ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಗೌರವ ಕಾವ್ಯ ಸ್ಪರ್ಧೆ

‘ಶೂದ್ರ’ ಸಾಹಿತ್ಯಕ ಪತ್ರಿಕೆಯು ಕೆಲವು ವರ್ಷಗಳಿಂದ ಕಾವ್ಯರಚನೆಯನ್ನು ಉತ್ತೇಜಿಸುವುದಕ್ಕಾಗಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ಹೆಸರಿನಲ್ಲಿ ಗೌರವ ಕಾವ್ಯಸ್ಪರ್ಧೆಯನ್ನು ನಡೆಸುತ್ತ ಬಂದಿದೆ. ಈ ಬಾರಿಯ ಈ ಕಾವ್ಯಸ್ಪರ್ಧೆಗೆ 2008 ಮತ್ತು 2009ನೇ ಸಾಲಿನ ಕವನಸಂಕಲನಗಳನ್ನು ಪರಿಗಣಿಸಲಾಗುವುದು. ಪ್ರಶಸ್ತಿ ಪತ್ರದ ಜೊತೆಗೆ ಪ್ರಶಸ್ತಿಯ ಮೊತ್ತ ಹದಿನೈದು ಸಾವಿರ ರೂ.ಗಳು (ರೂ. 15,000/-). ದಯವಿಟ್ಟು ಕಾವ್ಯಾಸಕ್ತರು ತಮ್ಮ ಸಂಕಲನದ ಮೂರು ಪ್ರತಿಗಳನ್ನು ಆಗಸ್ಟ್ 20ರೊಳಗೆ ಕೆಳಗಿನ ವಿಳಾಸಕ್ಕೆ ಕಳಿಸಿಕೊಡಬೇಕಾಗಿ ವಿನಂತಿ.
ನಿಮ್ಮ,
ಶೂದ್ರ ಶ್ರೀನಿವಾಸ್
ವಿಳಾಸ
ಶೂದ್ರ ಶ್ರೀನಿವಾಸ್
‘ಕಾವಿಮನೆ’, ಮಾನಸ ವಿದ್ಯಾಕೇಂದ್ರ
ಅಣ್ಣಯ್ಯರೆಡ್ಡಿ ಬಡಾವಣೆ, ಜೆ.ಪಿ.ನಗರ 6ನೇ ಹಂತ
ಬೆಂಗಳೂರು – 560 078.
ದೂರವಾಣಿ : 22451762 / 9341234456
Please follow and like us:
error