೨೯ ಅಭ್ಯರ್ಥಿಗಳಿಂದ ೪೫ ನಾಮಪತ್ರ ಸಲ್ಲಿಕೆ

 ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸ್ಪರ್ಧೆ ಬಯಸಿ ಏ. ೧೫ ರ ಸೋಮವಾರದಂದು ಕೊಪ್ಪಳ ಜಿಲ್ಲಾ ವ್ಯಾಪ್ತಿಯ ವಿವಿಧ ವಿಧಾನಸಭಾ ಕ್ಷೇತ್ರಗಳ ಒಟ್ಟು ೨೯ ಅಭ್ಯರ್ಥಿಗಳಿಂದ ೪೫ ನಾಮಪತ್ರಗಳು ಸಲ್ಲಿಕೆಯಾಗಿವೆ.
  ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಸೋಮವಾರದಂದು ನಾಲ್ವರು ಅಭ್ಯರ್ಥಿಗಳಿಂದ ಏಳು ನಾಮಪತ್ರ ಸಲ್ಲಿಕೆಯಾಗಿವೆ.  ಸಂಗಣ್ಣ ಕರಡಿ ಅವರು ಬಿಜೆಪಿ ಪಕ್ಷದಿಂದ ಒಂದು ನಾಮಪತ್ರ, ಪ್ರದೀಪ ವಿರೂಪಾಕ್ಷಗೌಡ ಪಾಟೀಲ್ ಅವರು ಜೆಡಿಎಸ್ ಪಕ್ಷದಿಂದ ಎರಡು ನಾಮಪತ್ರ, ಎನ್. ನಾಗರಾಜ್ ಅವರು ಬಿ.ಎಸ್.ಆರ್. ಪಕ್ಷದಿಂದ ಒಂದು ನಾಮಪತ್ರ ಹಾಗೂ ರಾಘವೇಂದ್ರ ಕೆ. ಹಿಟ್ನಾಳ್ ಅವರು ಕಾಂಗ್ರೆಸ್ ಪಕ್ಷದಿಂದ ಎರಡು ನಾಮಪತ್ರ ಸಲ್ಲಿಸಿದ್ದಾರೆ.
  ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಎಂಟು ಅಭ್ಯರ್ಥಿಗಳಿಂದ ಹತ್ತು ನಾಮಪತ್ರ ಸಲ್ಲಿಸಲಾಗಿದೆ.  ಕೆ. ಶರಣಪ್ಪ- ಜೆ.ಡಿ.ಎಸ್ (೧), ದೊಡ್ಡನಗೌಡ ಪಾಟೀಲ್- ಬಿ.ಜೆ.ಪಿ (೨), ಶಿವಪುತ್ರಪ್ಪ- ಬಿ.ಎಸ್.ಪಿ. (೧), ಅಮರೇಗೌಡ ಪಾಟೀಲ್ ಬಯ್ಯಾಪುರ- ಕಾಂಗ್ರೆಸ್ (೨), ರಾಜಶೇಖರಗೌಡ ಗೋನಾಳ- ಬಿ.ಎಸ್.ಆರ್. (೧), ಹನುಮಂತಪ್ಪ ನಾಗಪ್ಪ- ಪಕ್ಷೇತರ (೧), ಫಕೀರಪ್ಪ ಚಳಗೇರಿ- ಕೆ.ಜೆ.ಪಿ (೧) ಮತ್ತು ಮಂಜುಳಾ ಗಂಡ ಮರಿಯಪ್ಪ- ಪಕ್ಷೇತರ (೧) ನಾಮಪತ್ರ ಸಲ್ಲಿಕೆಯಾಗಿದೆ.
  ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಐವರು ಅಭ್ಯರ್ಥಿಗಳಿಂದ ಹನ್ನೊಂದು ನಾಮಪತ್ರ ಸಲ್ಲಿಕೆಯಾಗಿವೆ.  ಹಾಲಪ್ಪ ಬಸಪ್ಪ ಆಚಾರ್- ಬಿ.ಜೆ.ಪಿ (೨), ಚನ್ನಬಸನಗೌಡ ಪೋ. ಪಾಟೀಲ್- ಕೆ.ಜೆ.ಪಿ (೨), ನವೀನ್ ಕುಮಾರ್ ಗುಳಗಣ್ಣವರ್- ಬಿ.ಎಸ್.ಆರ್. (೧), ಬಸವರಾಜ ರಾಯರೆಡ್ಡಿ- ಕಾಂಗ್ರೆಸ್ (೪), ನೀಲಾಂಬಿಕಾ ಪೊಲೀಸ್ ಪಾಟೀಲ್- ಕೆ.ಜೆ.ಪಿ (೨) ನಾಮಪತ್ರ ಸಲ್ಲಿಕೆಯಾಗಿದೆ.
  ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಐವರು ಅಭ್ಯರ್ಥಿಗಳಿಂದ ಏಳು ನಾಮಪತ್ರ ಸಲ್ಲಿಕೆಯಾಗಿವೆ.  ಯಮನೂರಪ್ಪ- ಪಕ್ಷೇತರ (೨), ಪರಣ್ಣ ಮುನವಳ್ಳಿ- ಬಿಜೆಪಿ (೧), ಹೆಚ್.ಆರ್. ಶ್ರೀನಾಥ- ಕಾಂಗ್ರೆಸ್ (೨), ಇಕ್ಬಾಲ್ ಅನ್ಸಾರಿ- ಜೆ.ಡಿ.ಎಸ್. (೧) ಮತ್ತು ಪಂಪನಗೌಡ ಪೋ. ಪಾಟೀಲ್- ಬಿ.ಎಸ್.ಆರ್. (೧) ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದಾರೆ.
  ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಏಳು ಅಭ್ಯರ್ಥಿಗಳಿಂದ ಹತ್ತು ನಾಮಪತ್ರ ಸಲ್ಲಿಕೆಯಾಗಿವೆ.  ತಿಪ್ಪಣ್ಣ ವಿ.- ಪಕ್ಷೇತರ (೧), ಪ್ರಕಾಶ್ ರಾಠೋಡ್- ಜೆ.ಡಿ.ಎಸ್. (೧), ಬಸವರಾಜ ಧಡೇಸೂಗೂರು- ಕೆ.ಜೆ.ಪಿ. (೧), ಶಿವರಾಜ್ ತಂಗಡಗಿ- ಕಾಂಗ್ರೆಸ್ (೪), ರಮೇಶ್ ಕೋಟಿ- ಪಕ್ಷೇತರ (೧), ಪಾಲಾಕ್ಷಯ್ಯ ಹಿರೇಮಠ- ಪಕ್ಷೇತರ (೧), ಮುಕುಂದರಾವ್ ಭವಾನಿಮಠ- ಬಿ.ಎಸ್.ಆರ್. (೧) ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ  ತಿಳಿಸಿದೆ.

Related posts

Leave a Comment