ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ : ವೇಳಾಪಟ್ಟಿ ಪ್ರಕಟ

  ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಮಟ್ಟದ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಜಿಲ್ಲಾ ಮಟ್ಟದಲ್ಲಿ ಅಧಿಸೂಚನೆ ಪ್ರಕಟಿಸುವ ದಿನಾಂಕ ಡಿ.೦೪ ರ ಬೆಳಿಗ್ಗೆ ೧೦ ಗಂಟೆಗೆ, ನಾಮಪತ್ರ ಸಲ್ಲಿಸಲು ಡಿ.೦೬ ಮಧ್ಯಾಹ್ನ ೧೨ ಗಂಟೆಗೆ, ನಾಮಪತ್ರ ಪರಿಶೀಲನೆಯನ್ನು ಡಿ.೦೬ ರ ಮಧ್ಯಾಹ್ನ ೧೨ ರಿಂದ ೧ ಗಂಟೆಯವರೆಗೆ, ನಾಮಪತ್ರ ವಾಪಸ್ ಪಡೆಯಲು ಡಿ.೦೬ ರ ಮಧ್ಯಾಹ್ನ ೧ ರಿಂದ ಸಂಜೆ ೫.೩೦ ರವರೆಗೆ, ಚುನಾವಣೆಯು ಡಿ.೧೭ ರಂದು ಬೆಳಿಗ್ಗೆ ೯ ರಿಂದ ಸಂಜೆ ೪ ಗಂಟೆಯವರೆಗೆ, ಮತಗಳ ಎಣಿಕೆ ಹಾಗೂ ಫಲಿತಾಂಶವನ್ನು ಡಿ.೧೭ ರಂದು ಮತದಾನದ ಅವಧಿ ಮುಗಿದ ನಂತರ ಫಲಿತಾಂಶ ಘೋಷಿಸಲಾಗುವುದು. ವೇಳಾಪಟ್ಟಿಯಂತೆ ಮತ್ತು ರಾಜ್ಯ ಚುನಾವಣಾಧಿಕಾರಿಗಳ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು ಹಾಗೂ ನಿರ್ದೇಶಕರು, (ಪ್ರಾಥಮಿಕ ಶಿಕ್ಷಣ) ಆಯುಕ್ತರ ಕಛೇರಿ ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು ಇವರ ನಿರ್ದೇಶನದಂತೆ ಚುನಾವಣಾ ಕಾರ್ಯವನ್ನು ನೆರವೇರಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
Please follow and like us:
error

Related posts

Leave a Comment