂದದ ಅಧಿಕಾರಿಗಳನ್ನು ಚುನಾವಣಾ ವೀಕ್ಷಕರನ್ನು ನೇಮಕಗೊಳಿಸಿದೆ.

ಕುಷ್ಟಗಿ ವಿಧಾನಸಭಾ ಕ್ಷೇತ್ರಕ್ಕೆ ಮಹಾರಾಷ್ಟ್ರ ರಾಜ್ಯದ ಅರಣ್ಯ ಪ್ರದೇಶಾಭಿವೃದ್ಧಿ ನಿಗಮ, ನಾಗಪುರದ ಅಧಿಕಾರಿ ಎ.ಎಸ್.ಕೆ. ಸಿನ್ಹಾ (೯೪೮೧೪೩೭೨೩೪) ಅವರನ್ನು ಚುನಾವಣಾ ವೀಕ್ಷಕರನ್ನಾಗಿ ನೇಮಿಸಿದೆ. ಇವರಿಗೆ ಲೈಜನ್ ಅಧಿಕಾರಿಯಾಗಿ ಕೊಪ್ಪಳದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮುನವಳ್ಳಿ (೯೪೪೯೫೪೯೮೯೨) ಅವರನ್ನು ನೇಮಿಸಲಾಗಿದೆ.

ಕನಕಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಕೇರಳ ರಾಜ್ಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿ.ಬಿ.ಎಸ್. ಮೋಹನ್ (೯೪೮೧೬೪೭೨೩೪) ಅವರನ್ನು ಚುನಾವಣಾ ವೀಕ್ಷಕರನ್ನಾಗಿ ನೇಮಿಸಲಾಗಿದ್ದು, ಇವರಿಗೆ ಲೈಜನ್ ಅಧಿಕಾರಿಯನ್ನಾಗಿ ವೀರೇಶ್ ದೊಡ್ಡಮನಿ (೯೪೮೧೫೪೮೭೨೫) ಅವರನ್ನು ನೇಮಿಸಿದೆ.

ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಬಿಹಾರ ರಾಜ್ಯ ಹಣಕಾಸು ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಪ್ರಭಾತ್ ಶಂಕರ್ (೯೪೮೧೬೮೩೨೩೪) ಅವರನ್ನು ಚುನಾವಣಾ ವೀಕ್ಷಕರನ್ನಾಗಿ ನೇಮಿಸಲಾಗಿದೆ. ಇವರಿಗೆ ಲೈಜನ್ ಅಧಿಕಾರಿಯಾಗಿ ಹುಸೇನಪ್ಪ (೯೯೮೦೧೫೦೨೯೩) ಅವರನ್ನು ನೇಮಕ ಮಾಡಲಾಗಿದೆ.

ಯಲಬುರ್ಗಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಉತ್ತರಪ್ರದೇಶ ರಾಜ್ಯದ ಐಎಎಸ್ ಅಧಿಕಾರಿ ಭರತ್‌ಲಾಲ್ ರೈ (೯೪೮೧೮೪೦೨೩೪) ಅವರನ್ನು ಚುನಾವಣಾ ವೀಕ್ಷಕರಾಗಿ ನೇಮಿಸಲಾಗಿದ್ದು, ಇವರಿಗೆ ಲೈಜನ್ ಅಧಿಕಾರಿಯನ್ನಾಗಿ ಬಾಬು ಲೈನೆದಾರ್ (೯೩೭೯೬೬೦೦೭೧) ಅವರನ್ನು ನೇಮಿಸಿದೆ.

ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಬಿಹಾರ ರಾಜ್ಯ ಸಮಾಜ ಕಲ್ಯಾಣ ಇಲಾಖೆ ಜಂಟಿಕಾರ್ಯದರ್ಶಿ ನೀಲಂ ಗುಪ್ತಾ ಅವರನ್ನು ಚುನಾವಣಾ ವೀಕ್ಷಕರನ್ನಾಗಿ ನೇಮಿಸಲಾಗಿದೆ. ಇವರಿಗೆ ಲೈಜನ್ ಅಧಿಕಾರಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಸೌಭಾಗ್ಯ (೯೬೬೩೯೭೪೨೭೯) ಅವರು ಕಾರ್ಯ ನಿರ್ವಹಿಸಲಿದ್ದಾರೆ.

ವೆಚ್ಚ ವೀಕ್ಷಕರು : ಕೊಪ್ಪಳ ಜಿಲ್ಲಾ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಸ್ಫರ್ಧಿಸಲಿರುವ ಅಭ್ಯರ್ಥಿಗಳ ಖರ್ಚು-ವೆಚ್ಚಗಳ ಬಗ್ಗೆ ನಿಗಾ ವಹಿಸಲು ಚುನಾವಣಾ ಆಯೋಗ ಇಬ್ಬರು ಅಧಿಕಾರಿಗಳನ್ನು ವೆಚ್ಚ ವೀಕ್ಷಕರನ್ನಾಗಿ ನೇಮಿಸಿದೆ. ಕುಷ್ಟಗಿ, ಕನಕಗಿರಿ ಮತ್ತು ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸಂಜೀವ್ ಕೆ. ಸಿಂಗ್ (೯೪೮೨೧೬೪೨೩೪) ಅವರನ್ನು ನೇಮಿಸಲಾಗಿದ್ದು, ಇವರಿಗೆ ಲೈಜನ್ ಅಧಿಕಾರಿಯಾಗಿ ಎ.ವೈ. ಕಾಂಬ್ಳೆ (೯೮೮೦೪೨೨೯೭೮) ಅವರನ್ನು ನೇಮಕ ಮಾಡಲಾಗಿದೆ. ಕೊಪ್ಪಳ ಮತ್ತು ಯಲಬುರ್ಗಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಶಶಿಕಾಂತ್ (೯೪೮೦೬೩೯೨೩೪) ಅವರನ್ನು ವೆಚ್ಚ ವೀಕ್ಷಕರನ್ನಾಗಿ ಚುನಾವಣಾ ಆಯೋಗ ನೇಮಕ ಮಾಡಿದ್ದು, ಇವರಿಗೆ ಲೈಜನ್ ಅಧಿಕಾರಿಯಾಗಿ ರವಿಕುಮಾರ್ (೭೮೨೯೮೯೬೧೬೧) ಅವರನ್ನು ನೇಮಿಸಲಾಗಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.Leave a Reply

Top