ಬಾಲಕಾರ್ಮಿಕರ ಪತ್ತೆ

ಕೊಪ್ಪಳ, ಜೂ, ೦೪ : ಇತ್ತೀಚೆಗೆ ಸರ್ವೋದಯ ಸಂಸ್ಥೆಯ ಕಾರ್ಯಕರ್ತರು ಬಾಲಕಾರ್ಮಿಕ ಇಲಾಖೆ ಮತ್ತು ಮಕ್ಕಳ ಕಲ್ಯಾಣ ಸಮಿತಿ ಹಗೂ ಯುನಿಸೇಫ್ ಕೊಪ್ಪಳರವರು ಕರ್ನಾಟಕ ಪೌಲ್ಟ್ರಿ ಫಾರಂ ಕಿಡದಾಳದಲ್ಲಿ ದಾಳಿ ನಡೆಸಿ ಬಾಲಕಾರ್ಮಿಕರಿಗೆ ಸುಮಾರು ತಿಂಗಳಿಂದ ದುಡಿಯುತ್ತಿದ್ದು. ೧೦ ಬಾಲಕಿಯರು ೫ ಮತ್ತು ೬ನೇ ತರಗತಿಯಲ್ಲಿ ಓದಿ ಶಾಲೆಯನ್ನು ಬಿಟ್ಟಿರುತ್ತಾರೆ ಇವರು ಕೊಪ್ಪಳ ತಾಲೂಕಿನ ಹನಮನಹಳ್ಳಿ , ಗಂಗಾವತಿ ತಾಲೂಕಿನ ಮುಕ್ಕುಂಬಿ, ಗದಗ ಜಿಲ್ಲೆಯ ಮುಂಡರಿಗಿ ತಾಲೂಕಿನ ಒಂದು ಗ್ರಾಮದವರಾಗಿರುತ್ತಾರೆ. ಮತ್ತು ಒಬ್ಬ ಬಾಲಕನನ್ನು ರಕ್ಷಣೆ ಮಾಡಿ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಅಗತ್ಯ ಕ್ರಮಕ್ಕಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಕೊಪ್ಪಳರವರ ವಶಕ್ಕೆ ನೀಡಿದ್ದು ಇರುತ್ತದೆ. ದಿನಾಂಕ ೩೧-೦೫-೧೨ ರಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸಭೆಯಲ್ಲಿ ಪಾಲಕರಿಗೆ ಮತ್ತು ಮಕ್ಕಳಿಗೆ ಬಾಲಕಾರ್ಮಿಕರಿಗೆ ದುಡಿಯುವದರಿಂದ ಮುಂದಿನ ಭವಿಷ್ಯ ಹೇಗಿರುತ್ತದೆ ಎಂದು ತಿಳುವಳಿಕೆ ನೀಡಿ ಮೌಲ್ಯಮಾಪನ ಮಾಡಲಾಯಿತು. ಚರ್ಚೆಯಲ್ಲಿ ಪಾಲಕರಿಂದ ಮುಚ್ಚಳಿಕೆ ಪತ್ರವನ್ನು ಬರೆಸಿಕೊಂಡು ಮಕ್ಕಳನ್ನು ಪೋಷಕರೊಂದಿಗೆ ಬಿಡುಗಡೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರಾಜಶೇಖರ  ಮೇಲ್ವಿಚಾರಕಿ ಮಂದಾಕಿನಿ ಕುಲಕರ್ಣಿ, ನ್ಯಾಯವಾದಿ ನಿಲೋಫರ್ ರಾಂಪುರಿ, ಸುಮಲತಾ ಆಕಳವಾಡಿ, ಗೃಹಮಾತೆ ನಾಗಮ್ಮ, ಕಾರ್ಯಾಲಯ ಸಹಾಯಕ ಮೇಹಬೂಬ ಮನಿಯಾರಿ  ಉಪಸ್ಥಿತರಿದ್ದರು.
Please follow and like us:
error