ಸುಮಾರು ೩೦೦ ಕ್ಕೂ ಹೆಚ್ಚು ರೈತರು ಇಂದು ಜಿಲ್ಲಾಧಿಕಾರಿಗಳ ಕಛೇರಿಗೆ.

ಕೊಪ್ಪಳ-  ಅಪಾರ ಬರಗಾಲದಿಂದ ತತ್ತ್‌ರಿಸಿರುವ ರೈತರು ಅಳವಂಡಿ ಹಾಗೂ ಸುತ್ತಮುತಲ್ಲಿನ ರೈತರು ಆಹಾರ ಮತ್ತು ನೀರು ಇಲ್ಲದೆ ಬಳಲುತಿರುವ ಜಾನುವಾರುಗಳ ರಕ್ಷಣೆಗಾಗಿ ಅಳವಂಡಿ ಗ್ರಾಮದಲ್ಲಿ ಗೋಶಾಲೆಯನ್ನು ಪ್ರಾರಂಭಿಸಲು ಇಂದು ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.ಸುಮಾರು ೩೦೦ ಕ್ಕೂ ಹೆಚ್ಚು ರೈತರು ಇಂದು ಜಿಲ್ಲಾಧಿಕಾರಿಗಳ ಕಛೇರಿಗೆ ಧಾವಿಸಿ ಕಳೆದ ಮೂರು ತಿಂಗಳಿನಿಂದ ಮಳೆಬಾರದೆ ಬಿತ್ತನೆ ಮಾಡಿದ ಭೂಮಿಯು ಸಹಿತ ಒಣಗಿ ಬರಡಾಗಿದ್ದು ಬಿತ್ತನೆ ಮಾಡಿದ ಬೆಳೆಗೆ ಸೂಕ್ತ ಬೆಳೆಪರಿಹಾರ ಮತ್ತು ಬೆಳೆವಿಮೆ ನೀಡಬೇಕು ಮತ್ತು ಮೇವಿನ ತೊಂದರೆಯಿಂದ ಕಂಗಾಲಾಗಿರುವ ದನಕರುಗಳಿಗೆ ಗೋಶಾಲೆಯನ್ನು ಪ್ರಾರಂಬಿಸಬೆಕು ಎಂದು ರೈತರು ಮನವಿ ಸಲ್ಲಿಸಿದರು ಇದರ ಬಗ್ಗೆ ಜಿಲ್ಲಾಡಳಿತ ನಿರ್ಲಕ್ಷ ವಹಿಸಿದರೆ ಹೋರಾಟದ ಎಚ್ಚೆರಿಕೆಯನ್ನು ನೀಡಿದರು ಈ ಸಂದರ್ಭದಲ್ಲಿ ರೈತ ಮುಖಂಡರಾದ ಸುರೇಶ ದಾಸರೆಡ್ಡಿ, ಚಂದ್ರಪ್ಪ ಜಂತ್ಲಿ, ಆನಂದ ರೆಡ್ಡಿ ಮುತ್ತಾಳ, ರಮೇಶ ಕರಡಿ, ಹನುಮಂತಪ್ಪ ಉಂಕಿ, ನಿಂಗರೆಡ್ಡಿ ಗದ್ದಿಕೆರಿ, ಶರಣಪ್ಪ ಗದ್ದಿಕೆರಿ, ವಿರುಪಣ್ಣ ಅಂಕಡಿ, ಬುಜಂಗಪ್ಪ ಆರೇರ, ಯಂಕನಗೌಡ ಗೋಲ್ಲಗೌಡ್ರ, ವಿರುಪಯ್ಯ ಪೂಜಾರ, ಮುಂಡರಿಗಿ ಗೌಡಪ್ಪ, ತಿಮಣ್ಣ ಗದಗಿನ, ತಿಪ್ಪಣ ತಳಬಾಳ, ಇತರು ಹಾಜರಿದ್ದರು ಇದ್ದರು.

Leave a Reply