ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ವಿತರಣೆಗೆ ಅಮ್ಜದ್ ಪಟೇಲ್‌ರಿಂದ ಚಾಲನೆ

ಕೊಪ್ಪಳ,ಡಿ.೧೩: ನಗರದ ೩ನೇ ವಾರ್ಡ್‌ನ ನಿರ್ಮಿತಿ ಕೇಂದ್ರದ ಬಳಿಯಿರುವ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶ್ರೀ ವೀರ ಜೀಜಾಮಾತಾ ಸಂಸ್ಥೆ ವತಿಯಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ೬೦ ವರ್ಷ ಮೆಲ್ಪಟ್ಟ ಹಿರಿಯ ನಾಗರಿಕರಿಗೆ ಸರ್ಕಾರದ ಸಹಾಯ ಸೌಕರ್ಯ, ಸೌಲಭ್ಯ ಪಡೆಯುವ ಗುರುತಿನ ಚೀಟಿ ಪಡೆಯುವ ಕಾರ್ಯಕ್ರಮಕ್ಕೆ ನಗರಸಭೆ ಉಪಾಧ್ಯಕ್ಷ ಅಮ್ಜದ್ ಪಟೇಲ್‌ರವರು ಚಾಲನೆ ನೀಡಿದರು. 
ಹಿರಿಯ ನಾಗರಿಕರಿಗೆ ಗುರುತಿನ ಕಾಡ್  ವಿತರಣೆ ಮಾಡಿ ಮಾತನಾಡಿದ ಅವರು, ಹಿರಿಯ ನಾಗರಿಕರೆಲ್ಲರಿಗೆ ನಮ್ಮ ರಾಜ್ಯ ಮತ್ತು ಕೇಂದ್ರ ಸರ್ಕಾರದ ವತಿಯಿಂದ ನೀಡಿದ ವಿವಿಧ ಸೌಲಭ್ಯಗಳನ್ನು ಪಡೆಯಲು ಅವರಿಗೆ ಗುರುತಿನ ಕಾರ್ಡ ವಿತರಣೆ ಮಾಡುವುದರ ಜೊತೆಗೆ ಇಲಾಖೆಯ ಅಧಿಕಾರಿಗಳು ಮತ್ತು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಹೇಳಿದ ಅವರು ಹಿರಿಯ ನಾಗರಿಕರುಗಳಿಗೆ ಸರ್ಕಾರದ ಸೌಲಭ್ಯವನ್ನು ಅವರಿಗೆ ಮುಟ್ಟಿಸುವ ಕೆಲಸ ಪ್ರತಿಯೊಬ್ಬ ಮೇಲೆ ಇದೆ ಅವರವರು ತಮ್ಮ ಪಾಲಿನ ಜವ್ಬಾದಾರಿ ನಿಭಾಯಿಸಬೇಕೆಂದು ನಗರಸಭೆ ಉಪಾಧ್ಯಕ್ಷ ಅಮ್ಜದ್ ಪಟೇಲ್‌ರವರು ಸಲಹೆ ಮಾಡಿದರು. 
                  ಈ ಸಂದರ್ಭದಲ್ಲಿ ಸಂಸ್ಥೆಯ ಪ್ರತಿನಿಧಿಗಳು ಶಾಲೆಯ ಸಹ ಶಿಕ್ಷಕರು ಒಣಿಯ ಹಿರಿಯ ನಾಗರಿಕರು ಪಂಚ ಕಮಿಟಿಯ ಮುಖ್ಯಸ್ಥರು ವಿವಿಧ ಸಂಘಟನೆಯ ಪದಾಧಿಕಾರಿಗಳು ಸೇರಿದಂತೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು. 

Leave a Reply