ಕೊಪ್ಪಳ ನಗರಕ್ಕೆ ಬೈಪಾಸ್ ಇಲ್ಲ

ಕೊಪ್ಪಳ ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ೬೩ ರಲ್ಲಿ ಭಾರಿ ಸರಕು ವಾಹನಗಳ ಸಂಚಾರವನ್ನು ನಿಯಂತ್ರಿಸಲು ಬೈಪಾಸ್ ರಸ್ತೆ ನಿರ್ಮಾಣದ ಬಗ್ಗೆ ಈ ಹಿಂದೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸರ್ಕಾರ ಈ ಕುರಿತು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಸಂಖ್ಯೆ, ಸಂಚಾರ ದಟ್ಟಣೆ ಅಂಶಗಳನ್ನು ಪರಿಗಣಿಸಿ, ಈ ದಾರಿಯಲ್ಲಿನ ಸಂಚಾರ ದಟ್ಟಣೆ ಬೈಪಾಸ್ ರಸ್ತೆ ನಿರ್ಮಿಸುವಷ್ಟು ಕಂಡುಬಂದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ. ಸದ್ಯ ಅದಿರು ರಫ್ತು ಹಾಗೂ ಗಣಿಗಾರಿಕೆ ನಿಷೇಧಗೊಂಡಿರುವುದರಿಂದ ಸಂಚಾರ ದಟ್ಟಣೆ ಇಲ್ಲ. ಬೈಪಾಸ್ ರಸ್ತೆ ನಿರ್ಮಾಣ ಮಾಡಿ, ಟೋಲ್ ಸಂಗ್ರಹ ಮಾಡಿಕೊಳ್ಳಲು ಸಹ ಯಾವುದೇ ಬೃಹತ್ ಕಂಪನಿಗಳು ಆಸಕ್ತಿ ತಳೆದಿಲ್ಲವಾದ್ದರಿಂದ ಬೈಪಾಸ್ ರಸ್ತೆ ನಿರ್ಮಾಣ ಕಾರ್ಯಕ್ಕೆ ಅನುಮೋದನೆ ದೊರೆತಿಲ್ಲ. ನಗರದಲ್ಲಿ ಸದ್ಯ ರಾಷ್ಟ್ರೀಯ ಹೆದ್ದಾರಿಯನ್ನು ಅಗಲೀಕರಣಗೊಳಿಸಲಾಗಿದ್ದು, ಡ್ರೈನೇಜ್ ಕೆಲಸ ಭರದಿಂದ ಸಾಗಿದೆ. ಈ ಕಾಮಗಾರಿ ಮುಗಿದ ಕೂಡಲೆ, ಈ ದಾರಿಯಲ್ಲಿನ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಲಾಗುವುದು ಎಂದರು.
ರಾ.ಹೆ. ೧೩ ರಲ್ಲಿ ಅಪಘಾತ: ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-೧೩ ರಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ಇದನ್ನು ನಿಯಂತ್ರಿಸಲು, ಈ ದಾರಿಯಲ್ಲಿ ಭಾರಿ ವಾಹನಗಳು ಹಾಗೂ ಟಿಪ್ಪರ್‌ಗಳಿಗೆ ವೇಗಮಿತಿ ಕಡ್ಡಾಯಗೊಳಿಸುವುದು ಅನಿವಾರ್ಯ. ಈ ದಾರಿಯಲ್ಲಿ ಗರಿಷ್ಟ ೪೦ ಕಿ.ಮೀ. ವೇಗ ಮಿತಿಯನ್ನು ವಿಧಿಸಬೇಕು. ಅತಿವೇಗ ಹಾಗೂ ಮದ್ಯಪಾನ ಮಾಡಿಕೊಂಡು ವಾಹನ ಚಾಲನೆ ನಡೆಸುವ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ನೂತನವಾಗಿ ಜಿಲ್ಲೆಗೆ ಬಂದಿರುವ ಇಂಟರ್‌ಸೆಪ್ಟರ್ ವಾಹನದ ನೆರವು ಪಡೆದು ಅತಿವೇಗದಲ್ಲಿ ಭಾರಿ ವಾಹನಗಳನ್ನು ಚಾಲನೆ ಮಾಡುವುದನ್ನು ನಿಯಂತ್ರಿಸುವಂತೆ ಸೂಚನೆ ನೀಡಿದರು.

Leave a Reply