ಮೌಢ್ಯಾಚರಣೆ ನಿಷೇಧ ಮಸೂದೆ ಜಾರಿಗೆ ಒತ್ತಾಯಿಸಿ ಪೂರ್ವಭಾವಿ ಸಭೆ.

ಕೊಪ್ಪಳ, ಅ. ೨೩ ಮೌಢ್ಯಾಚರಣೆ ಮಸೂದೆಯನ್ನು ಜಾರಿಗೆ ತರಬೇಕೆಂದು ಕರ್ನಾಟಕ ಸರ್ಕಾರವನ್ನು ಒತ್ತಾಯಿಸಲು ಅ.೩೦ ರಂದು ಜಿಲ್ಲಾಧಿಕಾರಿಗಳ ಮೂಲಕ  ಮುಖ್ಯ ಮಂತ್ರಿಗಳಿಗೆ ಮನವಿ ಪತ್ರ ಅರ್ಪಿಸುವ ಕುರಿತು ಪೂರ್ವಭಾವಿ  ಸಭೆಯನ್ನು ಅ. ೨೫ ರಂದು ಬೆಳಿಗ್ಗೆ ೧೧ ಗಂಟೆಗೆ ಐ. ಬಿ.ಯಲ್ಲಿ ಕರೆಯಲಾಗಿದೆ.
    ಈ ಸಭೆಗೆ ಆಸಕ್ತರನ್ನೆಲ್ಲ ಆಹ್ವಾನಿಸಲಾಗಿದೆ. ಈ ವಿಷಯದ ಬಗ್ಗೆ ಆಸಕ್ತಿಯಿರುವ ಎಲ್ಲರಿಗೂ ಮುಕ್ತ ಅವಕಾಶವಿದೆ ಎಂದು ಕೊಪ್ಪಳ ಜಿಲ್ಲಾ ಮೌಢ್ಯಾಚರಣೆ ನಿಷೇಧ ಸಮಿತಿಯ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು, ಎಚ್. ಎಸ್. ಪಾಟೀಲ ಮತ್ತು ವಿಠ್ಠಪ್ಪ ಗೋರಂಟ್ಲಿ ಅವರು ತಿಳಿಸಿದ್ದಾರೆ.
Please follow and like us:
error

Related posts

Leave a Comment