ಸತತ ಪ್ರಯತ್ನದಿಂದ ಸಾಧನೆ ಸಾಧ್ಯ – ಮಂಜುನಾಥ ಡೊಳ್ಳಿನ

ಸತತ ಪ್ರಯತ್ನದ ಮೂಲಕ ಮಹತ್ವದ ಸಾಧನೆ ಮಾಡಬಹುದು ಎಂಬುದನ್ನು ಗಿಣಿಗೇರಿ ಗ್ರಾಮದ ಬೇಂದ್ರೆ ಪಬ್ಲಿಕ್ ಸ್ಕೂಲ್ ಸಾಬೀತ ಪಡಿಸಿದೆ ಎಂದು  ಹೊಸಪೇಟೆ ಆಕಾಶವಾಣಿ ಸಹಾಯಕ ಪ್ರಸಾರ ನಿರ್ವಾಹಕ ಮಂಜುನಾಥ ಡೊಳ್ಳಿನ ಹೇಳಿದರು.

ಅವರು ಕೊಪ್ಪಳ ತಾಲೂಕಿನ ಗಿಣಿಗೇರಿ ಗ್ರಾಮದ ಶ್ರೀ ಗವಿಶ್ರೀ ಗ್ರಾಮೀಣಾಭಿವೃದ್ಧಿ ಶಿಕ್ಷಣ ಮತ್ತು ಸೇವಾ ಸಂಸ್ಥೆಯ ಬೇಂದ್ರೆ ಪಬ್ಲಿಕ್ ಸ್ಕೂಲ್ ನ ಶಾಲಾ ತೃತೀಯ ವಾರ್ಷಿಕೋತ್ಸದ ಅಂಗವಾಗಿ ಶನಿವಾರ ಬೆಳಿಗ್ಗೆ ಹಮ್ಮಿಕೊಂಡಿದ್ದ ಸರಸ್ವತಿ ಪೂಜಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಶಿಕ್ಷಣ ನೀಡಬೇಕು ಎಂಬ ಸದುದ್ದೇಶದಿಂದ  ಬೇಂದ್ರೆ ಪಬ್ಲಿಕ್ ಸ್ಕೂಲ್ ಶಾಲೆಪ್ರಾರಂಭಿಸಿದ್ದು ಶ್ಲಾಘನೀಯ. ವಿದ್ಯಾರ್ಥಿಗಳಿಗೆ ಇಂದಿನ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವಂತಹ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ ವಿದ್ಯಾರ್ಥಿಗಳ ಬೆಳವಣಿಗೆಗೆ ಶ್ರಮಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ವೈದ್ಯ ಡಾ| ಗವಿ ಪಾಟೀಲ ಮಾತನಾಡಿ ದ.ರಾ.ಬೇಂದ್ರೆಯವರು ಹಾಗೂ ಸಂಸ್ಥೆಯ ಹೆಸರು ಶ್ರೀಗವಿಸಿದ್ಧೇಶ್ವರರು ಇಬ್ಬರೂ ಶಿಕ್ಷಣ ಹಾಗೂ ಸಂಸ್ಕಾರ ಎರಡು ಕಣ್ಣುಗಳಂತೆ ತಿಳಿಸಿದವರು ಅವರ ಹೆಸರು ಹೊಂದಿರುವ ಈಶಾಲೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗ ಭಾಗವಹಿಸಿದ್ದ ಡಾ|ಮಂಜುನಾಥ ಸಜ್ಜನ್ ಮಾತನಾಡಿ ಶಿಕ್ಷಕರು ಮನುಕುಲದ ಗುರುಗಳಿದ್ದಂತೆ ಈ ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಮಕ್ಕಳಿಗೆ ಆರಂಭದಲ್ಲಿ ಗುಣಮಟ್ಟದ ಶಿಕ್ಷಣ ನೀಡಿ ವಿಶ್ವಮಟ್ಟದಲ್ಲಿ ಮಕ್ಕಳ ಪ್ರತಿಭೆ ಬೆಳೆಸಲು ಕಾರಣಿಭೂತರಾಗಿ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಗವಿಶ್ರೀ ಗ್ರಾಮೀಣಾಭಿವೃದ್ಧಿ ಶಿಕ್ಷಣ ಮತ್ತು ಸೇವಾ ಸಂಸ್ಥೆ ಕಾರ್ಯದರ್ಶಿ ಮಂಜುನಾಥ ಅಂಗಡಿ ವಹಿಸಿದ್ದರು. ವೇದಿಕೆ ಮೇಲೆ ಸಂಸ್ಥೆ ಉಪಾಧ್ಯಕ್ಷ ರಮೇಶ ತುಪ್ಪದ, ಸದಸ್ಯ ಹುಲಗಪ್ಪ ಕಟ್ಟಿಮನಿ, ಮುಖ್ಯೋಪಾಧ್ಯಾಯ ಬಸವರಾಜ ಶಿರಗುಂಪಿಶೆಟ್ಟರ್ ಹಾಜರಿದ್ದರು.
ಈ ಸಂದರ್ಭದಲ್ಲಿ ಶಾಲಾಮಕ್ಕಳಿಗೆ ಛದ್ಮ ವೇಷಭೂಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಪ್ರಾರಂಭದಲ್ಲಿ ಸಂಸ್ಥೆ ಅಧ್ಯಕ್ಷ ಸಂತೋಷ ದೇಶಪಾಂಡೆ ಸ್ವಾಗತಿಸಿದರು. ಸಹಶಿಕ್ಷಕಿ ಶಾರದಾ ಕೊರಗಲ್ ನಿರೂಪಿಸಿದರು, ಕೊನೆಯಲ್ಲಿ ಸಹಶಿಕ್ಷಕಿ ಶ್ರೀಮತಿ ಭಾಗ್ಯ ವಂದಿಸಿದರು.

Leave a Reply