ಹಿರೇಬಗನಾಳದಲ್ಲಿ ಜನಸಂಪರ್ಕ ಸಂವಾದ ಸಭೆ.

ಕೊಪ್ಪಳ ಅ. ೦೭ (ಕ ವಾ) ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ತಾಲೂಕಿನ ಹಿರೇಬಗನಾಳ ಗ್ರಾಮದ ಕರಿಯಮ್ಮದೇವಿ ದೇವಸ್ಥಾನ ಆವರಣದಲ್ಲಿ ಜನ ಸಂಪರ್ಕ ಸಂವಾದ ಸಭೆ ಆಯೋಜಿಸಲಾಯಿತು.
      ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಮಾಜ ಕಾರ್ಯಕರ್ತ ರವಿಕುಮಾರ ಪವಾರ ಮಾತನಾಡಿ, ಜಿಲ್ಲೆಯಲ್ಲಿ ತಾಯಿ ಮರಣ ಮತ್ತು ಶಿಶು ಮರಣ ಪ್ರಮಾಣ, ಗರ್ಭಿಣಿ ತಾಯಂದಿರಲ್ಲಿ ರಕ್ತ ಹಿನ್ನತೆ ಮತ್ತು ಅಪೌಷ್ಠಿಕ ಮಕ್ಕಳ ಜನಿಸುವುದಕ್ಕೆ ಬಾಲ್ಯ ವಿವಾಹವು ಮುಖ್ಯ ಕಾರಣವಾಗಿದೆ.  ಬಾಲ್ಯ ವಿವಾಹ ನಿಷೇಧ ಕಾಯ್ದೆಯನ್ವಯ ೧೮ ವರ್ಷದೂಳಗಿನ ಹೆಣ್ಣು ಮಕ್ಕಳಿಗೆ  ಹಾಗೂ ೨೧ ವರ್ಷದೂಳಗಿನ ಗಂಡು ಮಕ್ಕಳಿಗೆ ವಿವಾಹವನ್ನು ಮಾಡುವುದು ಕಾನೂನು ಬಾಹಿರ. ಒಂದು ವೇಳೆ ಮದುವೆಯನ್ನು ಮಾಡಿದ್ದೆ ಆದಲ್ಲಿ ಮದುವೆಯನ್ನು ಮಾಡಿದ ಪಾಲಕ, ಪೋಷಕ ಹಾಗೂ ಪ್ರೋತ್ಸಾಹಿಸಿದವರೂ ಸಹಿತ ಶಿಕ್ಷೆಗೆ ಒಳಗಾಗಲಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೂ ಬಾಲ್ಯ ವಿವಾಹ ಮಾಡಿದ ಪಾಲಕ, ಪೋಷಕ ಹಾಗೂ ಪ್ರೋತ್ಸಾಹಿಸಿದವರ ವಿರುದ್ಧ ಎಂಟು ಬಾಲ್ಯ ವಿವಾಹ ಪ್ರಕರಣಗಳನ್ನು ದಾಖಲಿಸಲಾಗಿದೆ. ಸಂಕಷ್ಠದಲ್ಲಿರುವ ಮಕ್ಕಳ ಸಹಾಯಕ್ಕಾಗಿ ಜಿಲ್ಲೆಯಲ್ಲಿ ಮಕ್ಕಳ ಸಹಾಯವಾಣಿಯನ್ನು ಆರಂಬಿಸಿದ್ದು ಸಂಕಷ್ಠದಲ್ಲಿರುವ ಮಕ್ಕಳು ಕಂಡುಬಂದಲ್ಲಿ ೧೦೯೮ ಸಂಖ್ಯೆಗೆ ಕರೆಯನ್ನು ಮಾಡಿ ಮಾಹಿತಿಯನ್ನು ನೀಡಿದಲ್ಲಿ ಮಾಹಿತಿಯು ಲಭ್ಯವಾದ ೬೦ ನಿಮಿಷದೂಳಗಾಗಿ ಸದರಿ ಮಗುವನ್ನು ಸಹಾಯವಾಣಿಯ ಕಾರ್ಯಕರ್ತರು ರಕ್ಷಿಸಿ ನಂತರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸಹಾಯದಿಂದ ಅಗತ್ಯ ಪುರ್ನವಸತಿಯನ್ನು ಕಲ್ಪಸಲಾಗುತ್ತದೆ ಎಂದರು. ಮಕ್ಕಳ ವಿಶೇಷ ಪೊಲೀಸ್ ಘಟಕದ  ಜಗದೀಶ್ವರಯ್ಯ ಹಿರೇಮಠ ಮಾತನಾಡಿ, ಆರೈಕೆ ಮತ್ತು ಪೋಷಣೆ ಅವಶ್ಯಕತೆಯಿರುವ ಯಾವುದೇ ಮಗುವನ್ನು ಯಾರೇ ವ್ಯಕ್ತಿಗಳು ಆರೈಕೆ ಮತ್ತು ಪೋಷಣೆಗಾಗಿ ಮಕ್ಕಳನ ಹಾಜರಪಡಿಸಿದಲ್ಲಿ ಮಕ್ಕಳಿಗೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಿಂದ ಸೂಕ್ತ ಪುರ್ನವಸತಿಯನ್ನು ಕಲ್ಪಿಸಲಾಗುವುದು ಎಂದರು.
 ಮಕ್ಕಳ ವಿಶೇಷ ಪೊಲೀಸ್ ಘಟಕದ ಬಸಪ್ಪ ಹಾದಿಮನಿ, ಕಿರಿಯ ಆರೋಗ್ಯ ಸಹಾಯಕ ಎಸ್.ಎಮ್.ಕಂಠಿ ಉಪಸ್ಥಿತರಿದ್ದರು.  ಯಮುನಮ್ಮ ನಿರೂಪಿಸಿದರು, ಸಿದ್ದು ಪೂಜಾರ ವಂದಿಸಿದರು.

Please follow and like us:

Related posts

Leave a Comment