fbpx

ಡಿ.ಇಡಿ. ಪ್ರಥಮ ವರ್ಷದ ಚೈತನ್ಯ. ನಲಿ-ಕಲಿ ಕಾರ್ಯಗಾರ

 ಶ್ರೀ ಗವಿಸಿದ್ದೇಶ್ವರ ಶಿಕ್ಷಕ ತರಬೇತಿ ಸಂಸ್ಥೆ ಕೊಪ್ಪಳ ಮತ್ತು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಮುನಿರಾಬಾದ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಗವಿಸಿದ್ದೇಶ್ವರ ಶಿಕ್ಷಕ ತರಬೇತಿ ಸಂಸ್ಥೆಯ ಮತ್ತು ಸರಕಾರಿ ಶಿಕ್ಷಕ ತರಬೇತಿ ಸಂಸ್ಥೆಯ ಡಿ.ಇಡಿ. ಪ್ರಥಮ ವರ್ಷದ ಚೈತನ್ಯ. ನಲಿ-ಕಲಿ ಕಾರ್ಯಗಾರವನ್ನು ಶ್ರೀ ಗವಿಸಿದ್ದೇಶ್ವರ ಶಿಕ್ಷಕ ತರಬೇತಿ ಸಂಸ್ಥೆಯಲ್ಲಿ ನಡೆಸಲಾಯಿತು. ಇದನ್ನು  ಆರ್.ಬಿ.ಗಾಂಜಿ ಪ್ರಾಚಾರ್ಯರು ಎಸ್.ಜಿ. ಬಿ.ಇಡಿ. ಕಾಲೇಜು ಕೊಪ್ಪಳ ಇವರು ಉದ್ಘಾಟನೆ. ಗುಣಾತ್ಮಕ ಶಿಕ್ಷಣ ನೀಡಲು ತರಬೇತಿ ಸಂಸ್ಥೆಗಳು ಅವಶ್ಯಕ ಅದರ ಮೂಲಕ ದೇಶದ ಅಭಿವೃದ್ದಿ ಸಾಧ್ಯ ಎಂದು ಹೇಳಿದರು. ಅತಿಥಿಗಳಾಗಿ ಆಗಮಿಸಿದ ಸರಕಾರಿ ಶಿಕ್ಷಕ ತರಬೇತಿ ಸಂಸ್ಥೆಯ ಉಪನ್ಯಾಸಕರಾದ   ಪಂಚಾಕ್ಷರಯ್ಯ ಹಿರೇಮಠ ಮಾತನಾಡಿ ಶಿಕ್ಷಣದ ಭದ್ರ ಬುನಾದಿಗೆ ಪ್ರಾಥಮಿಕ ಶಿಕ್ಷಣದ ಮೆಲಿದ್ದು ಅದು ಸುಬದ್ರವಾಗಿರಲು ಇಂತಹ ತರಬೇತಿಗಳು ಅವಶ್ಯಕ ಎಂದರು.
                                        ಸಂಪನ್ಮೂಲ ವ್ಯಕ್ತಿಗಳಾಗಿ ಶಿಕ್ಷರಾದ  .ಕನಕಪ್ಪ ಕಮ್ಮಾರ. ಶ್ರೀರೇವಣಸಿದ್ದಪ್ಪ ಆಗಮಿಸಿದರು. ಸಂಸ್ಥೆಯ ಪ್ರಭಾರಿ ಪ್ರಾಚಾರ್ಯರಾದ   ಶಾಂತೇಶ ಅಂಗಡಿ. ಉಪನ್ಯಾಸಕಾರಾದ ಎಲ್.ಎಸ್. ಹೊಸಮನಿ. ಜಿ.ಎಸ್.ಸೊಪ್ಪಿಮಠ   ವಿ.ಆರ್. ಪಾಟೀಲ. ಡಿ.ಎಮ್. ಬಡಿಗೇರ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಗಂಗಮ್ಮ ಕೆರಿಹೊಲದ ನಿರ್ವಹಿಸಿದರು. ರಾಜೇಶ್ವರಿ ಬನ್ನಿ ಸ್ವಾಗತಿಸಿದರು.
Please follow and like us:
error

Leave a Reply

error: Content is protected !!