ವಿವಿಧ ಕೋರ್ಸ್ ವ್ಯಾಸಂಗಕ್ಕೆ ಆರ್ಥಿಕ ಸೌಲಭ್ಯ

 : ಅರ್ಜಿ ಆಹ್ವಾನ
ಕೊಪ್ಪಳ  ): ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಪ್ರಸಕ್ತ ಸಾಲಿಗೆ ಬಿಎಸ್‌ಸಿ ನರ್ಸಿಂಗ್ ಮತ್ತು ಜಿ.ಎನ್.ಎಂ. ಕೋರ್ಸ್ ಹಾಗೂ ಪ್ಯಾರಾ ಮೆಡಿಕಲ್ ಕೋರ್ಸುಗಳಿಗೆ ಪ್ರವೇಶ ಪಡೆದ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಆರ್ಥಿಕ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
  ಹಿಂದುಳಿದ ವರ್ಗಗಳ ಪ್ರವರ್ಗ-೧, ೨ಎ, ೩ಎ, ೩ಬಿ ವರ್ಗಕ್ಕೆ ಸೇರಿದ, ಪ್ರಸಕ್ತ ಸಾಲಿನಲ್ಲಿ ಪ್ರಥಮ ವರ್ಷದ ಬಿಎಸ್‌ಸಿ ನರ್ಸಿಂಗ್ ಮತ್ತು ಜಿ.ಎನ್.ಎಂ. ಕೋರ್ಸ್ ಹಾಗೂ ಪ್ಯಾರಾ ಮೆಡಿಕಲ್ ಕೋರ್ಸುಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಆರ್ಥಿಕ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಅಭ್ಯರ್ಥಿಗಳು ಪಿ.ಯು.ಸಿ. ಅಥವಾ ೧೨ನೇ ತರಗತಿಯಲ್ಲಿ ಪಿಸಿಬಿ ಹಾಗೂ ಇಂಗ್ಲೀಷ್ ಸೇರಿದಂತೆ ಕನಿಷ್ಟ ಶೇ. ೪೫ ಅಂಕಗಳನ್ನು ಪಡೆದಿರಬೇಕು, ಜಿ.ಎನ್.ಎಂ. ಕೋರ್ಸ್‌ಗೆ ದ್ವಿತೀಯ ಪಿ.ಯು.ಸಿ. ಅಥವಾ ೧೨ನೇ ತರಗತಿಯಲ್ಲಿ ಕನಿಷ್ಟ ಶೇ. ೩೫ ಅಂಕ ಪಡೆದಿರಬೇಕು. ವಯೋಮಿತಿ ೧೭ ರಿಂದ ೩೫ ವರ್ಷದೊಳಗಿರಬೇಕು, ವಾರ್ಷಿಕ ಆದಾಯ ೧ ಲಕ್ಷ ರೂ. ಮೀರಿರಬಾರದು.  ಪ್ಯಾರಾ ಮೆಡಿಕಲ್ ವ್ಯಾಸಂಗದ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ/ಪಿಯುಸಿ ವಿಜ್ಞಾನ ವಿಭಾಗ (ಪಿ.ಸಿ.ಎಂ) ತರಗತಿಯಲ್ಲಿ ಕನಿಷ್ಟ ಶೇ. ೪೫ ಅಂಕ ಪಡೆದಿರಬೇಕು.  ಅಭ್ಯರ್ಥಿಗಳು ನಿಗದಿತ ಅರ್ಜಿಯೊಂದಿಗೆ ದೃಢೀಕರಿಸಿದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಅಂಕಪಟ್ಟಿ, ಜಾತಿ, ಆದಾಯ ಪ್ರಮಾಣಪತ್ರ, ಖಾಯಂ ವಾಸ ದೃಢೀಕರಣ ಪತ್ರದ ಪ್ರತಿ ಲಗತ್ತಿಸಬೇಕು.  ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಸಂಸ್ಥೆಗೆ ಬೋಧನಾ ಶುಲ್ಕ ಪಾವತಿಸಿದ ಪ್ರತಿ ಲಗತ್ತಿಸಬೇಕು.  ಆರ್ಥಿಕ ಸೌಲಭ್ಯವನ್ನು ಅನುದಾನ ಲಭ್ಯತೆ ಹಾಗೂ ಮೆರಿಟ್ ಆಧಾರದ ಮೇಲೆ ನೀಡಲಾಗುವುದು.  ಅಭ್ಯರ್ಥಿಗಳು ನಿಗದಿತ ಅರ್ಜಿಯನ್ನು ಆಯಾ ಕಾಲೇಜಿನ ಪ್ರಾಚಾರ್ಯರಿಗೆ ಜ. ೧೦ ರೊಳಗಾಗಿ ಸಲ್ಲಿಸಬೇಕು.  ಸಂಬಂಧಪಟ್ಟ ಕಾಲೇಜಿನ ಪ್ರಾಚಾರ್ಯರು ಅರ್ಜಿ ಹಾಗೂ ದಾಖಲೆಗಳ ವಿವರವನ್ನು ಜಿಲ್ಲಾ ಅಧಿಕಾರಿಗಳು, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕೊಪ್ಪಳ ಇವರಿಗೆ ಜ. ೧೭ ರ ಒಳಗಾಗಿ ಸಲ್ಲಿಸಬೇಕು.  ಹೆಚ್ಚಿನ ವಿವರಗಳನ್ನು ಮೇಲ್ಕಂಡ ಕಚೇರಿಯಿಂದ ಪಡೆಯಬಹುದಾಗಿದೆ ಎಂದು ಜಿಲ್ಲಾ ಬಿ.ಸಿ.ಎಂ. ಅಧಿಕಾರಿ ಬಿ. ಕಲ್ಲೇಶ್ ಅವರು  ತಿಳಿಸಿದ್ದಾರೆ.

Please follow and like us:
error