You are here
Home > Koppal News > ಸಹಕಾರ ಸಂಸ್ಥೆಗಳು ಸಂವಿಧಾನ ತಿದ್ದುಪಡಿಯಂತೆ ಕಾರ್ಯನಿರ್ವಹಿಸಲು ಕರೆ

ಸಹಕಾರ ಸಂಸ್ಥೆಗಳು ಸಂವಿಧಾನ ತಿದ್ದುಪಡಿಯಂತೆ ಕಾರ್ಯನಿರ್ವಹಿಸಲು ಕರೆ

 ಕೊಪ್ಪಳ: ೧೮- ರಂದು ಮಂಗಳವಾರ ಬೆಳಗ್ಗೆ ೧೧-೦೦ ಗಂಟೆಗೆ ೬೧ ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಸಹಕಾರ ಸಂಸ್ಥೆಗಳು ಮತ್ತು ಪೋಷಕ ವಿಧೇಯಕ” ದಿನವನ್ನು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ ನಿ., ಕೊಪ್ಪಳ, ಸಹಕಾರ ಇಲಾಖೆ ಕೊಪ್ಪಳ ಹಾಗೂ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿ., ಕೊಪ್ಪಳ ಇವರುಗಳ ಸಂಯುಕ್ತ ಆಶ್ರಯದಲ್ಲಿ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿ., ಕೊಪ್ಪಳದಲ್ಲಿ ಏರ್ಪಡಿಸಲಾಗಿತ್ತು. 
೬೧ನೇ ಅಖಿಲ ಭಾರತ ಸಹಕಾರ ಸಪ್ತಾಹದ ೫ನೇ ದಿನದ ಕಾರ್ಯಕ್ರಮವನ್ನು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಅಧ್ಯಕ್ಷರಾದ, ವೀರೇಶ ಲಕ್ಷಾಣಿ. ಇವರು ಜ್ಯೋತಿ ಬೆಳಗಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಪ್ರಾ

ಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಕಾತರಕಿ ಗುಡ್ಲಾನೂರು ಅಧ್ಯಕ್ಷರಾದ ಕೃಷ್ಣಾರೆಡ್ಡಿ ಗಲಬಿ. ರವರು ಮಾತನಾಡುತ್ತಾ ನಮ್ಮ ಭಾರತ ದೇಶಕ್ಕೆ ಅತ್ಯಂತ ಪ್ರಮುಖವಾದ ಬಹುದೊಡ್ಡ ಕೊಡುಗೆ ಎಂದರೆ ಅದು ಸಹಕಾರ ಕ್ಷೇತ್ರ ಎಂದು ಹೇಳಬಹುದು. ಇಡೀ ಭಾರತ ದೇಶದಲ್ಲಿ ಈ ದೇಶಕ್ಕೆ ಹಾಲು ಉತ್ಪಾದನೆಯ ಮುಖಾಂತರ ಸಹಕಾರ ತತ್ವಗಳನ್ನು ಪಸರಿಸಿದ ಮಹಾನ್ ವ್ಯಕ್ತಿ ಎಂದರೆ ಡಾ|| ಕುರಿಯನ್ ರವರು ಎಂದು ಹೇಳಿದರು. ಇನ್ನೊರ್ವ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕರಾದ ಜಿ.ಬಿ. ಶಶಿಮಠ ಇವರು ಮಾತನಾಡುತ್ತಾ ೯೭ನೇ ಸಂವಿಧಾನ ತಿದ್ದುಪಡಿಯಲ್ಲಿ ಅನೇಕ ತಿದ್ದುಪಡಿಗಳನ್ನು ತಂದಿದ್ದು, ಅದರಂತೆ ಕಾರ್ಯನಿರ್ವಹಿಸಲು ಕರೆನೀಡಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾರುತಿ ಜಿ. ಅಂಗಡಿ. ನಿರ್ದೇಶಕರು, ಪಿ.ಸಿ.ಎ.ಆರ್.ಡಿ. ಬ್ಯಾಂಕ್ ನಿ., ಕೊಪ್ಪಳ., ಬಾಳಪ್ಪ ಬೂದಗುಂಪಾ. ನಿರ್ದೇಶಕರು, ಪಿ.ಸಿ.ಎ.ಆರ್.ಡಿ. ಬ್ಯಾಂಕ್ ನಿ., ಕೊಪ್ಪಳ., ಶ್ರೀಮತಿ ಶಕುಂತಲಾ ಹೆಚ್. ಹುಡೇಜಾಲಿಮಠ. ನಿರ್ದೇಶಕರು, ಜಿಲ್ಲಾ ಸಹಕಾರ ಯೂನಿಯನ್ ನಿ., ಕೊಪ್ಪಳ., ಮರ್ದಾನಪ್ಪ ಬಿಸರಳ್ಳಿ. ನಿರ್ದೇಶಕರು, ಜಿಲ್ಲಾ ಸಹಕಾರ ಯೂನಿಯನ್ ನಿ., ಕೊಪ್ಪಳ., ನೀಲಕಂಠಯ್ಯ ಹಿರೇಮಠ. ನಿರ್ದೇಶಕರು, ಜಿಲ್ಲಾ ಸಹಕಾರ ಯೂನಿಯನ್ ನಿ., ಕೊಪ್ಪಳ, ತೋಟಪ್ಪ ಕಾಮನೂರು. ನಿರ್ದೇಶಕರು, ಜಿಲ್ಲಾ ಸಹಕಾರ ಯೂನಿಯನ್ ನಿ., ಕೊಪ್ಪಳ, ಗವಿಸಿದ್ಧೇಶ ಹೆಚ್. ಹುಡೇಜಾಲಿಮಠ. ನಿರ್ದೇಶಕರು, ಜಿಲ್ಲಾ ಸಹಕಾರ ಯೂನಿಯನ್ ನಿ., ಕೊಪ್ಪಳ, ಬಿ.ಎಂ. ಕಾತರಕಿ. ಜಿಲ್ಲಾ ವ್ಯವಸ್ಥಾಪಕರು, ಕಾಸಕಾರ್ಡ ಬ್ಯಾಂಕ್ ನಿ., ಕೊಪ್ಪಳ, ಶರಣಬಸಪ್ಪ ಕಾಟ್ರಳ್ಳಿ. ಮುಖ್ಯಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಸಹಕಾರ ಯೂನಿಯನ್ ನಿ., ಕೊಪ್ಪಳ ಇವರುಗಳು ಉಪಸ್ಥಿತರಿದ್ದರು. 
ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿಕೊಂಡಂತಹ ಸಂಗಮೇಶ ಡಂಬಳ. ನಿರ್ದೇಶಕರು, ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿ., ಕೊಪ್ಪಳ ಇವರು ತಮ್ಮ ಅಧ್ಯಕ್ಷಿಯ ಭಾಷಣದಲ್ಲಿ ಸಹಕಾರ ಕಲ್ಪನೆ ಅದ್ಬುತವಾಗಿದ್ದು, ಈ ಕಲ್ಪನೆಯೊಂದಿಗೆ ಸ್ಥಾಪನೆಯಾದಂತಹ ಸಹಕಾರ ಸಂಘಗಳಲ್ಲಿ ಜನರು ತಮ್ಮನ್ನು ತಾವೂ ತೊಡಗಿಸಿಕೊಂಡು ಸಹಕಾರ ಸಂಸ್ಥೆಗಳನ್ನು ಬಲಪಡಿಸಬೇಕೆಂದು ಕರೆನೀಡಿದರು. 
ಪ್ರಾರಂಭದಲ್ಲಿ ಕಾರ್ಯಕ್ರಮಕ್ಕೆ ಅತಿಥಿಗಳನ್ನು ಜಿಲ್ಲಾ ಸಹಕಾರ ಯೂನಿಯನ್ನಿನ ನಿರ್ದೇಶಕರಾದ ನೀಲಕಂಠಯ್ಯ ಹಿರೇಮಠ. ಇವರು ಸ್ವಾಗತಿಸಿದರು. ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ನಿನ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಶರಣಬಸಪ್ಪ ಕಾಟ್ರಳ್ಳಿ ರವರು ಪ್ರಾಸ್ತವಿಕವಾಗಿ ಮಾತನಾಡಿ, ನಿರೂಪಿಸಿದರು. ಕೊನೆಯಲ್ಲಿ ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ನಿನ ನಿರ್ದೇಶಕರಾದ ಗವಿಸಿದ್ದೇಶ ಹೆಚ್. ಹುಡೇಜಾಲಿಮಠ ಇವರು ವಂದಿಸಿದರು.

Leave a Reply

Top