ಶೈಕ್ಷಣಿಕ ಕ್ರಾಂತಿಗೆ ಆರ್‌ಡಿಟಿಇ ಸಂಸ್ಥೆ ಪರಿಶ್ರಮ – ನವೀನ ಗುಳಗಣ್ಣವರ

ಕೊಪ್ಪಳ, ನ. ೪. ಆರ್ ಡಿ ಟಿ ಇ ಸಂಸ್ಥೆಯು ಕೊಪ್ಪಳ ಜಿಲ್ಲೆಯಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಲು ಪಣತೊಟ್ಟಿದ್ದು, ಈಗಾಗಲೇ ಹತ್ತು ವಿಭಾಗಗಳನ್ನು ತೆರೆದಿದ್ದು ಗ್ರಾಮೀಣ ಜನರೂ ಸಹ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಸ್ಥೆಯ ಆಡಳಿತಾಧಿಕಾರಿ ನ”ನಕುಮಾರ ಗುಳಗಣ್ಣವರ ಹೇಳಿದರು.
ಅವರು ತಾಲೂಕಿನ ಹಿರೇಸಿಂದೋಗಿ ಗ್ರಾಮದಲ್ಲಿ ಆರ್ ಡಿ ಟಿ ಇ ಸಂಸ್ಥೆಯ ಇಸ್ಸಾರ್ ಎಂ ಎಸ್ ಡಬ್ಲ್ಯೂ ಕಾಲೇಜಿನ ಸಮಾಜ ಕಾರ್ಯ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಪ್ರತಿ ವರ್ಷ ಕಾಲೇಜಿನ ಬೆಳವಣಿಗೆ ಜೊತೆಗೆ ಯುವ ಜನರಿಗೆ ಹೆಚ್ಚು ಹೆಚ್ಚು ಅನುಕೂಲ ಕಲ್ಪಿಸಿ ಕೊಡಲಾಗುತ್ತಿದೆ. ಬರುವ ದಿನಗಳಲ್ಲಿ ಇನ್ನೂ ಉತ್ತಮ ಕೆಲಸ ಮಾಡಿಕೊಡಲಾಗುತ್ತದೆ. ಸಮಾಜ ಕಾರ್ಯ ಶಿಬಿರದಲ್ಲಿ ಶಿಬಿರಾರ್ಥಿಗಳು ಮಾಡಿದ ಸಮೀಕ್ಷರಯ ಆಧಾರದ ಮೇಲೆ ಜಿಲ್ಲಾಧಿಕಾರಿಗಳ ಹಾಗೂ ಸೂಕ್ತ ಅಧಿಕಾರಿಗಳ ಗಮನಕ್ಕೆ ತಂದು ಹಿರೇಸಿಂದೋಗಿ ಗ್ರಾಮಕ್ಕೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಲಾಗುವದು ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಮಾಜ ಕಾರ್ಯ ವಿಭಾಗದ ನಿರ್ದೇಶಕರಾದ . ಐ. ನಾಡಗೌಡ್ರು, ಗ್ರಾಮ ಪಂಚಾಯತಿ ಅಧ್ಯಕ್ಷೆ ಕಾಶಮ್ಮ ಗೋಡಿ, ಯುವ ಮುಖಂಡ ಪ್ರಭು ಮೈನಳ್ಳಿ ಮಾತನಾಡಿದರು. ಕಾಲೇಜಿನ ಉಪನ್ಯಾಸಕರಾದ ಕಿಲಾರಿ ಉಮೇಶಬಾಬು, ಕಿರಣಕುಮಾರ ಎಂ. ಕೆ., ನಾಗಯ್ಯಸ್ವಾ” ಇತರರಿದ್ದರು.
ಪುಷ್ಪಾ ಅರಕೇರಿ ಮತ್ತು ಶಿಲ್ಪಾ ಬಾರಕೇರ ಪ್ರಾರ್ಥಿಸಿದರು, ಪ್ರಧ್ಯುಮ್ನ ಅಗ್ನಿಹೋತ್ರಿ ಸ್ವಾಗತಿಸಿದರು, ಶಿಬಿರದ ಸಂಯೋಜಕರಾದ ರಘು ವೈ. ಶಿಬಿರದ ವರದಿ ವಾಚನ ಮಾಡಿದರು, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಮಂಜುನಾಥ ಗೊಂಡಬಾಳ ಮತ್ತು ಕಸ್ತೂರಿ ಕೌದಿ ಜಂಟಿಯಾಗಿ ಕಾರ್ಯಕ್ರಮ ನಿರೂಪಿಸಿದರು. ಗ್ರಾಮದ ಪರವಾಗಿ ಉಮೇಶ ಬರೆಡ್ಡಿ ಮತ್ತು ಪ್ರಮೋದ ರಡ್ಡಿ ಮಾತನಾಡಿದರು, ಅನುರಾಧಾ ಸಂಗರೆಡ್ಡಿ ವಂದಿಸಿದರು. ಉಮೇಶ ಲಮಾಣಿ, ಮಂಜುನಾಥ ಪಾಟೀಲ್, ಮಹೇಶ ಕುರಿ, ನಾಗರತ್ನ ಮ್ಯಾಳಿ, ಜ್ಯೋತಿ ಬಳಿಗಾರ, ಸುನಿತಾ ಕರೆಬಾಲಪ್ಪನವರ, ಮಂಜುಳಾ, ಫಕೀರಪ್ಪ ಕಲಾಲ್, ಗಜಾನನ ನರಗುಂದ, ನಿಂಗರಾಜ ಮುಂಡರಗಿ, ಪ್ರಕಾಶ ನಾಯಕ, ಸುಭಾನ, ಪ್ರಕಾಶ ಟಿ., ಇತರರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಜನಮನ ರಂಜಿಸಿದರು.
Please follow and like us:
error