೨೮ ನೇ ಶರಣ ಮೇಳದ ಪ್ರಚಾರ ಕಾರ್ಯಕ್ರಮ

 ಐತಿಹಾಸಿಕ ಪ್ರಸಿದ್ಧವಾದ  ಸುಕ್ಷೇತ್ರ ಕೂಡಲ ಸಂಗಮದಲ್ಲಿ ಮುಂಬರುವ ಜನೆವರಿ ೧೧ ರಿಂದ ೧೫ ರವರೆಗೆ ೨೮ ನೇ ಶರಣ ಮೇಳವು ಅತ್ಯಂತ ಮಹತ್ವ ಪೂರ್ಣವಾಗಿ, ಅರ್ಥ ಪೂರ್ಣವಾಗಿ ಜರುಗಲಿದೆ. 
ಈ ಶರಣ ಮೇಳದ ಪ್ರಚಾರಾರ್ಥ ಬಸವ ಧರ್ಮ ಪೀಠ ಕೂಡಲಸಂಗಮದ ಪರಮಪೂಜ್ಯರು, ಧಾರವಾಡದ ಅಕ್ಕಮಹಾದೇವಿ ಅನುಭಾವ ಪೀಠದ ದ್ವಿತೀಯ ಜಗದ್ಗುರುಗಳಾದ ಪೂಜ್ಯ ಶ್ರೀ ಮಾತೆ  ಗಂಗಾದೇವಿಯವರು ಇದೇ ತಿಂಗಳ ದಿನಾಂಕ ೨೪.೨೫,೨೬ ರಂದು ಕೊಪ್ಪಳಕ್ಕೆ ಆಗಮಿಸಲಿದ್ದಾರೆ ದಿನಾಂಕ ೨೪ ಸೋಮವಾರದಂದು ಕೊಪ್ಪಳ ತಾಲೂಕಿನ ಕುಣಿಕೇರಿ ಗ್ರಾಮದ ಜೋಡಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶರಣ ಮೇಳದ ಪ್ರಚಾರ ಕಾರ್ಯಕ್ರಮವನ್ನು, ದಿನಾಂಕ ೨೫ ರಂದು ಮಂಗಳವಾರದಂಧು ಯಲಬುರ್ಗಾ ತಾಲೂಕಿನ ಕುಕನೂರು ಗ್ರಾಮದ ಮಹಾಮಾಯ ದೇವಸ್ಥಾನದ ಆವರಣದಲ್ಲಿ  ಹಾಗೂ ದಿನಾಂಕ ೨೬ ರಂದು ಕೊಪ್ಪಳ ನಗರದ ಕಿನ್ನಾಳ ರಸ್ತೆಯಲ್ಲಿರುವ ಬಸವ ಮಂಟಪದಲ್ಲಿ ಏರ್ಪಡಿಸಲಾಗಿದೆ.  ಈ ಪ್ರಯುಕ್ತ ಕೊಪ್ಪಳ ಜಿಲ್ಲೆಯ ಸಕಲ ಬಸವಾಭಿಮಾನಿಗಳು ಹಾಗೂ ಸಕಲ ಸದ್ಬಕ್ತರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ವಿಶ್ವ ಗುರು ಬಸವಣ್ಣನವರ ಕೃಪೆಗೆ ಪಾತ್ರರಾಗಲು ಕಳಕಳಿಯಿಂದ ತಿಳಿಯಪಡಿಸಲಾಗಿದೆ. 

Related posts

Leave a Comment