ಹಾಲಪ್ಪ ಆಚಾರ ಅವರನ್ನು ಶಾಸಕರನ್ನಾಗಿಸುವುದೆ ನನ್ನ ಗುರಿ- ಕುಡಗುಂಟಿ.

ಕೊಪ್ಪಳ ೨೦೧೮ ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿ.ಜೆಪಿಯ ರಾಜ್ಯ ಉಪಾಧ್ಯಕ್ಷ ಹಾಲಪ್ಪ ಆಚಾರ ಅವರನ್ನು ಶಾಸಕರನ್ನಾಗಿಸಿ ಆಮೂಲಕ ಕ್ಷೇತ್ರದಲ್ಲಿ ದುರಾಡಳಿತ ನಡೆಸುತತಿರುವ ಶಸಕ ಬಸವರಾಜ ರಾಯರಡ್ಡಿ ಶಾಸಕತ್ವವನ್ನು ಕೊನೆಗಾಣಿಸುವುದೆ ನನ್ನ ಮೂಲ ಗುರಿ ಎಂದು ಕುಕನೂರು ಜಿ. ಪಂ ಸದಸ್ಯ ಈರಪ್ಪ ಕುಡಗುಂಟಿ ಹೇಳಿದರು.
ಅವರು ಯಲಬುರ್ಗಾ ತಾಲೂಕಿನ ಚಿಕ್ಕ ಮ್ಯಾಗೇರಿ ಗ್ರಾಮದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡು ಬಳಿಕ ಮಾತನಾಡಿದರು. ಇಂದು ನನ್ನ ರಾಜಕೀಯ ಜೀವನದಲ್ಲಿ ಕಳೆದ ೧೫ ವರ್ಷಗಳಿಂದ ಈಗಿನ ಶಾಸಕ ಬಸವರಾಜ ರಾಯರ್‍ಡಿಯವರ ಜೊತೆಗೂಡಿ ಕಳೆದೆ ಆದರೆ ಬಸವರಾಜ ರಾಯರಡ್ಡಿಯವರು ತಮ್ಮ ಆಡಳಿತದಲ್ಲಿ ನಮ್ಮನ್ನು ಸ್ವತಂತ್ರರನ್ನಾಗಿ ಬಿಡದೇ ನಮ್ಮ ಜಿ. ಪಂ ಅನುದಾನಕ್ಕೂ ಸಹ ಕೊಕ್ಕೆಹಾಕಿ ಆಮೂಲಕ ಕೀಳುಮಟ್ಟದ ರಾಜಕಾರಣ ಮಾಡಿದರು. ನಾನು ಜಿ. ಪಂ ಸದಸ್ಯನಾಗಿ ಹಲವಾರು ಅಧಿಕಾರ ಅವಧಿಯಲ್ಲಿ ಜನಪರ ಸೇವೆ ಮಾಡಲು ಯತ್ನಿಸಿದರು ಸಹ ರಾಯರೆಡ್ಡಿಯವರು ಅದಕ್ಕೆ ಅಡ್ಡಗಾಲು ಹಾಕಿದರು ಹಿಗಾಗಿ  ನಾವು ನಾವು ಅಧಿಕಾರು ವಿದ್ದರೂ ಸಹ ಯಾವುದೇ ಅಭಿವೃದ್ದಿ ಕೆಲಸ ಮಾಡಲು ಸಾಧ್ಯವಿಲ್ಲ ಅದರೂ ಸಹ ನಮ್ಮ ಅಧಿಕಾರಿ ವ್ಯಾಪ್ತಿಯಲ್ಲಿ ಹಲವಾರು ಅಭಿವೃದ್ದಿ ಕೆಲಸಗಳನ್ನು ಕೈಗೊಂಡಿರುವ ತೃಪ್ತಿ ನನಗೆ ಇದೆ ಎಂದು
ರಾಯರೆಡ್ಡಿ ಅವನತಿಗೆ ಕ್ಷಣಗಣೆನೆ : ಯಲಬುರ್ಗಾ Pಕ್ಷೇತ್ರದಲ್ಲಿ ಸ್ಥಳಿಯ ಶಾಸಕ ಬಸವರಾಜ ರಾಯರೆಡ್ಡಿಯವರು ಸರ್ವಾಧಿಖಾರಿ ದೊರಣೆಯನ್ನು ಅನುಸರಿಸುತ್ತಿದ್ದು ಹಿಗಾಗಿ ಕ್ಷೇತ್ರದ ಜನತೆ ರಾಯರೆಡ್ಡಿಯಯವರಿಗೆ ತಕ್ಕ ಪಾಟ ಕಲಿಸಲು ಕಂಕಣ ಬದ್ದವಾಗಿದ್ದು ಮುಂಬರುವ ದಿನಮಾನಗಳಲ್ಲಿ ಈ ಕ್ಷೇತ್ರದಲ್ಲಿ ಬಸವರಾಜ ರಾಯರೆಡ್ಡಿ ಜನ ವಿರೋಧಿ ನೀತಿಗಳ ವಿರುದ್ದ ಪ್ರಜಾ ಸತ್ತಾತ್ಮಕ ಹೋರಾಟಗಳನ್ನು ಹಮ್ಮಿಕೊಳ್ಳುವ ಮೂಲಕ ೨೦೧೮ ರ ಚುನಾವಣೆಯಲ್ಲಿ ಶಾಸಕರಿಗೆ ತಕ್ಕ ಪಾಠಕಲಿಸಿ ಆ ಮೂಲಕ ಹಾಲಪ್ಪ ಆಚಾರ ರವರನ್ನು ಶಾಸಕರನ್ನಾಗಿ ಮಾಡುವುದೆ ನನ್ನ ಮೂಲಗುರಿ ಎಂದು ಜಿ.ಪಂ ಸದಸ್ಯ ಈರಪ್ಪ ಕುಡಗುಂಟಿ ಹೇಳಿದರು ಈ ಸಂದರ್ಭದಲ್ಲಿ ವಿಪ ಸದಸ್ಯ ಹಾಲಪ್ಪ ಆಚರ್ ರವರು ಈರಪ್ಪ ಕುಟಗುಂಟಿಯವರನ್ನು ಆತ್ಮೀಯವಾಗಿ ಪಕ್ಷಕ್ಕೆ ಬರಮಾಡಿಕೊಂಡರು ಈ ಸಂದರ್ಭದಲ್ಲಿ ಬಿಜೆಪಿಯ ಯುವ ಮುಖಂಡ ನವೀನ್‌ಕುಮಾರ ಈ ಗುಳಗಣ್ಣನವರ್ ತಾಲೂಕ ಬಿಜೆಪಿ ಅಧ್ಯಕ್ಷ ಶಂಕ್ರಪ್ಪ ಪಳೂಟಿ ಯುವ ಮುಖಂಡರಾದ ಅಯ್ಯನಗೌಡ್ರು ಕೆಂಚಮ್ಮನವರ, ರಾಜು ಪಲ್ಲೆದ್, ರುದ್ರಪ್ಪ ನಡುವಲಮನಿ, ಕೊಟ್ರಪ್ಪ ತೋಟದ ಮತ್ತು ಇನ್ನೂ ಮುಂತಾದವರು ಉಪಸ್ಥಿತರಿದ್ದರು.
Please follow and like us:
error