fbpx

ಕ್ರೀಯಾಶೀಲರಾಗಿ ಕಾರ್ಯನಿರ್ವಹಿಸಿದರೆ ಯಶಸ್ಸು ಖಂಡಿತ ಗೋನಾಳ.

ಕೊಪ್ಪಳ- ಆ,೧೯ ಸಂಘಟನೆ ಬೆಳೆಸಿಕೊಂಡು ಒಗ್ಗಟ್ಟು ಪ್ರದರ್ಶಿಸಿ ಬೇಕು ಬೇಡಿಕೆಗಳ ಈಡೇರಿಕೆಗಾಗಿ ಪ್ರಾಮಾಣಿಕವಾಗಿ ಹೋರಾಟಮಾಡಿ ಕ್ರಿಯಾಶೀಲರಾಗಿ ತಮ್ಮನ್ನು ತಾವು ಸಕ್ರೀಯವಾಗಿ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಕಾರ್ಯನಿರ್ವಹಿಸಿದರೆ ಯಶಸ್ಸು ಖಂಡಿತ ಎಂದು ಹಿರಿಯ ಪತ್ರಕರ್ತ ಹಾಗೂ ಕೊಪ್ಪಳಜಿಲ್ಲಾ ನಾಗರೀಕರ ವೇದಿಕೆಯ ಅಧ್ಯಕ್ಷ ಜಿ.ಎಸ್.ಗೋನಾಳ ಹೇಳಿದರು.
   ಅವರು ತಾಲೂಕಿನ ಹಲಗೇರಿ ಗ್ರಾಮದ ಪಶುವೈದ್ಯ ಕೇಂದ್ರ ಆವರಣದಲ್ಲಿ ಬುಧುವಾರ ಏರ್ಪಡಿಸಿ ಶ್ರೀಶಾಂಭವಿ ಕುರಿ ಉಣ್ಣೆ ಉತ್ಪಾದಕರ ಕ್ಷೇಮಾಭಿವೃದ್ಧಿ ಅಭಿವೃದ್ಧಿ  ನೂತನ ಸಂಘದ ನಾಮಫಲಕ ಅನಾವರಣ ಗೊಳಿಸಿ ಮಾತನಾಡುತ್ತಾ ಸಂಘದೊಳಗೆ ಅಪಾರವಾದಂತಹ ಶಕ್ತಿ ಅಡಗಿರುತ್ತದೆ ಅದರ ಸದ್ಬಳಕೆ ಮಾಡಿಕೊಂಡು ಸಂಘ ಬೆಳೆಸಿಕೊಂಡು ಹೋಗಬೇಕೆಂದು ಸಲಹೆಮಾಡಿದರು.
    ಮುಂದುವರೆದು ಮಾತನಾಡಿದ ಅವರು ಗ್ರಾಮೀಣ ಪ್ರದೇಶದಲ್ಲಿರುವ ಮಕ್ಕಳಿಗೆ ಕುರಿ ಮತ್ತು ದನಗಳ ಬಗ್ಗೆ ಮಾಹಿತಿಇದೆ ಆದರೆ ನಗರ ಪ್ರದೇಶದಲ್ಲಿ ವಾಸಿಸುವ ಮಕ್ಕಳಿಗೆ ಹಾಲು ಎಲ್ಲಿಂದ ಬರುತ್ತದೆ ಎಂದಬುವುದರ ಪರಿಕಲ್ಪನೆ ಕೂಡಾ ಇಲ್ಲದಾಗಿದೆ. ದನಕರು, ಕುರಿಗಳನ್ನು ಕಾಯುವ ಕೆಲಸಕೂಡಾ ಶ್ರೇಷ್ಠವಾದದ್ದು ಈ ದಿಸೆಯಲ್ಲಿ ಇಲ್ಲಿ ಹೊಸದಾಗಿ ಅಸ್ಥಿತ್ವಕ್ಕೆ ಬಂದಿರುವ ಈ ಸಂಘ ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡೆದುಕೊಂಡು ಸ್ವಾವಲಂಬಿಗಳಾಗಿ ಬದುಕಬೇಕು. ಹಲಗೇರಿ ಗ್ರಾಮದ ನಾಯಕ ಗುಡದಪ್ಪ ಹಲಗೇರಿ ಒಬ್ಬ ಸಾಮಾಜಿಕ ಕಳಕಳಿಯುಳ್ಳ ಕ್ರೀಯಾಶೀಲ ಹೋರಾಟಗಾರನಾಗಿದ್ದಾರೆ ಎಂದು ಅವರ ಕಾರ್ಯವೈಖರಿ ಮೆಚ್ಚುವಂತಾಗಿದೆ  ಮುಂಬರುವ ದಿನಗಳಲ್ಲಿ ಅವರಿಗೆ ರಾಜಕೀಯ ಭವಿಷ್ಯವಿದೆ ಎಂದು ಎಂದು ಹಿರಿಯ ಪತ್ರಕರ್ತ ಹಾಗೂ ಕೊಪ್ಪಳಜಿಲ್ಲಾ ನಾಗರೀಕರ ವೇದಿಕೆಯ ಅಧ್ಯಕ್ಷ ಜಿ.ಎಸ್.ಗೋನಾಳ ಹೇಳಿದರು.
