fbpx

ಟಿ.ಇ.ಟಿ ತರಬೇತಿ ಕಾರ್ಯಾಗಾರ.


ಕೊಪ್ಪಳ – ೨೨ ಹಾಗೂ ೨೩ ರವರೆಗೆ ಎರಡು ದಿನಗಳ ಕಾಲ ನಡೆಯುವ ಕಾರ್ಯಕ್ರಮವನ್ನು ಇಂದು ಬೆಳಿಗ್ಗೆ ೧೦-೦೦ ಗಂಟೆಗೆಶ್ರೀ ಗವಿಸಿದ್ಧೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಉದ್ಘಾಟಿಸಲಾಯಿತು ಕಾರ್ಯಕ್ರಮವನ್ನು ಉದ್ಘಾಟಿಸಿದ ನಿವೃತ್ತ ಶಿಕ್ಷಕರು ಹಾಗೂ ಶಿಕ್ಷಣ ತಜ್ಞರಾದ ಶ್ರೀಯುತ ಟಿ.ವಿ.ಮಾಗಳದ ಮಾತನಾಡಿ  ನಿರಂತರ ಪರಿಶ್ರಮ ಹಾಗೂ ಕ್ರಮ ಬಧ್ದಯೋಜನೆಯ ಅಧ್ಯಯನ ಮಾಡಿದರೆ ಈ ಪರೀಕ್ಷೆಯನ್ನು ಬಹಳ ಸಲಿಸಾಗಿ ಎದುರಿಸಿ ಪರೀಕ್ಷೆಯನ್ನು ಪಾಸಾಗಬಹುದೆಂದು ಹೇಳಿದರು ಮತ್ತು ಈ ಪರೀಕ್ಷೆಯ ಬಗ್ಗೆ ಇರುವ ಹಿಂಜರಿಕೆಯನ್ನು ಇಟ್ಟುಕೊಳ್ಳದೇ ಧೈರ್ಯವಾಗಿ ಎದುರಿಸಿ ಮುಂದುವರೆದು ನಮ್ಮ ಹೈದ್ರಾಬಾದ – ಕರ್ನಾಟಕ ಭಾಗದ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಈ ಪರೀಕ್ಷೆಯಲ್ಲಿ ತೇರ್ಗಡೆಯಾಗುವಂತಾಗಲಿ ಎಂದು ಹಾರೈಸಿದರು.ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿ ಸ್ಥಾನವನ್ನು ವಹಿಸಿದ್ದ ಗ.ವಿ.ವ.ಟ್ರಸ್ಟ ನ ಕಾರ್ಯದರ್ಶಿಗಳಾದ ಶ್ರೀ ಮಲ್ಲಿಕಾರ್ಜುನ.ಎಸ್.ಮಾತನಾಡಿ ನಮ್ಮ ಮಠದ ಶ್ರೀಗಳ ಆಶಯದಂತೆ ಈ ಟಿ.ಇ.ಟಿ.ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ನಮ್ಮ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಈ ಸೌಲಭ್ಯವನ್ನು ಪಡೆದುಕೊಂಡು ಪರೀಕ್ಷೆಯಲ್ಲಿ ಯಶಸ್ಸು ಗಳಿಸಿರೆಂದು ಹಾರೈಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಪ್ರಾ

ಚಾರ್ಯರಾದ  ಶ್ರೀ ಪ್ರಕಾಶ ಬಡಿಗೇರ ಮಾತನಾಡಿ ಟಿ.ಇ.ಟಿ.ಪರೀಕ್ಷೆಯನ್ನು ಎದುರಿಸುವ ತಂತ್ರಗಾರಿಕೆಗಳ ಕುರಿತು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ವಿ.ವಿ.ಗೊಂಡಬಾಳ.ಸುರೇಶ.ಕೆ.ಮಂಜುನಾಥ.ಎಚ್.ಸತೀಶ ಎಚ್.ಲಕ್ಷ್ಮಿಪತಿ ಕೆ.ಲಿಂಗರಾಜ ಯತ್ನಳ್ಳಿ.ಸುರೇಶ ಕಲ್ಲಳ್ಳಿ.ರಮೇಶ ಹಾವೋಜಿ.ಹಾಗೂ ಸಂಸ್ಥೆಯ ಉಪನ್ಯಾಸಕರಾದ ಆನಂದರಾವ ದೇಸಾಯಿ.ಎಲ್.ಎಸ್.ಹೊಸಮನಿ.ಎಸ್.ಎಸ.ಅರಳಲೇಮಠ.ಆಯೇಷಾ ತಳಕಲ್ಲ.ಡಿ.ಎಮ್.ಬಡಿಗೇರ.ಸುಭಾಸಚಂದ್ರಗೌಡ ಪಾಟೀಲ.ಹಾಜರಿದ್ದರು.ಮಮತಾ ಕಾರ್ಯಕ್ರಮ ನಿರೂಪಿಸಿದರು.ಗಂಗಾಧರ ಸೊಪ್ಪಿಮಠ ಸ್ವಾಗತಿಸಿದರು.ಅಮೃತಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು.ಡಾ|ಸವಿತಾ ವೀರನಗೌಡ್ರ ಪ್ರಾಸ್ತಾವಿಕವಾಗಿ ಮಾತಾನಾಡಿದರು.ವಿ.ಆರ್.ಪಾಟೀಲ ವಂದಿಸಿದರು.

Please follow and like us:
error

Leave a Reply

error: Content is protected !!