You are here
Home > Koppal News > ಡಿ. ೧೩ ರಂದು ಈಶಾನ್ಯದ ಐಸಿರಿ ಸರಣಿಯ ೧೩ ನೇ ಸಂಚಿಕೆ ಪ್ರಸಾರ.

ಡಿ. ೧೩ ರಂದು ಈಶಾನ್ಯದ ಐಸಿರಿ ಸರಣಿಯ ೧೩ ನೇ ಸಂಚಿಕೆ ಪ್ರಸಾರ.

ಕೊಪ್ಪಳ
ಡಿ. ೧೧ (ಕ ವಾ) ಹೈದ್ರಾಬಾದ್ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ,
ಇಲ್ಲಿನ ಕಲೆ, ಸಂಸ್ಕೃತಿ, ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳು, ಇಲ್ಲಿನ ಪ್ರತಿಭೆಗಳು,
ಸಾಧಕರು ಮುಂತಾದ ಸಂಗತಿಗಳನ್ನು ಪರಿಚಯಿಸುವ ಈಶಾನ್ಯದ ಐಸಿರಿ ಸರಣಿಯ ೧೩ ನೇ ಸಂಚಿಕೆ ಡಿ.
೧೩ ರಂದು ಬೆಳಿಗ್ಗೆ ೧೦ ಗಂಟೆಗೆ ಹೊಸಪೇಟೆ, ರಾಯಚೂರು ಹಾಗೂ ಕಲಬುರಗಿ ಆಕಾಶವಾಣಿ
ಕೇಂದ್ರಗಳಿಂದ ಏಕಕಾಲಕ್ಕೆ ಪ್ರಸಾರವಾಗಲಿದೆ.
        ೧೩ನೇ ಸಂಚಿಕೆಯಲ್ಲಿ ಮೂಡಿ
ಬರಲಿರುವ ಕಾರ್ಯಕ್ರಮದ ವಿವರಗಳು ಹೀಗಿವೆ.  ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃಧ್ಧಿ
ಮಂಡಳಿಯ ಸ್ಥಾಪನೆಯ ಇತಿಹಾಸ, ಸಾಧನೆಗಳ ಕುರಿತು ಪರಿಚಯ.  ಗ್ರಾಮ ಪಂಚಾಯಿತಿಗಳಲ್ಲಿ
ಗ್ರಂಥಾಯಗಳ ಬಲವರ್ಧನೆ ಕುರಿತು ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕರಾಗಿರುವ ಎನ್.ಬಿ.
ಪಾಟೀಲ ಅವರಿಂದ ಮಾಹಿತಿ.  ನಿವೃತ್ತ ನ್ಯಾಯ ಮೂರ್ತಿಗಳಾಗಿರುವ ಎಂ.ಬಿ. ಬಿರಾದರ ಅವರಿಂದ
ಆಸ್ತಿಯ ಹಕ್ಕಿನ ಕುರಿತು ತಿಳುವಳಿಕೆ.  ಆಳಂದ ತಾಲೂಕಿನ ಗುಂಜ ಬಬಲಾದ ಗ್ರಾಮದ
ಅಕ್ಕಮಹಾದೇವಿ ಮಹಿಳಾ ಸ್ವ -ಸಹಾಯ ಸಂಘದ ಮಹಿಳೆಯರ ಸಾಧನೆ.  ಮೂಗಿನಿಂದ ಕೊಳಲು ನುಡಿಸುವ
ಆಳಂದ ತಾಲೂಕ ಬೆಣ್ಣೆ ಶಿರೂರ ಗ್ರಾಮದ ಸಿದ್ದಣ ಕುಂಬಾರ ಅವರ ಪ್ರತಿಭೆಯ ಪರಿಚಯ. 
ಚಿತ್ತಾಪುರ ತಾಲುಕಿನ ನಾಗಾವಿ ಯಲ್ಲಮ್ಮ ದೇವಿ ದರ್ಶನ ಪ್ರಸಾರವಾಗಲಿದೆ.  ಇವುಗಳ
ಜೊತೆಗೆ. ಕಳೆದ ವಾರದಲ್ಲಿ ಈ ಭಾಗದ ಆರು ಜಿಲ್ಲೆಗಳಲ್ಲಿ ಕೈಗೊಳ್ಳಲಾದ ಅಭಿವೃದ್ಧಿ
ಕಾರ್‍ಯಕ್ರಮಗಳು, ಘಟಿಸಿದ ಪ್ರಮುಖ ಸಂಗತಿಗಳನ್ನು ಒಳಗೊಂಡ ‘ವಾರದ ವರದಿ’, ಸಾಮಾಜಿಕ
ವಿಷಯಗಳ ಕುರಿತು ಜಿಂಗಲ್, ನುಡಿಮುತ್ತು , ನಗೆಹನಿ ಮೂಡಿ ಬರಲಿವೆ.  ಸರಣಿಯ ನಿರೂಪಣಾ
ಸಾಹಿತ್ಯ ಹಾಗೂ ನಿರ್ಮಾಣದ ಜವಾಬ್ದಾರಿಯನ್ನು ಸೋಮಶೇಖರ ಎಸ್. ರುಳಿಯವರು
ವಹಿಸಿಕೊಂಡಿದ್ದಾರೆ.

 

Leave a Reply

Top