ಜ.೨೬ ರಂದು ಗಣರಾಜ್ಯೋತ್ಸವ ನಿಮಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು

  ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ೬೫ನೇ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಜ.೨೬ ರಂದು ಸಂಜೆ ೬.೦೦ ಗಂಟೆಗೆ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
  ಗಂಗಾವತಿಯ ಶಿವಪ್ಪ ಹುಳ್ಳಿ ಹಾಗೂ ಸಂಗಡಿಗರಿಂದ ಸುಗಮ ಸಂಗೀತ, ನಟರಾಜ ನೃತ್ಯ ಕಲಾ ಸಂಘ ಇವರಿಂದ ನೃತ್ಯ ಪ್ರದರ್ಶನ, ಗುಂಡಪ್ಪ ಚನ್ನದಾಸರ ಗಿಣಗೇರಿ ಹಾಗೂ ತಂಡದಿಂದ ತತ್ವ ಪದಗಳು, ಗೋವಿಂದರಾಜ ಬೊಮ್ಮಲಾಪೂರ ಗಂಗಾವತಿ ಇವರಿಂದ ಬಾನ್ಸುರಿ ವಾದನ ಸೇರಿದಂತೆ ಕೊಪ್ಪಳ ನಗರದ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೊಟ್ರಪ್ಪ ಅವರು ತಿಳಿಸಿದ್ದಾರೆ.
Please follow and like us:
error

Related posts

Leave a Comment