ಬ್ರೂಸ್ ಲೀ ಹುಟ್ಟುಹಬ್ಬ.

ಕೊ-೨೧ ಅಳವಂಡಿಯ ಪ್ರಾಥಮಿಕ ಶಾಲೆಯಲ್ಲಿ ಝೆನ್ ಕರಾಟೆ ಸಂಸ್ಥೆಯಿಂದ ೭೫ನೇ ಬ್ರೂಸ್ ಲೀ ಅವರ  ಹುಟ್ಟುಹಬ್ಬ ವನ್ನು ಆಚರಿಸಲಾಯಿತು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶ್ರೀನಿವಾಸ ಪಂಡಿತ ಬ್ರೂಸ್ ಲೀ ಅವರು ೨೭ ನವಂಬರ್ ೧೯೪೦ ರಂದು ಸ್ಯಾನಫ್ರಾನ್ಸಿಸ್‌ಕೋ ದಲ್ಲಿ ಜನನವಾಯಿತು, ಚಕ್ಕಂದಿನಿಂದಲೂ ಕರಾಟೆಯಲ್ಲಿ ಆಸಕ್ತಿ ಇದ್ದ ಇವರು ಮುಂದೆ ಕರಾಟೆಯ ಚಕ್ರವರ್ತಿ, ಅನಭಿಶಕ್ತ ಸಾಮ್ರಾಟನಾಗಿ ಕೇವಲ ೩೩ ವರ್ಷದಲ್ಲಿ ಕರಾಟೆ ಕೌಶಲದಲ್ಲಿ ವಿಶ್ವ ವಿಖ್ಯಾತಿ ಪಡೆದು ೧೯೭೩ರಲ್ಲಿ ಮರಣ ಹೊಂದಿದರು ಎಂದರು. ಸೆನ್ ಸೈ ಮಲ್ಲಿಕಾರ್ಜುನ ಪಿ ಮಾತನಾಡಿ ಬ್ರೂಸ್ ಲೀ ಒಬ್ಬ ಕ್ರೀಯಾಶೀಲ ಕರಾಟೆಪಟು ಮತ್ತು ಚಿತ್ರ ನಟರಾಗಿದ್ದು ತಮ್ಮನ್ನು ತಾವು ದಿನದಲ್ಲಿ ಕನಿಷ್ಠ ೧೬ ತಾಸು ಕೆಲಸದಲ್ಲಿ ತೊಡಗಿಸಿಕೊಳ್ಳುತಿದ್ದರು ಮತ್ತು ಅವರ ಎಂಟರ್ ದಿ ಡ್ರ್ಯಾಗನ್ ಸಿನೆಮಾ ವಿಶ್ವಖ್ಯಾತಿ ತಂದು ಕೊಟ್ಟಿತು ಎಂದರು. ಮತ್ತು ಶ್ರೀನಿವಾಸ ಪಂಡಿತ ಅವರು ಆತ್ಮರಕ್ಷಣೆ ಕಲೆಯಾದ
ಕರಾಟೆಯನ್ನು ೨೦ ವರ್ಷದಿಂದ ಮಕ್ಕಳಿಗೆ ಕರಾಟೆ ಕೌಶಲ ತರಬೇತಿ ನೀಡುವ ಮುಖಾಂತರ ಸಮಾಜ
ಸೇವೆಯಲ್ಲಿ ತೊಡಗಿದ್ದಾರೆಂದು ಅಭಿನಂದಿಸಿದರು. ಮತ್ತು ಇದೇ ಸಂದರ್ಭದಲ್ಲಿ ಕರಾಟೆ
ಪಟುಗಳಿಗೆ ಕಲರ್ ಬೆಲ್ಟ್ ಗ್ರೇಡಿಂಗ್ ಪರೀಕ್ಷೆ ನಡೆಸಲಾಯಿತು. ಬೆಲ್ಟ್ ಪರೀಕ್ಷೇಯಲ್ಲಿ
ಕುಮಾರಿ ಶಗುಪ್ತಾ , ಸಚಿನ್ ಇನ್ನೂ ೭ ಜನರಿಗೆ ಗ್ರೀನ್ ಬೆಲ್ಟ್ , ಪ್ರಜ್ವಲ್, ಸಚಿನಗೆ
ಬ್ಲೂವ್ ಬೆಲ್ಟ್, ಖಾಜಾ ಪಾಷಾ ಮುಲ್ಲಾ ಗೆ ಬ್ರೌನ್ ಬೆಲ್ಟ್  ನೀಡಲಾಯಿತು. ಬೆಲ್ಟ್
ಪರೀಕ್ಷೆಯನ್ನು  ಸೆನ್‌ಸೈ ಶ್ರೀನಿವಾಸ ಶಂ.ಪಂಡಿತ ಅವರು ನಡೆಸಿ ಬೆಲ್ಟ್ ಮತ್ತು ಪ್ರಮಾಣ
ಪತ್ರ ವಿತರಿಸಿದರು. ಇವರಿಗೆ ಸೆನ್ ಸೈ ಮಲ್ಲಿಕಾರ್ಜುನ ಪಿ ಮತ್ತು ಸಂಸ್ಥೆಯ ಸಂಸ್ಥಾಪಕ
ಶಿಹಾನ್ ಮಲ್ಲಿಕಾರ್ಜುನ ಕೊತಬಾಳ ಅಭಿನಂದಿಸಿದರು.. 

Leave a Reply