fbpx

ರೈತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾ ಬಿಜೆಪಿಯಿಂದ ರೈಲು ತಡೆದು ಪ್ರತಿಭಟನೆ

  ಕಳೆದ ಜನೇವರಿ ೩೦ ರಂದು ರೈತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಧರಣಿ ನಡೆಸಿದರು. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರವಾಗಲಿ ಸ್ಪಂಧಿಸದೆ ಇರುವುದರಿಂದ ಪ್ರತಿಭಟಿಸಿ ಇಂದು ನಗರದ ರೈಲು ನಿಲ್ದಾಣದಲ್ಲಿ ಮಿರಜ್-ಬಳ್ಳಾರಿ ಪ್ಯಾಸಿಂಜರ್ ರೈಲು ಕೆಲಹೊತ್ತು ನಿಲ್ಲಿಸುವುದರ ಮೂಲಕ ಜಿಲ್ಲಾ ಬೆಜೆಪಿ ಪ್ರತಿಭಟನೆ ನಡೆಸಿತು.
ರೈತರ ಪ್ರಮುಖ ಬೇಡಿಕೆಗಳಾದ ಕಬ್ಬಿನ ಬೆಂಬಲ ಬೆಲೆ ತಕ್ಷಣ ಜಾರಿಗೋಳಿಸಬೇಕು. ಸ್ವಾಮಿನಾಥನ್ ಆಯೋಗದ ವರದಿ ಯಥಾವತ್ತಾಗಿ ಜಾರಿಗೋಳಿಸಬೇಕು ರೈತರ ನಷ್ಟ ಪರಿಹಾರ, ಭೂಪೇಂದ್ರ ಸಿಂಗ್ ವರದಿ ಜಾರಿಯಾಗಬೇಕು. ಎಲ್ಲಾ ರಸಗೊಬ್ಬರಗಳಿಗೆ ಸಬ್ಬಸೀಡಿ ನೀಡಬೇಕು. ರಾಷ್ಟ್ರೀಯ ನದಿಗಳ ಜೋಡಣೆ ಮಾಡಬೇಕು, ಎಥಿನೇಲ್‌ನ್ನು ಇಂಧವಾಗಿ ಬಳಸಲು ಅನುಮತಿ ನೀಡಬೇಕು, ಅಡಿಕೆ ಬೆಳೆ ನಿಷೇಧಿಸುವುದನ್ನು ಕೈ ಬಿಡಬೇಕು.ತೋಗರಿ ಖರೀದಿ ಮಿತಿಯನ್ನು ಸಡಿಲಿಸಬೇಕು. ಇನ್ನೂ ಮುಂತಾದ ರೈತರ ಪ್ರಮುಖ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಕೂಡಲೇ ಜಾರಿಗೆ ಒತ್ತಾಯಿಸಿ ರೈಲು ತಡೆ ಚಳವಳಿ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಪತ್ರ ಅರ್ಪಿಸಲಾಯಿತು.
ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕೊಪ್ಪಳ ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸಂಗಣ್ಣ ಕರಡಿ ರೈತರ ಸಮಸ್ಯಗಳಿಗೆ ಸ್ಪಂಧಿಸುವಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿವೆ ರೈತ ಬೆಳದ ಬೆಳಗಳಿಗೆ ಸರಿಯಾಗಿ ವಿದ್ಯುತ್ ನೀರು ಸಹ ಒದಗಿಸಲು ಆಗುತ್ತಿಲ್ಲ ಅಲ್ಲದೆ ಬೆಳೆದ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಘೋಷಿಸಿದರು ಅನ್ನು ಜಾರಿಗೆ ತರುವಲ್ಲಿ ಸಂಪೂರ್ಣವಾಗಿ ನಿಸ್ಕ್ರಿಯಗೊಂಡಿದೆ. ಕೇದ್ರ ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸುವ ಸದುದ್ದೇಶವಿರುವ ವಿಶ್ವಾಸದಿಂದ ಕೊನೆಯ ಗಳಿಗೆಯಲ್ಲಾದರು ವೀಲ್ ಬೆರಯುವ ಹಂತದಲ್ಲಿರುವ ಕೇಂದ್ರ ಸರ್ಕಾರ ಜನಹಿತ ಕಾಪಾಡುವುರೆಂಭ ಭರವಸೆಯ ಮೇಲೆ ಮನವಿ ಸಲ್ಲಿಸಿದರು ಸಮಸ್ಯಗಳಿಗೆ ಸ್ಪಂಧಿಸದಿರುವುದು ವಿಷಾದನೀಯ ಎಂದರು.