  ಶ್ರೀಶಾಂಭವಿ ಕುರಿ ಉಣ್ಣೆ ಉತ್ಪಾದಕರ ಕ್ಷೇಮಾಭಿವೃದ್ಧಿ ಅಭಿವೃದ್ಧಿ  ನೂತನ ಸಂಘದ ಉದ್ಘಾಟನೆಯನ್ನು ಹಿರಿಯ ಪತ್ರಕರ್ತ ಮತ್ತು ತಿರಳ್ಗನ್ನಡ ಪ್ರತಿಷ್ಠಾನದ ಅಧ್ಯಕ್ಷ ಎಂ.ಸಾದಿಕ್ ಅಲಿ ನೆರವೇರಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಹಲಗೇರಿ ಗ್ರಾಮ ಪಂಚಾಯತಿ ಅಧ್ಯಕ್ಷ ದೇವಪ್ಪ ಓಜನಹಳ್ಳಿ ವಹಿಸಿದ್ದರು.   ಮುಖ್ಯಅತಿಥಿಗಳಾಗಿ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಯಮನೂರಪ್ಪ ಹುಳಿಹಾಳ, ಹಲಗೇರಿ ಪಶು ವೈದ್ಯಕೇಂದ್ರ ಅಧಿಕಾರಿ ಶಿವರಾಜ್ ಶೆಟ್ಟರ್, ಪಶುವೈದ್ಯೆ ಆಶಾ ಪ್ರಭಾಕರ್, ಸಂಘದ ಅಧ್ಯಕ್ಷ ಶಂಕರಪ್ಪ, ಸಿದ್ದಪ್ಪ ಅರಸಿಕೇರಿ, ಗುಡದಪ್ಪ ಬಾನಪ್ಪನವರದ, ಹನಮೇಶ ಕಾಮನೂರ, ದ್ಯಾಮಣ್ಣ ನಾಗರಳ್ಳಿ, ವೀರಪ್ಪ ಹುಲ್ಲಾನವರ್, ಕುಬೇರಪ್ಪ ಗೋರವರ್, ಬಸವರಾಜ್ ಬಾರಕೇರ, ದೇವಪ್ಪ ಗುಡ್ಲಾನೂರ್, ಹನುಮಂತಪ್ಪ ಕುರಿ, ದೇವಪ್ಪ ಹಳ್ಳಿಕೇರಿ, ವೀರಭದ್ರ ಗೌಡ ಪಾಟೀಲ್, ದೇವನ್ಣ ಒದಗನಾಳ, ಹನುಮಪ್ಪ ಅಬ್ಬಿಗೇರಿ, ಹನುಮಂತ ಹಳ್ಳಿಕೇರಿ, ಕರಿಯಪ್ಪ ಅಬ್ಬಿಗೇರಿ, ಹನುಮೇಶ ಕಾಮನೂರ್, ಹನುಮಂತಪ್ಪ ಚಿಂಚಲಿ, ಮೈಲಾರ ಗೌಡ ಗೊಂಡಬಾಳ, ಮಹಾಂತೇಶ, ಬೀಮಪ್ಪ ಅಬ್ಬಿಗೇರಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು ಇದೇ ಸಂದರ್ಭದಲ್ಲಿ ಗಣ್ಯರಿಗೆ ಸನ್ಮಾನಿಸಲಾಯಿತು. ಪಶುವೈದ್ಯ ಇಲಾಖೆಯಿಂದ ಕುರಿಗಳಿಗೆ ಔಷಧಿ ವಿತರಿಸಲಾಯಿತು.

Please follow and like us:
error

Leave a Reply

error: Content is protected !!