ಬೆಳ್ಳಿ ಮಂಡಲ ದಿಂದ ಮಕ್ಕಳ ಚಲನಚಿತ್ರೋತ್ಸವ

ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಡಿಯಲ್ಲಿ ಕೆಲಸ  ಮಾಡುತ್ತಿರುವ ಬೆಳ್ಳಿ ಮಂಡಲ ಡಿಸೆಂಬರ್ ೩-೪ ರಂದು ನಗರದ ಎರಡು ಕಡೆಗಳಲ್ಲಿ ಮಕ್ಕಳ ಚಿತ್ರೋತ್ಸವವನ್ನು ಮಾಡಲಾಗುತ್ತದೆ ಎಂದು ಜಿಲ್ಲಾ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ. ನಗರದಲ್ಲಿ ನಡೆಯುವ ಈ ಚಲನಚಿತ್ರೋತ್ಸವ ೨೦೧೧ ಕ್ಕೆ ಸ್ಥಳಿಯ ಸಂಸ್ಥೆಗಳ ಸಹಕಾರ ಪಡೆಯಲಾಗುವದು, ಜೊತೆಗೆ  ಎರಡು ಖಾಸಗಿ ಕಾಲೇಜುಗಳನ್ನು ಆಯ್ಕೆ ಮಾಡಿ ಅಲ್ಲಿ ಆರು ಚಿತ್ರಗಳನ್ನು ಪ್ರದರ್ಶನ ಮಾಡಲಾಗುವದು. ಇದೇ ಸಂದರ್ಭದಲ್ಲಿ ಬೆಳ್ಲಿಮಂಡಲವನ್ನು ಉದ್ಘಾಟನೆ ಮಾಡಲಾಗುವದು.  ಕರ್ನಾಟಕ ಮಾದ್ಯಮ ಅಕಾಡೆಮಿಯಿಂದ ನಿರ್ದೇಶಕ ರಮೇಶ ಸುರ್ವೆಗೆ ಜೀವಮಾನ ಸಾಧನೆ ಪ್ರಶಸ್ತಿ. ಕರ್ನಾಟಕ ಮಾದ್ಯಮ ಅಕಾಡೆಮಿ ಬೆಂಗಳೂರಿನಲ್ಲಿ ನಡೆಸಿದ ಎರಡು ದಿನಗಳ ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲೆಯ ಪತ್ರಕರ್ತ, ಬರಹಗಾರ, ಚಲನಚಿತ್ರ ನಿರ್ದೇಶಕ ರಮೇಶ ಸುರ್ವೆ ರವರಿಗೆ, ಮಾದ್ಯಮ ಅಕಾಡೆಮಿಯ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಸುರ್ವೆ ರವರು ಕಳೆದ ೨ ವರ್ಷಗಳಿಂದ ನಡೆಸುತ್ತಿರುವ ಸುರ್ವೆ ಪತ್ರಿಕೆಗೆ ಈ ಗೌರವ ಲಭಿಸಿದ್ದು, ಮಂದಾಕಿನಿ ಚಿತ್ರ ನಿರ್ದೇಶನ ಮಾಡಿರುವ ಅವರು, ನೂರಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ರೂಪಿಸಿದ್ದಾರೆ. ಕನ್ನಡದ ೮ ನೇ ಜ್ಞಾನಪೀಠ ಪ್ರಶಸ್ತಿ ಡಾ. ಚಂದ್ರಶೇಖರ ಕಂಬಾರ ರವರಿಗೆ ಬರುತ್ತೆ  ಅಂತ ತಮ್ಮ ಚಿತ್ರ ಮಂದಾಕಿನಿಯ ೧೦ ನಿಮಿಷಗಳ ಹಾಡಿನಲ್ಲಿ ಹೇಳಿದ್ದರು ಎಂಬುದನ್ನು ನೆನಪಿಸಿಕೊಳ್ಳಬೇಕು. ಉತ್ತಮ ಬರಹಗಾರ ಆಗಿರುವ ರಮೇಶ ಸುರ್ವೆರವರು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಚಲನಚಿತ್ರ ಅಕಾಡೆಮಿಯ ಬೆಳ್ಳಿ ಮಂಡಲ ಜಿಲ್ಲಾ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಮತ್ತು ಸಹ ಸಂಚಾಲಕ ರುದ್ರಪ್ಪ ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Please follow and like us:
error