ಮಾಜಿ ಶಾಸಕ ಪರಣ್ಣ ಮುನುವಳ್ಳಿ ಮಾತನಾಡಿ ಕೇಂದ್ರ ಸರ್ಕಾರ ತನ್ನ ನಿಲುವನ್ನು ಬದಲಾಯಿಸಿ ರೈತ ಪರ ತಿರ್ಮಾನ ತೆಗೆದುಕೊಳ್ಳ ಬೇಕೆಂದು ರೈಲು ನಿಲ್ಲಿಸುವುದರ ಮುಖಾಂತರ ನೋವಿನಿಂದ ಹೋರಾಟಮಾಡುತ್ತಿದ್ದೇವೆ ಮುಂದಿನ ದಿನಗಳಲ್ಲಿ ಸರ್ಕಾರಗಳು ರೈತರ ಬಗ್ಗೆ ನಿರ್ಲಕ್ಷಮಾಡಿದಲ್ಲಿ ಉಗರವಾದ ಹೋರಾಟಮಾಡುವುದಾಗಿ ಹೇಳಿದರು.
ಈ ಸಂರ್ದಭದಲ್ಲಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಎಚ್.ಗಿರೆಗೌಡ, ಜಿಲ್ಲಾಧ್ಯಕ್ಷ ನಾರಾಯಣಪ್ಪ, ಮಾಜಿ ಜಿಲ್ಲಾಧ್ಯಕ್ಷ ಸಂಗಪ್ಪ ಓಕ್ಕಳದ ಮುಂತಾದವರು ಪ್ರತಿಭಟನಾ ಕಾರರನ್ನು ಉದ್ದೇಶಿಸಿ ಮಾತನಾಡಿದರು.
ಇಂದು ನಡೆದ ರೈಲುತಡೆ ಪ್ರತಿಭಟನೆಯಲ್ಲಿ ಸಿದ್ದರಾಮಸ್ವಾಮಿ ಆನೆಗೊಂದಿ, ಕೆ.ಅಂಬಣ್ಣ,ಎಚ್.ಆರ್. ಚನ್ನಕೇಶವ, ತೋಟಪ್ಪ ಕಾಮನೂರು, ಮಂಜುನಾಥ ಪಾಟೀಲ್, ಶಂಕ್ರಪ್ಪ ಬಳೂಟಗಿ, ಮಂಜುನಾಥ ನಾಡಗೌಡ, ಮಾರುತೆಪ್ಪ ಹಲಿಗೇರಿ, ಬಳ್ಳಾರಿ ಜಿಲ್ಲಾ ರೈತಮೋರ್ಚಾ ಅಧ್ಯಕ್ಷ ಶ್ರೀನಿವಾಸ ವ್ಯಾಸನಕೆರೆ,ಕಾರ್ಯದರ್ಶಿ ಈಶ್ವರ,ಚಂದ್ರಶೇಖರ ಕವಲೂರು,ಸಂಗಮೇಶ ಡಂಬಳ, ಅಪ್ಪಣ್ಣ ಪದಕಿ,ನರಸಿಂಗರಾವ್ ಕುಲರ್ಕಣಿ, ರಾಜು ಬಾಕಳೆ, ಹಾಲೇಶ ಕಂದಾರಿ, ಹನುಮೇಶ ಹಳ್ಳಿಗುಡಿ, ಪಕೀರಪ್ಪ ಆರೇರ, ಸದಾಶಿವಯ್ಯ ಹಿರೇಮಠ, ಶೇಖರಪ್ಪ ಹೊಸಮನಿ,ಬಸವರಾಜ ನಿರಲಗಿ, ಮಾರುತಿ ಕಾರಟಗಿ, ಪ್ರಾಣೇಶ ಮಾದೇನೂರು, ನಾಮದೇವ ಜಕ್ಕಲಿ, ಗವಿಸಿದ್ದಪ್ಪ ಚಿನ್ನೂರು,ಪ್ರಾಣೇಶ ಮಹೆಂದ್ರಕರ್,ಪ್ರವೀಣ ಕುಲಕರ್ಣಿ, ಸಿದ್ದಪ್ಪ ಪಾಟೀಲ್, ವೀರುಪಾಕ್ಷಪ್ಪ ಕಟ್ಟಿಮನಿ, ಶಾಮಲಾ ಕೋನಾಪುರು, ಸರೋಜಾ ಬಾಕಳೆ,ಶೇಖರಪ್ಪ ಹೊಸಮನಿ,ಎಂ.ಎಂ.ಮುಜಾವರ,ಅಬ್ದುಲ್ ರಶೀದಸಾಬ್ ಮಿಠಾಯಿ,ವೀರುಪಾಕ್ಷಪ್ಪ ನವೋದಯ,ಬಸವರಾಜ ಬೋವಿ, ನಾರಾಯಣಪ್ಪ ಕಲ್ಲಾಡಿ,ಡಾ. ಜ್ಞಾನಸುಂಧರ, ಬಸವರಾಜ ಮಿಠಾಯಿ, ಮೇಹಬೂಬ್ ನಾಲಬಂಧ, ಕನಕಪ್ಪ ಜಕ್ಕಲಿ,ಜಾಕೀರಹುಸೇನ್ ಅರಗಂಜಿ, ಮೈನುದ್ದಿನ ಮರಿಯಮ್ಮನಹಳ್ಳಿ, ಗೂಡು ಪಾಟೇಲ್,ಎಂ.ಡಿ.ಖಾಸಿಮ ಪರಮಾನಂದ ಯಾಳಗಿ ಸೇರಿದಂತೆ ಜಿಲ್ಲೆಯ ಪಕ್ಷದ ಮುಖಂಡರು ಹಾಗೂ ವಿವಿಧ ಮಂಡಲಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಕಾರ್ಯಕರ್ತರು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. 
Please follow and like us:
error

Leave a Reply

error: Content is protected !!