You are here
Home > Koppal News > ಬೆಲ್ಚಿ ನಾಟಕ ಪ್ರದರ್ಶನ

ಬೆಲ್ಚಿ ನಾಟಕ ಪ್ರದರ್ಶನ

 ಬೆಂಗಳೂರಿನ ಸಂಸ ಥಿಯೇಟರ್‌ನ ಕಲಾವಿದರು ನಗರದ ಅಂಬೇಡ್ಕರ್ ಸರ್ಕಲ್ ಹಾಗೂ ಗವಿಮಠದ ಆವರಣದಲ್ಲಿ ಬೆಲ್ಚಿ ನಾಟಕ ಪ್ರದರ್ಶನ ಮಾಡಿದರು. ಸಿಜೆಕೆ ರಂಗ ಹುಡುಕಾಟ ಎನ್ನುವ ಪರಿಕಲ್ಪನೆಯ ಅಡಿಯಲ್ಲಿ ರಾಜ್ಯಾದ್ಯಂತ ಬೀದಿ ನಾಟಕಗಳನ್ನು ಪ್ರದರ್ಶನ ಮಾಡುತ್ತಿರುವ ಈ ತಂಡ ೧೯ರಂದು  ಅಂಬೇಡ್ಕರ್ ಸರ್ಕಲ್ ಹಾಗೂ ಗವಿಮಠದ ಆವರಣದಲ್ಲಿ  ನಾಟಕ ಪ್ರದರ್ಶನ ಮಾಡಿತು. ನಾಟಕದ ಮೂಲ ರಚನೆ ಮತ್ತು ನಿರ್ದೇಶನ ಸಿಜಿಕೆ ಮರು ನಿರ್ದೆಶನ ಕೃಷ್ಣಕುಮಾರ್ ಯಾದವ್‌ವರದು.
ಅಂಬೇಡ್ಕರ್ ಸರ್ಕಲ್‌ನಲ್ಲಿ ತಮಟೆ ಬಾರಿಸುವುದರ ಮೂಲಕ ನಾಟಕಕ್ಕೆ ನಗರಸಭೆ ಸದಸ್ಯರಾದ ಮುತ್ತುರಾಜ್ ಕುಷ್ಟಗಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಸರಿತಾ ಸುಧಾಕರ ಹೊಸಮನಿ, ಹಿರಿಯ ಸಾಹಿತಿಗಳಾದ ಎ.ಎಂ.ಮದರಿ, ಬಸವರಾಜ ಶೀಲವಂತರ,ರಮೇಶ ಬೆಲ್ಲದ, ಶಿವಾನಂದ ಹೊದ್ಲೂರ, ಹೆಚ್.ವಿ.ರಾಜಾಬಕ್ಷಿ, ಮೈಲಪ್ಪ ಬಿಸರಳ್ಳಿ, ಎಸ್.ಎ.ಗಫಾರ್, ಶಾಂತಾದೇವಿ ಹಿರೇಮಠ, ಅನಸೂಯಾ ಜಾಗಿರದಾರ,ಮಹೇಶ ಬಳ್ಳಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಗವಿಮಠದ ಆವರಣದಲ್ಲಿ ನಡೆದ ಪ್ರದರ್ಶನಕ್ಕೆ ಮಾನಪ್ಪ ಬೆಲ್ಲದ ಚಾಲನೆ ನೀಡಿದರು. ಗವಿಮಠದ ಶ್ರೀಗಳು ಹಾಗೂ ಹಲವಾರು  ಆಸಕ್ತರು ನೆರೆದಿದ್ದರು. ನಾಟಕ ಜನಮೆಚ್ಚುಗೆ ಗಳಿಸಿತು. ಸಿರಾಜ್ ಬಿಸರಳ್ಳಿ ಕಾರ‍್ಯಕ್ರಮ ನಿರೂಪಿಸಿದರು. ನಾಟಕ ಪ್ರದರ್ಶನಕ್ಕೆ ಕನ್ನಡನೆಟ್ ಡಾಟ್ ಕಾಂ ಕವಿಸಮೂಹ ಬಳಗ ಹಾಗೂ ಶ್ರೀ ಗವಿಮಠ ಸಹಕಾರ ನೀಡಿತ್ತು.  ( ಫೋಟೋ : ನಾಗರಾಜ್ ಬೆಲ್ಲದ್)
          

Leave a Reply

Top