fbpx

೩೭೧(ಜೆ) ತಿದ್ದುಪಡಿ ಅನುಷ್ಠಾನಗೊಳಿಸುವಲ್ಲಿ ಸರ್ಕಾರ ವಿಫಲ : ಡಾ|| ರಜಾಕ್‌ಉಸ್ತಾದ್

ಹೈದ್ರಾಬಾದ್ ಕರ್ನಾಟಕ ವಿಮೋಚನೆ ನಂತರ ಸ್ಥಿತಿಗತಿಗಳ ಬಗ್ಗೆ ವಿಚಾರ ಸಂಕೀರ್ಣ ಮತ್ತು ಸಂವಾದ ಕ್ರಾಂತಿಕೇಂದ್ರದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾರದ್ವಾಜ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ವಲ್ಲಭಬಾಯಿ ಪಟೇಲ್‌ರ ಜನವಿರೋಧಿ ಮುಖವನ್ನು ಬಿಚ್ಚಿಟ್ಟರು. ಉಪನ್ಯಾಸಕರಾದ ಡಾ|| ಜಾಜಿ ದೇವೇಂದ್ರಪ್ಪನವರು ವಿಷಯ ಮಂಡನೆ ಮಾಡುತ್ತಾ ಹಿಂದಿನ ಜಾಗೀರದಾರಿ  ಭೂಮಾಲೀಕರು, ಇಂದಿನ ಸಂಸದರು, ಶಾಸಕರಾಗಿ ಬ್ರಷ್ಠಾಚಾರವೆಸಗಿ ಅನುದಾನಗಳನ್ನು ಜನಪರ ಯೋಜನೆಗಳಿಗೆ ಮುಟ್ಟದಂತೆ ಮಾಡಿ ಹೈದ್ರಾಬಾದ್ – ಕರ್ನಾಟಕ ಅಭಿವೃದ್ಧಿಯಾಗದಂತೆ ಮಾಡುತ್ತಿದ್ದಾರೆಂದು ಅಭಿಪ್ರಾಯಪಟ್ಟರು. ಹೈದ್ರಾಬಾದ್-ಕರ್ನಾಟಕದ ೩೭೧(ಜೆ) ಕಲಂ ಹೊರಾಟಗಾರರಾದ  ಡಾ|| ರಜಾಕ್‌ಉಸ್ತಾದ್ ಮಾತನಾಡಿ ಹೈದ್ರಾಬಾದ್ – ಕರ್ನಾಟಕ ರಾಜಕಾರಣಿಗಳ ನಿರ್ಲಕ್ಷ್ಯದಿಂದ ೩೭೧ (ಜೆ) ನಲ್ಲಿ ಶಿಕ್ಷಣ ಮತ್ತು ಉದ್ಯೋಗ ಮೀಸಲಾತಿಯಲ್ಲಿ ಈ ಪ್ರದೇಶದ ಜನರಿಗೆ ಅನ್ಯಾಯವಾಗಿದೆ, ನ್ಯಾಯಕ್ಕಾಗಿ ಹೋರಾಟ ಮಾಡದೇ ಅನ್ಯ ಮಾರ್ಗವಿಲ್ಲವೆಂದು ಪ್ರತಿಪಾದಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾ|| ಶಂಕರರವರು ಮಾತನಾಡಿ ತನ್ನ ವಿದ್ಯಾರ್ಥಿ ದೆಶೆಯಲ್ಲಿ ಮೂರು ಹೋರಾಟಗಳು ತನ್ನಲ್ಲಿ ಹೋರಾಟದ ದಾರಿಯನ್ನು ಗಟ್ಟಿಗೊಳಿಸಿದವು. ಅವುಗಳು ೧೮೫೭ ರ ಪ್ರಥಮ ಸ್ವಾತಂತ್ರ ಸಂಗ್ರಾಮ (ಸಿಪಾಯಿದಂಗೆ) ೧೯೪೫ ರಿಂದ ೧೯೫೨ ರವರೆಗೆ ನಡೆದ ತೆಲಂಗಾಣ ಹೋರಾಟ, ೧೯೬೭ ರ ಹಸಿವಿನ (ನಕ್ಸಲ್‌ಬರಿ) ಹೋರಾಟ ಎಂದಿದ್ದಾರೆ. 
ಈ ಸಂವಾದದಲ್ಲಿ ಸಾಹಿತಿಗಳಾದ ವಿಠ್ಠಪ್ಪ ಗೋರಂಟ್ಲಿ, ಪೀರಭಾಷಾ, ನಾರಾಯಣ ಬೆಳಗುರ್ಕಿ, ಸಿ.ಹೆಚ್.ನಾರಿನಾಳ, ಹೋರಾಟಗಾರರಾದ ಡಿ.ಹೆಚ್.ಪೂಜಾರ್, ಹೆಚ್.ಎನ್. ಬಡಿಗೇರ್, ಆರತಿ ತಿಪ್ಪಣ ಮಾತನಾಡಿದರು. ಕಾರ್ಯಕ್ರಮದ ಸ್ವಾಗತ ಭಾಷಣವನ್ನು ಬಸವರಾಜ ಸುಳೇಕಲ್ ಮಾಡಿದರು. ನಿರೂಪಣೆಯನ್ನು ಸಾಹಿತಿ ಅಲ್ಲಾಗಿರಿರಾಜ್ ನಿರ್ವಹಿಸಿದರು. ಈ ಕಾರ್ಯಕ್ರಮದಲ್ಲಿ ಬುದ್ಧಿಜೀವಿಗಳು, ಪ್ರಗತಿಪರ ಚಿಂತಕರು, ವಿದ್ಯಾರ್ಥಿಗಳು, ಸಿ.ಪಿ.ಐ.ಎಂ.ಎಲ್ ಪಕ್ಷದ ಅಂಗ ಸಂಘಟನೆಯ ಮುಖಂಡರು ಭಾಗವಹಿಸಿದ್ದರು. 
Please follow and like us:
error

Leave a Reply

error: Content is protected !!